ಮಲೇಬೆನ್ನೂರು, ಡಿ.24- ರೈತರು ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಗಳನ್ನು ಮತ್ತು ಯಂತ್ರೋಪಕರ ಣಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆ ಯಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಅವರು, ಮಂಗಳವಾರ ಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಲಾಯದ ವರದಿ ಅನುಸಾರ ರೈತರು ತಮ್ಮ ಜಮೀನಿನಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದೆ.
ಮಣ್ಣಿನ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ರೈತರು ಭೂಮಿಯ ಫಲವತ್ತತೆ ಹೆಚ್ಚಿಸಲು ಗಮನ ಹರಿಸಿದರೆ, ಉತ್ತಮ ಬೆಳೆಯಬಹುದೆಂದ ಹರೀಶ್ ಅವರು, ರೈತರಿಗೆ ಸಮರ್ಪಕ ನೀರು ಮತ್ತು ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಅವರು ಏನ್ನನ್ನೂ ಕೇಳುವುದಿಲ್ಲ ಎಂದು ಬೇರೆ ರೈತರಿಗೆ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಪ್ರದೀಪ್ ಅವರು, ಭತ್ತ ಮತ್ತು ಅಡಿಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ವೇಳೆ 2024-25ರ ಸಾಲಿನ ತಾಲ್ಲೂಕು ಮಟ್ಟದ ಆತ್ಮ ಪ್ರಶಸ್ತಿಯನ್ನು ಪ್ರಗತಿಪರ ರೈತರಾದ ಕೆ.ಬೇವಿನಹಳ್ಳಿಯ ಬಿ.ಕೆ.ರಾಜಪ್ಪ, ನಂದಿತಾವರೆಯ ಎನ್.ಪಿ.ಬಸವಲಿಂಗಪ್ಪ, ನಿಟ್ಟೂರಿನ ಬಿ.ಜಿ.ಧನುಂಜಯ, ಕೊಕ್ಕನೂರಿನ ರುದ್ರೇಗೌಡ, ಕೆಂಚನ ಹಳ್ಳಿಯ ಕೆ.ಹೆಚ್.ಪರಮೇಶ್ವರಪ್ಪ ಮತ್ತು 2023-24ನೇ ಸಾಲಿನ ತಾ. ಮಟ್ಟದ ಪ್ರಶಸ್ತಿಯನ್ನು ಹೊಟ್ಟಿ ಗಾನಹಳ್ಳಿಯ ಶಾಂತವೀರಪ್ಪ, ಸತ್ಯ ನಾರಾಯಣ ಕ್ಯಾಂಪಿನ ಶ್ರೀಮತಿ ಲಕ್ಷ್ಮಿ ಶ್ರೀನಿವಾಸ್, ಕೆಂಚನ ಹಳ್ಳಿಯ ಕೆ.ಜಿ.ಶಿವಪ್ಪ, ಜಿ.ಟಿ.ಕಟ್ಟೆಯ ಎಸ್.ಜಿ.ಮಲ್ಲಪ್ಪ, ಯಲವಟ್ಟಿಯ ಜಿ.ಹೆಚ್.ಮಂಜಾನಾಯ್ಕ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಹಿಂಡಸಘಟ್ಟದ ರಾಮನಗೌಡ, ಹೊಟ್ಟಿಗಾನಹಳ್ಳಿಯ ಶಾಂತಮ್ಮ ಬಸಪ್ಪ ಅವರುಗಳಿಗೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ತೋಗರಿ ಬೆಳೆಯಲ್ಲಿ ನಾಟಿ ಪದ್ಧತಿ ಮಾಡಿದ ಕೊಪ್ಪದ ನಾಗರಾಜ್ ಮತ್ತು ಭಕ್ತ ಬೆಳೆದ ಹಾಲಿವಾಣದ ಬಾಬಣ್ಣ ಅವರನ್ನೂ ಈ ವೇಳೆ ಸನ್ಮಾನಿಸಲಾಯಿತು.
ಹಾಲಿವಾಣ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿದೇವಿ, ಎಸ್.ಜಿ.ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಅವರು, ಪ್ರಾಸ್ತಾವಿಕವಾಗಿ ಮಾಡಿ, ರೈತರಿಗೆ ರೈತ ದಿನಾಚರಣೆಯ ಶುಭಾಶಯ ಕೋರಿದರು.
ಗ್ರಾಮದ ಬೀರಪ್ಪ, ಚಂದ್ರಪ್ಪ, ಕೃಷ್ಣಪ್ಪ, ಜೀವನ್, ಪ್ರಗತಿಪರ ಕೃಷಿಕ ಕೊಕ್ಕನೂರಿನ ನಿರಂಜನ್ ಪಾಟೀಲ್ ಸೇರಿದಂತೆ ಇನ್ನೂ ಅನೇಕ ರೈತರು ಭಾಗವಹಿಸಿದ್ದರು.
ಕೃಷಿ ಅಧಿಕಾರಿ ಹೆಚ್.ಆರ್.ಇನಾಯಿತ್ ಸ್ವಾಗತಿಸಿದರು. ಎನ್.ಕೆ.ವಿಕಾಸ್ ವಂದಿಸಿದರು. ರೈತ ಸಂಪರ್ಕ ಕೇಂದ್ರದ ಯೋಗೇಶ್, ರಾಕೇಶ್, ಆನಂದ್, ಗಣೇಶ್ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.