ವಾರ್ಡ್‌ಗಳ ರಸ್ತೆ, ಗುಂಡಿಗಳ ದುರಸ್ತಿ ಕಾರ್ಯ: ಸವಿತಾ ಹುಲ್ಲುಮನೆ ಗಣೇಶ್ ಪರಿವೀಕ್ಷಣೆ

ವಾರ್ಡ್‌ಗಳ ರಸ್ತೆ, ಗುಂಡಿಗಳ ದುರಸ್ತಿ ಕಾರ್ಯ: ಸವಿತಾ ಹುಲ್ಲುಮನೆ ಗಣೇಶ್ ಪರಿವೀಕ್ಷಣೆ

ದಾವಣಗೆರೆ, ಡಿ. 23 – ನಗರದ ವಿವಿಧ ವಾರ್ಡ್‌ ಗಳಲ್ಲಿ ಇಂದು ರಸ್ತೆಯಲ್ಲಿರುವ ಗುಂಡಿಗಳನ್ನು ದುರಸ್ತಿ ಗೊಳಿಸುವ ಕಾಮಗಾರಿಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಪರಿವೀಕ್ಷಿಸಿದರು. 

ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಈ ಗುಂಡಿಗಳನ್ನು ದುರಸ್ತಿಗೊಳಿಸುವ ಸಲುವಾಗಿ 45 ವಾರ್ಡ್‌ಗಳನ್ನು ವಿಂಗಡಿಸಿ, 4 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಇನ್ನೂ 15 ದಿನಗಳೊಳಗಾಗಿ ಪೂರ್ಣಗೊಳಿಸಲು ಸೂಚಿಸಲಾಯಿತು ಹಾಗೂ ಈ ರಸ್ತೆಗಳಲ್ಲಿರುವ ಗುಂಡಿಗಳನ್ನು ಕೇವಲ ಗುಂಡಿ ಮುಚ್ಚುವ ತೋರಿಕೆಯ ಕೆಲಸವಾಗದೇ ವೈಜ್ಞಾನಿಕವಾಗಿ ದುರಸ್ತಿಗೊಳಿಸುವ ಜೊತೆಗೆ ಕಾಂಕ್ರೀಟ್ ರಸ್ತೆಗಳ ಗುಂಡಿಗಳನ್ನು ಫಿಲ್ಲಿಂಗ್ ಮತ್ತು ಕಾಂಕ್ರೀಟ್ ಹಾಕಿದ ನಂತರ ಸರಿಯಾಗಿ ಕ್ಯೂರಿಂಗ್ ಮಾಡಬೇಕು. ಪ್ರತಿ ಕಾಮಗಾರಿಯಲ್ಲೂ ಗುಣಮಟ್ಟವನ್ನು ಕಾಪಾಡಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರು.

error: Content is protected !!