ಮುಂಬಯಿಕರ್ ವಡಾಪಾವ್
ಕನ್ನಡಿಗ ಯುವ ಮಿತ್ರರು ನವೀನ್ ಸುನಾಗ್, ಪ್ರವೀಣ್‌ಕುಮಾರ್, ದಾವಣಗೆರೆ ಮೂಲದವರು ಮತ್ತು ಶ್ರೀಮತಿ ಪ್ರಭಾವತಿ ಮಾಲಕ್ಕನವರ ಬೆಂಗಳೂರು ಇವರ ಸಾರತ್ಯದಲ್ಲಿ ಕಳೆದ ವರ್ಷ ಜೂಲೈನಲ್ಲಿ ವೆಸ್ಟ್ ಲಂಡನ್ನ ಹಾರೋ ನಗರದ ಕೆಂಟಂನ್ ರಸ್ತೆಯಲ್ಲಿ ಆರಂಭಿಸಿದರು.
ಭಾರತೀಯ ಜನತೆಯು ಹೆಚ್ಚು ಇಷ್ಟಪಡುವ ಸ್ಟ್ರೀಟ್ ಫುಡ್‌ಗಳಾದ ಮುಂಬಯ್ ಖ್ಯಾತಿಯ ವಡಾಪಾವ್, ಸಮೋಸಾ, ಸಬುದಾನ್, ಮಸಾಲಾ ಅವಲಕ್ಕಿ, ಈರುಳ್ಳಿ ಪಕೋಡ, ಮೆಣಸಿನಕಾಯಿ ಬೊಂಡಾ ಇತ್ಯಾದಿ ರುಚಿಕರ ತಿನಿಸುಗಳನ್ನು ಶುದ್ಧ ತೈಲ ಹಾಗೂ ಯಾವುದೇ ಬಣ್ಣಗಳ ಮಿಶ್ರಣವಿಲ್ಲದೆ ಕೇವಲ ಸಸ್ಯಹಾರಿ ಉಪಹಾರ ಭೋಜನಕ್ಕೆ ನೀಡುತ್ತಿದೆ.
ಬಾಣಸಿಗರು ಮುಂಬಯ್ ಅನುಭವೀ ಪರಿಣಿತರು ಮತ್ತು ಸಿಬ್ಬಂದಿಯನ್ನು ಅಡುಗೆ ಮತ್ತು ಆತಿಥ್ಯಕ್ಕೆ ನೇಮಿಸಿದೆ.
ರೆಸ್ಟೋರೆಂಟ್ ಬಗ್ಗೆ ಹೇಳುವುದಾದರೆ ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಆಸನಗಳ ವ್ಯವಸ್ಥೆ, ಸಣ್ಣಪುಟ್ಟ ಸಭೆ ಸಮಾರಂಭಗಳು, ಕುಟುಂಬ ದಲ್ಲಿನ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಸಂಘ-ಸಂಸ್ಥೆಗಳು ನಡೆಸುವ ಸಭೆಗಳಿಗೂ ಬಾಡಿಗೆಗೆ ಅಲ್ಲದೆ ನಗರದಲ್ಲಿ ನಡೆಯುವ ಯಾವುದೇ ಶಾಲಾ ಕಾಲೇಜುಗಳಲ್ಲಿ ಹಬ್ಬಗಳು ಮತ್ತು ಸಮಾರಂಭಗಳ ಸಂದರ್ಭದಲ್ಲಿಯೂ, ಮನವಿ ಮೇರೆಗೆ ಕೇಟರಿಂಗ್ ವ್ಯವಸ್ಥೆಯನ್ನು ವಿಶೇಷವಾದ ರೀತಿಯಲ್ಲಿಯೇ ಆಹಾರವನ್ನು ಸರಬರಾಜು ಮಾಡಲಾಗುವುದು.
ಸೋಮವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿಯೂ ಮುಂಜಾನೆ 11.30 ರಿಂದ 3.30 ಮತ್ತು ಸಂಜೆ 5.30 ರಿಂದ 9.30ರವರೆಗೂ ತೆರೆದಿರುತ್ತದೆ.
ಗ್ರಾಹಕರ ಬೇಡಿಕೆಗಳನ್ನು ಕೇವಲ 15 ನಿಮಿಷಗಳಲ್ಲಿ ಪೂರೈಸುತ್ತದೆ. 12 ಜೂಲೈ 2024ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, 2ನೇ ವರ್ಷದ ಆರಂಭದಲ್ಲಿ ಉತ್ತರ ಭಾರ ತೀಯ ಶೈಲಿಯ ಭೋಜನಗಳನ್ನು ಜೊತೆಗೆ ಪರವಾನಿಗೆ ಹೊಂದಿರುವ ವಿವಿಧ ಮದ್ಯಗಳು ಸೇವೆಯಲ್ಲಿರುತ್ತವೆ.
ಕನ್ನಡ ನಾಡಿನ ಮಿತ್ರರು ಮುಂಬಯ್‌ಯ ಬಾಣಸಿಗರು ಮತ್ತು ಸೇವಕರ ತಂಡವು ಲಂಡನ್ ಜೆತೆಗೆ ಇಂಡಿಯನ್ ಸ್ಟ್ರೀಟ್ ಫುಡ್ ಪ್ರಖ್ಯಾತ ಶುದ್ಧ ಸಸ್ಯಹಾರದ ತಿಂಡಿ, ಊಟಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಲಿ. ಮುಂದಿನ ದಿನಗಳಲ್ಲಿ ದಾವಣಗೆರೆಯ ಬೆಣ್ಣೆದೋಸೆ ಸವಿಯನ್ನು ಪರಿಚಯಿಸಲಿ ಎಂದು ಅಶಿಸೋಣವೇ.
ಮಹಲಿಂಗಪ್ಪ ಎ.,
ಲೇಖಕರು
ಪ್ರಸ್ತುತ UK ಪ್ರವಾಸದಲ್ಲಿದ್ದಾರೆ
[email protected]