ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಮೇಷ ರಾಶಿ :

(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಸದಾ ಉತ್ಸಾಹಿಗಳಾದ ನೀವು ಈ ವಾರವೂ ಕೂಡ ಹೊಸ ಉತ್ಸಾಹದೊಂದಿಗೆ ಮತ್ತೊಬ್ಬರಿಗೆ ಮಾದರಿಯಾಗುವಿರಿ, ಹಣಕಾಸಿನ ಸ್ಥಿತಿಯು ನಿಮ್ಮ ನಿರೀಕ್ಷೆಯಂತೆಯೇ ಪ್ರಗತಿ ಸಾಧಿಸಲಿದೆ. ಆದರೂ ಕೂಡ ಕೆಲವೊಮ್ಮೆ ಮಿತಿಮೀರಿದ ಖರ್ಚು-ವೆಚ್ಚಗಳು ಅನಿವಾರ್ಯವಾಗಲಿವೆ. ಇದರ ಮೇಲೆ ಹಿರಿಯರೂ ಕೂಡ ತಮ್ಮ ಬೇಡಿಕೆಗಳಿಗೆ ಒತ್ತಾಯ ಮಾಡುವರು. ರೈತಾಪಿ ಜನರಿಗೆ ಕೃಷಿಯಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಲಿದೆ. ಭಾನು-ಮಂಗಳ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniವೃಷಭ ರಾಶಿ :

(ಇ.ಉ.ಎ.ಒ.ವ.ವಿ.ವು.ವೆ.ವೋ)

ಉದ್ಯಮದಲ್ಲಿ ಹಿನ್ನಡೆಯಾಗುತ್ತಿರುವ ನಿಮಗೆ ಅನುಭವಿಗಳಾದ ಹಿರಿಯರಿಂದ ಸೂಕ್ತ ಸಲಹೆ – ಸೂಚನೆ ಸಿಗಲಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ. ವಿದೇಶಗಳಿಗೆ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಸರಬರಾಜು ಮಾಡುವ ಸದಾವಕಾಶ ನಿಮ್ಮದಾಗಲಿದೆ. ಆದಾಯಕ್ಕೇನೂ ಕೊರತೆಯಿಲ್ಲ, ಕೃಷಿ ಭೂಮಿ ಕೊಳ್ಳುವಯೋಗ ತಾನಾಗಿಯೇ ಒದಗಿಬರಲಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಅಸ್ಥಿರತೆ ಕಾಡಲಿದೆ. ಗುರುಗಳನ್ನು ಆರಾಧಿಸಿ. ಗುರು-ಶುಕ್ರ-ಶನಿ ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಮಿಥುನ ರಾಶಿ :

(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ನಿಮ್ಮಲ್ಲಿ ನಿಮಗೇ ತಿಳಿಯದಂತೆ ಗಾಂಭೀರ್ಯ ಮೂಡಲಿದೆ. ಆದರೆ ಇದರಿಂದೇನೂ ಪ್ರಯೋಜನವಿಲ್ಲ, ಯುವ ಜನರು ಪೂರ್ವಿಕರ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದು ಮೇಲು. ಅಗತ್ಯಕ್ಕೆ ತಕ್ಕ ಆದಾಯವಾಗಲಿದೆ. ರೈತಾಪಿ ಜನರು ಬೇಸಾಯಕ್ಕೆ ಹೆಚ್ಚಿನ ವೆಚ್ಚ ಭರಿಸಬೇಕಾದೀತು. ವೃತ್ತಿಗೆ ಸಂಬಧಿಸಿದಂತೆ ವಿದೇಶಕ್ಕೆ ಆಗಾಗ ಪ್ರಯಾಣಿಸಬೇಕಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ. ಸೋಮ-ಬುಧ ಗುರು ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಕರ್ಕಾಟಕ ರಾಶಿ :

