ಹರಿಹರದಲ್ಲಿ ಇಂದು ಹರ ಜಾತ್ರಾ ಮಹೋತ್ಸವ

ರಾಜ್ಯದಲ್ಲಿ ಬರಗಾಲ ಇರುವುದು ಹಾಗೂ ಪಂಚಮಸಾಲಿ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ ಹರ ಜಾತ್ರಾ ಮಹೋತ್ಸವವನ್ನು ಈ ವರ್ಷ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಪಂಚಮಸಾಲಿ ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಮತ್ತು ಆಡಳಿತಾಧಿಕಾರಿ ಎಚ್.ಪಿ. ರಾಜಕುಮಾರ್ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 9 ಗಂಟೆಗೆ ಹರಿಹರದ ತುಂಗಭದ್ರಾ ನದಿಯ ತುಂಗಾರತಿ ತಟದಲ್ಲಿ ಮಕರ ಸಂಕ್ರಾಂತಿಯ ಪುಣ್ಯ ಸ್ನಾನ, ನಂತರ ಬೆಳಗ್ಗೆ 11 ಗಂಟೆಗೆ ಕಲಾತಂಡದೊಂದಿಗೆ ಕುಂಭಮೇಳ ಹಾಗೂ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ವಚನ ಗ್ರಂಥ ಮೆರವಣಿಗೆಯೊಂದಿಗೆ ಶ್ರೀಪೀಠಕ್ಕೆ ಆಗಮಿಸಲಾಗುವುದು. 

ನಂತರ ಶ್ರೀ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾ ಸ್ವಾಮೀಜಿ  6ನೇ ವರ್ಷದ  ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ. ಸಂಜೆ ಡಾ. ಮಹಾಂತ ಶ್ರೀಗಳ ಪಲ್ಲಕ್ಕಿ ಉತ್ಸವ ಜರುಗಲಿದೆ ಎರಡು ದಿನವೂ ಪ್ರಸಾದದ ವ್ಯವಸ್ಥೆ ಇರುತ್ತದೆ.

error: Content is protected !!