ಟೆನ್ನಿಸ್ ಟೂರ್ನಿ : ಶುಕ್ಲಾ ಮೋನಿಕಾ ಪ್ರಥಮ

ಟೆನ್ನಿಸ್ ಟೂರ್ನಿ : ಶುಕ್ಲಾ ಮೋನಿಕಾ ಪ್ರಥಮ

ದಾವಣಗೆರೆ, ಡಿ. 20- ನಗರದಲ್ಲಿ ಈಚೆಗೆ ನಡೆದ ಆಹ್ವಾನಿತ ಟೆನ್ನಿಸ್ ಟೂರ್ನಿಯಲ್ಲಿ 10 ವರ್ಷದೊಳಗಿನ ಬಾಲಕರ ಟೆನ್ನಿಸ್ ಪಂದ್ಯಾವಳಿಯಲ್ಲಿ ಸೊಲ್ಲಾಪುರದ ಚಿ. ಶುಕ್ಲಾ ಮೋನಿಕಾ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶುಕ್ಲಾ ಮೋನಿಕಾ, ಸೊಲ್ಲಾಪುರದ ಮೋನಿಕಾ ಸ್ವಪ್ನ ಇಳಂದ ದಂಪತಿ ಪುತ್ರ ಹಾಗೂ ಸಾಮಾಜಿಕ ಸೇವಾ ಕಾರ್ಯಕರ್ತ ಅಜ್ಜಂಪುರ ಎಸ್. ಮೃತ್ಯುಂಜಯ ಅವರ ಮೊಮ್ಮಗ. ಟೆನ್ನಿಸ್ ಟೂರ್ನಿಯ ಖಜಾಂಚಿ ಅನಿತ್‌ಕುಮಾರ್, ಕಾರ್ಯದರ್ಶಿ ನವೀನ್ ವಾಲ್ವಕರ್, ಮಹಾಂತೇಶ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ  ಅಜ್ಜಂಪುರ ಎಸ್. ಮೃತ್ಯುಂಜಯ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!