ಬೈಕ್‌ ರ‍್ಯಾಲಿಗೆ ಚಾಲನೆ-ಮಹಾಧಿವೇಶನ ಯಶಸ್ವಿಗೆ ಕರೆ

ಬೈಕ್‌ ರ‍್ಯಾಲಿಗೆ ಚಾಲನೆ-ಮಹಾಧಿವೇಶನ ಯಶಸ್ವಿಗೆ ಕರೆ

ದಾವಣಗೆರೆ, ಡಿ. 21- ನಾಳೆ ದಿನಾಂಕ 23 ಮತ್ತು 24 ರಂದು ನಗರದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಧಿವೇಶನಕ್ಕೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಕರೆ ನೀಡಿದರು. 

ಶಾಮನೂರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಂದು ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಬೈಕ್ ರ‍್ಯಾಲಿ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಬೈಕ್‌ ರ‍್ಯಾಲಿಗೆ ಚಾಲನೆ-ಮಹಾಧಿವೇಶನ ಯಶಸ್ವಿಗೆ ಕರೆ - Janathavaniಸಮಾಜದ ಅನೇಕ ಬೇಡಿಕೆಗಳ ಬಗ್ಗೆ ಮಹಾಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜನ ಜಾಗೃತಿ ಬೈಕ್ ರ‍್ಯಾಲಿಗೆ ಕೈಗಾರಿಕೋದ್ಯಮಿಯೂ ಆಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಎಸ್. ಗಣೇಶ್ ಚಾಲನೆ ನೀಡಿದರು.

ರ‍್ಯಾಲಿಯು ರಾಜ ಬೀದಿಗಳಲ್ಲಿ ಸಂಚರಿಸಿತು. ಬೈಕ್ ರ‍್ಯಾಲಿಯಲ್ಲಿ  ವೀರಶೈವ ಮಹಾಸಭಾದ ಯುವ ಮುಖಂಡರಾದ ಸಂದೀಪ್ ಅಣಬೇರು, ಶಂಭು ಉರೇಕೊಂಡಿ, ಗುರುಶಾಂತ ಸ್ವಾಗೇರ, ಶಿವರತನ್, ಅರುಣ್ ಕುಂದೂರು, ಹೇಮಂತ್, ಕಾರ್ತಿಕ್, ಹರೀಶ್ ಶಾಮನೂರು, ಸಂಜಯ್, ಶಿವಕುಮಾರ್, ಅಜಿತ್ ಆಲೂರು ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!