(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಹೊಸದಾಗಿ ಉದ್ಯಮ ಪ್ರಾರಂಭಿಸಿದವರಲ್ಲಿ ಆರಂಭದಲ್ಲಿ ಅನೇಕ ಗೊಂದಲಗಳು ಕಾಣಿಸಿಕೊಳ್ಳಲಿವೆ. ಹಾಗೆಂದ ಮಾತ್ರಕ್ಕೆ ಚಿಂತೆ ಬೇಡ. ಇದು ತಾತ್ಕಾಲಿಕ. ಆದಾಯವು ಮಂದಗತಿಯಲ್ಲಿರುವುದರಿಂದ ಯಾರಿಗೂ ಆರ್ಥಿಕ ಭರವಸೆ ಕೊಡಬೇಡಿ. ಪದವೀಧರರಿಗೆ ಸ್ನೇಹಿತರಿಂದ ನೌಕರಿಗೆ ನೆರವು ಸಿಗಲಿದೆ. ಹೈನುಗಾರಿಕೆ ಹೆಚ್ಚಿನ ಲಾಭ ತರದಿದ್ದರೂ ನಷ್ಟವನ್ನುಂಟು ಮಾಡುವುದಿಲ್ಲ. ಅಧ್ಯಾಪಕ  ವರ್ಗದವರಿಗೆ ಉತ್ತಮ ದಿನಗಳು. ಗೋ ಸೇವೆ ಮಾಡಿ. ಭಾನು-ಸೋಮ-ಬುಧ ಶುಭ ದಿನಗಳು

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಸಿಂಹ ರಾಶಿ :

(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಪ್ರತಿಯೊಂದರಲ್ಲೂ ವ್ಯಾವಹಾರಿಕ ಲಾಭಾಂಶವನ್ನು ಹುಡುಕಲು ಹೋಗಬೇಡಿ,  ಆದಾಯವನ್ನು  ಹೆಚ್ಚಿಸಿಕೊಳ್ಳಲು  ಮಾರ್ಗೋಪಾಯವೊಂದನ್ನು ಹುಡುಕುವಿರಿ ಮತ್ತು ಅದರಲ್ಲಿ ಯಶಸ್ವಿಯಾಗುವಿರಿ, ಕೌಟಂಬಿಕ ಶುಭ ಕಾರ್ಯ ಗಳಿಗೆ ಬಂಧುಗಳಿಂದಲೇ ಅಡ್ಡಿ – ಆತಂಕಗಳು ಎದುರಾಗಲಿವೆ. ಹೊಸದಾಗಿ ಕೆಲಕ್ಕೆ ಸೇರಿದವರಿಗೆ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಮಹಿಳೆಯರಿಗೆ ಉತ್ತಮ ದಿನಗಳು, ಅನ್ನದಾನ ಮಾಡಿ. ಭಾನು-ಗುರು-ಶುಕ್ರ ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಕನ್ಯಾ ರಾಶಿ :

(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಅವಸರಕ್ಕಿಂತಲೂ ಸಾವಧಾನವಾಗಿ ಆಲೋಚಿಸಿದ ಕಾರ್ಯಗಳು ಹೆಚ್ಚು ಫಲ ಪ್ರದವಾಗಲಿವೆ. ಆಸ್ತಿ ವಿಚಾರದಲ್ಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಸಾಗಲಿದೆ. ಲಾಭವೂ ಸಿಗಲಿದೆ. ಕುಟುಂಬಕ್ಕೆ ಸಂಬಂಧಿಸಿದ ವಿಷಯವೊಂದರಲ್ಲಿ ನೀವು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದೀತು, ಆದಾಯವು ಮಧ್ಯಗತಿಯಲ್ಲಿರುವುದು. ಸಂತಾನಾಪೇಕ್ಷಿಗಳಿಗೆ ಶುಭ ವಾರ್ತೆಯೊಂದು ಇಷ್ಟರಲ್ಲೇ ಕೇಳಿಬರಲಿದೆ. ಗುರುಸೇವೆಮಾಡಿ. ಮಂಗಳ-ಬುಧ-ಗುರು ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniತುಲಾ ರಾಶಿ :

(ರ.ರಿ.ರು.ರೆ.ರೊ.ತ.ತಿ.ತು.ತೆ.)

