ಹರಿಹರ,ಡಿ. 29 – ಭದ್ರಾ ಅಣೆಕಟ್ಟಿನಿಂದ ಭದ್ರಾ ಕಾಲುವೆಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಒತ್ತಾಯಪಡಿಸಲಾಗುತ್ತದೆ ಎಂದು ಆಮ್ಮ ಆದ್ಮಿ ಪಕ್ಷದ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಬಸವರಾಜ್ ಹಲಸಬಾಳು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ ನಡೆದ ಕಾಡಾ ಸಭೆಯಲ್ಲಿ ತಾಲ್ಲೂಕಿನ ರೈತರಿಗೆ 110 ದಿನಗಳ ಕಾಲ ನೀರನ್ನು ಕೊಡಬೇಕು ಎಂದು ತೀರ್ಮಾನ ಆಗಿತ್ತು. ಆದರೆ 80 ದಿನಗಳು ಮಾತ್ರ ನೀರನ್ನು ಕೊಟ್ಟಿದ್ದಾರೆ. ಇದರಿಂದಾಗಿ ತಾಲ್ಲೂಕಿನ ರೈತರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಡ್ಯಾಮ್ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆ ಇದ್ದರು, ಸಹಿತ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಸಮರ್ಪಕವಾಗಿ ನೀರನ್ನು ಕೊಡದೆ ಇರೋದರಿಂದ ರೈತರ ಬದುಕು ದುಸ್ತರವಾಗಿದ್ದು ಮತ್ತು ಜಿಲ್ಲೆಯ ಭತ್ತ ಹಾಗೂ ಅಡಿಕೆ ಬೆಳೆಗಾರರು ತಮ್ಮ ಭೂಮಿಯನ್ನು ಉಳುಮೆ ಮಾಡಲು ನೀರಿನ ಕೊರತೆಯನ್ನು ಎದುರುಸುತ್ತಿರುವುದರಿಂದ ಭದ್ರಾ ಕಾಲುವೆ ಅಣೆಕಟ್ಟಿಯಿಂದ ನೀರನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು.
ವಕೀಲ ಗಣೇಶ ದುರ್ಗಾದ ಮಾತನಾಡಿ ಭದ್ರಾ ಅಣೆಕಟ್ಟಿನಲ್ಲಿ 166 ಅಡಿ ನೀರಿನ ಪೈಕಿ, ನಮ್ಮ ಜಿಲ್ಲೆಯ ರೈತರ ಬಳಕೆಗಾಗಿ 16 ಅಡಿಗಳ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ 150 ಅಡಿ ನೀರು ಶೇಖರಣೆ ಇರುತ್ತದೆ. ಕನಿಷ್ಠ 100 ಅಡಿ ನೀರು ಸಂಗ್ರಹವೀರಬೇಕಾಗಿದ್ದು, 100 ಅಡಿ ಸಂಗ್ರಹವನ್ನು ಕಡಿತಗೊಳಿಸಿದ ನಂತರ 50 ಅಡಿ ನೀರಿನ ಸಂಗ್ರಹ ದಾವಣಗೆರೆ ಜಿಲ್ಲೆಯ ರೈತರಿಗೆ ಬೇಸಿಗೆಯಲ್ಲಿ ಭತ್ತ ಮತ್ತು ಅಡಿಕೆ ಬೆಳೆಯಲು ಮತ್ತು ಉಳುಮೆ ಮಾಡಲಿಕ್ಕೆ ಬಿಟ್ಟರೆ ಇನ್ನೂ ಸಾಕಷ್ಟು ನೀರು ಲಭ್ಯವಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಕೆ. ಶಿವರಾಮ್, ಕಾರ್ಯದರ್ಶಿ ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಬಿ. ಮಲ್ಲೇಶ್, ಆದಿಲ್ ಖಾನ್, ಸೈಯದ್ ಸಾದತ್, ವೀರಭದ್ರಪ್ಪ ನಾಗೇನಹಳ್ಳಿ, ಸೀತಾರಾಮ, ಅಬ್ದುಲ್ ರೆಹಮಾನ್, ಮಹಮ್ಮದ್ ಯೂನುಸ್, ಇತರರು ಹಾಜರಿದ್ದರು.