ಹರಿಹರ, ಜ. 17 – ನಗರದಲ್ಲಿ ತಾಲ್ಲೂಕು ಆಡಳಿತದದಿಂದ ಜನವರಿ 26 ರಂದು ಗಣರಾಜ್ಯೋ ತ್ಸವ ಸಮಾರಂಭವನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡ ಲಾಗುವುದು ಎಂದು ತಹಶೀಲ್ದಾರ್ ಎಂ. ಬಿ. ಅಶ್ವತ್ಥ್ ತಿಳಿಸಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದ ನಿಮಿತ್ತವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗ್ಗೆ 9 ಕ್ಕೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಣ್ಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ರಾಷ್ಟ್ರ ಧ್ವಜಾರೋಹಣ ಪಥಸಂಚಲನ ಹಾಗೂ ಶಾಲಾ ಮಕ್ಕಳ ಮನರಂಜನೆ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಇಓ ಹನುಮಂತಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪೌರಾಯುಕ್ತ ಐಗೂರು ಬಸವ ರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಿ.ಎಂ. ಮಂಜು ನಾಥಯ್ಯ, ಪಶುಪಾಲನೆ ಇಲಾಖೆ ಸಿದ್ದೇಶ್, ಕೃಷಿ ಇಲಾಖೆ ನಾರನಗೌಡ, ತೋಟಗಾರಿಕೆ ಇಲಾಖೆ ರೇಖಾ, ಕಾರ್ಮಿಕ ಇಲಾಖೆ ಕವಿತಾ, ಆರ್.ಐ. ಹೇಮಂತ್ ಕುಮಾರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.