ಮಾನಸಿಕ ಸಮತೋಲನ ಹೊಂದಿರುವ ನೀವು ಯಾವುದೇ ದುಗುಡವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ. ಕೆಲವೊಮ್ಮೆ ನಮ್ಮ ನಡಾವಳಿಯೇ ನಮಗೆ ಶತ್ರುಗಳನ್ನು ಹುಟ್ಟು ಹಾಕಬಹುದು. ಆದಾಯವು ಸಾಮಾನ್ಯವಾಗಿರಿ ವುದರಿಂದ ಮಡದಿ, ಮಕ್ಕಳು ಬಯಸಿದ್ದನ್ನು ಕೊಡಿಸಲು ಸಾಧ್ಯವಾಗದೇ ಹೋಗಬಹುದು. ವೈಯಕ್ತಿಕ ಆರೋಗ್ಯಕ್ಕಾಗಿ ಹೆಚ್ಚಿನ ವೆಚ್ಚವಾಗಲಿದೆ, ಕೆಲವು ವಿಚಾರಗಳಲ್ಲಿ ಸ್ನೇಹಿತರ ನೆರವು ಪಡೆಯುವುದು ಮೇಲು. ಸೋಮ-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniವೃಶ್ಚಿಕ ರಾಶಿ :

(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ವಾರದ ಆರಂಭದಲ್ಲಿ ಯಾವುದೇ ದೃಢ ನಿರ್ಧಾರಗಳನ್ನು ತೆಗೆದು ಕೊಳ್ಳುವುದರಲ್ಲಿ ಅಸಮರ್ಥರಾದರೂ, ವಾರಾಂತ್ಯದಲ್ಲಿ ಅದು ಸರಿಹೋಗಲಿದೆ. ನಿಮ್ಮ ವಿರುದ್ಧ ಸಿಡಿದೆದ್ದ ವೈರಿಗಳೇ ಮತ್ತೆ ನಿಮಗೇ ಶರಣಾಗುವರು. ವಿದೇಶದಲ್ಲಿ ರುವ ಮಗನಿಂದ ಆಸ್ತಿಕೊಳ್ಳಲು ಆರ್ಥಿಕ ನೆರವು ಸಿಗಲಿದೆ. ಮಕ್ಕಳ ಬದುಕು ಪ್ರಗತಿ ಪಥದಲ್ಲಿ ಸಾಗಲಿದೆ. ಅಪರೂಪಕ್ಕೆ ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಹಳೇ ಸಾಲವನ್ನು ಕೇಳದೆ ಹೋಗಬೇಡಿ. ಗೋ ಸೇವೆ ಮಾಡಿ. ಸೋಮ-ಮಂಗಳ-ಬುಧ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಧನು ರಾಶಿ :

(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಹಿಡಿದ ಗುರಿ ಸಾಧಿಸಿದ ಸಮಾಧಾನ, ನೆಮ್ಮದಿ ನಿಮ್ಮದಾಗಲಿದೆ. ಇಮ್ಮಡಿಸಿದ ಆದಾಯ ಆರ್ಥಿಕ ಹೊರೆ ಕಡಿಮೆ ಮಾಡಲಿದೆ. ನೀವು ಹೂಡುವ ತಂತ್ರಕ್ಕೆ ಎದುರಾಳಿಗಳು ಹೈರಾಣಾಗುವರು. ಸರ್ಕಾರದಿಂದಾಗ ಬೇಕಾಗಿರುವ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಪ್ರಭಾವೀ ವ್ಯಕ್ತಿಗಳ ನೆರವು ಪಡೆಯುವುದು ಮೇಲು. ವಿದೇಶದಲ್ಲಿ ಆಸ್ತಿ ಮಾಡುಕೊಳ್ಳಲು ಹಿರಿಯರ ನೆರವು ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಭಾನು-ಗುರು-ಶನಿ-ಶುಭ ದಿನಗಳು.

ಮಕರ ರಾಶಿ :

(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಸ್ನೇಹಿತರೊಂದಿಗಾಗಲೀ, ಬಂಧುಗಳೊಂದಿಗಾಗಲೀ ಮಾತನಾಡು ವಾಗ ಬಳಸುವ ಭಾಷೆಯ ಬಗ್ಗೆ ಎಚ್ಚರವಿರಲಿ, ಮಧ್ಯಗತಿಯ ಆದಾಯದಿಂದ ಹೆಚ್ಚಿನದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೃಷಿ ಭೂಮಿ ಹೊಂದುವ ಯೋಗವಿದ್ದರೂ ಹಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳಲಿವೆ. ಯುವಜನರ ಏಳಿಗಾಗಿ ಹಿರಿಯರು ಹೆಚ್ಚಿನ ಶ್ರಮ ವಹಿಸುವರು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯೇನೂ ಕಾಣದು, ಉದ್ಯಮಿಗಳಿಗೆ ಉತ್ತಮ ದಿನಗಳು. ಗೋಗ್ರಾಸ ಕೊಡಿ. ಬುಧ-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಕುಂಭ ರಾಶಿ :

(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಆದಾಯದಲ್ಲಿ ಹೆಚ್ಚಳವಾಗಲಿದೆ ಎಂಬ ಭ್ರಮೆಯಿಂದ ಹೊರ ಬರಲು ಪ್ರಯತ್ನಿಸಿ. ನೀವಾಡುವ ಕೆಲ ಮಾತುಗಳು ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಜನಪ್ರಿಯತೆಯ ತುಟ್ಟ ತುದಿಯಲ್ಲಿರುವವರು ಸಾಮಾಜಿಕವಾಗಿ ತುಸು ಎಚ್ಚರದಿಂದಿರುವುದು ಮೇಲು. ಮಹಿಳಾ ಉದ್ಯಮಿಗಳು ಲಾಭದ ಹಾದಿಯಲ್ಲಿ ಸಾಗಲಿದ್ದಾರೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ತಾವಾಗಿಯೇ ಹುಡುಕಿಕೊಂಡು ಬರಲಿವೆ. ವಿಷ್ಣು ಸಹಸ್ರ ನಾಮಪಠಿಸಿ. ಸೋಮ-ಮಂಗಳ-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 30.06.2024 ರಿಂದ 06.07.2025 ರವರೆಗೆ - Janathavaniಮೀನಾ ರಾಶಿ :

(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಕಡಿಮೆಯಾಗುತ್ತಿರುವ ಆದಾಯದಿಂದಾಗಿ ನಿಮ್ಮಲ್ಲಿ ಅಸಹನೆ ಮೂಡಲಿದೆ, ಇದು ಕುಟುಂಬದ ಸದಸ್ಯರ ಮೇಲೂ ಪರಿಣಾಮ ಬೀರಲಿದೆ, ಮನೋವೈದ್ಯರಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚಲಿದೆ. ವೈಯಕ್ತಿಕ ಕಾರ್ಯಗಳಿಗಾಗಿ ಹಿರಿಯರಿಂದ ಆರ್ಥಿಕ ನೆರವನ್ನು ನಿರೀಕ್ಷಿಸುವಿರಿ ಮತ್ತು ಈ ನಿಟ್ಟಿನಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗುವಿರಿ, ವೈಯಕ್ತಿಕ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯಾಗಲಿದೆ, ಮನೆ ಖರೀದಿಯಾಗಲಿದೆ. ಗೋಗ್ರಾಸ ಕೊಡಿ. ಭಾನು-ಗುರು-ಶನಿ-ಶುಭ ದಿನಗಳು.


ವಿಶೇಷ ದಿನಗಳು : ದಿನಾಂಕ: 5.7.2024 ನೇ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678

error: Content is protected !!