ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಿ-ಶಾಸಕ ಬಿ.ಪಿ.ಹರೀಶ್‌ ಸಲಹೆ

ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಿ-ಶಾಸಕ ಬಿ.ಪಿ.ಹರೀಶ್‌ ಸಲಹೆ

ಮಲೇಬೆನ್ನೂರು ಡಿ. 20 – ಫಲಾನುಭವಿಗಳು ತಮಗೆ ನೀಡಿದ ಸರ್ಕಾರದ ಸೌಲಭ್ಯಗಳನ್ನು ತಾವೇ ಬಳಸಿಕೊಂಡು ಪ್ರಗತಿ ಸಾಧಿಸಬೇಕೆಂದು ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ಅವರು ಬುಧವಾರ ಪಟ್ಟಣದ ಪುರಸಭೆಯ ಎಸ್‌ಎಫ್‌ಸಿ ನಗರೋತ್ಥಾನ 15ನೇ ಹಣಕಾಸು ಯೋಜನೆ ಹಾಗೂ ಸ್ಥಳೀಯ ನಿಧಿಯ ಶೇ 24.10 ಮತ್ತು 7.25ರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಪುರಸಭೆ ಸದಸ್ಯರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಾವು ನೀಡುವ ಸವಲತ್ತುಗಳು ಅವರ ಜೀವನಕ್ಕೆ ಸಹಕಾರಿಯಾಗುವಂತಿರಬೇಕು. ಆ ಮೂಲಕ ಸರ್ಕಾರದ ಯೋಜನೆಗಳು ಸದುಪಯೋಗ ವಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂಬ ಉದ್ದೇಶದಿಂದ ಸ್ವಲ್ಪ ತಡವಾಗಿದೆ. ಆದರೂ ಸಚಿವರ ಸಮಯ ಸಿಗಲಿಲ್ಲ ಎಂದು ಅಧಿಕಾರಿಗಳು ಹೇಳಿದರು. ಸಚಿವರು ಬಂದಿದ್ದರೆ ಪಟ್ಟಣಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಅವರ ಗಮನ ಸೆಳೆಯಬಹುದಿತ್ತೆಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಫಲಾನುಭವಿಗಳನ್ನು ಕರೆಸಬೇಕಿತ್ತೆಂದು ಅಧಿಕಾರಿಗಳಿಗೆ ಹೇಳಿದ  ಹರೀಶ್‌ ಅವರು, ಬಂದವರನ್ನು ಬಿಟ್ಟು, ಇನ್ನೊಬರಿಗಾಗಿ ಕಾದು ಕುಳಿತರೆ ಬಂದವರನ್ನು ಕಳೆದುಕೊಳ್ಳಬೇಕಾಗುತ್ತದೆ. ಎಂದು ಶಾಮನೂರಿನಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಆದ ಘಟನೆ ಪ್ರಸ್ತಾಪಿಸಿ, ಅಧಿಕಾರಿಗಳಿಗೆ ಹಾಗೂ ಪುರಸಭೆ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಮಾಜಿ ಸದಸ್ಯ ಯುಸೂಫ್‌, ಭಾನುವಳ್ಳಿ ಸುರೇಶ್‌ ಮಾತ ನಾಡಿ, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ವಿಳಂಬ ಆಗಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 200 ಫಲಾನುಭವಿಗಳಿಗೆ ಸೋಲಾರ್‌ ಲ್ಯಾಂಪ್‌, 115 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು 98 ಫಲಾನುಭವಿಗಳಿಗೆ ವಾಟರ್‌ ಫೀಲ್ಟರ್‌ಗಳನ್ನು ಈ ದಿನ ವಿತರಿಸುತ್ತಿದ್ದೇವೆ. ಶಾಸಕರ ಪ್ರಯತ್ನದಿಂದಾಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದ್ದು, ನೀರಿನ ತೆರಿಗೆ ಕೇವಲ 8% ರಷ್ಟು ಮಾತ್ರ ವಸೂಲಿ ಆಗುತ್ತಿದೆ. ಅನಧಿಕೃತ ನಲ್ಲಿಗಳನ್ನು ಹಾಕಿಕೊಂಡವರಿಗೆ ನೋಟಿಸ್‌ ನೀಡಿದ್ದು, ಅವರೆಲ್ಲರೂ ಕೂಡಲೇ ಕಂದಾಯ ಕಟ್ಟಿ ಅಧಿಕೃತ ಮಾಡಿಕೊಳ್ಳಬೇಕೆಂದರು.

ಉಪತಹಶೀಲ್ದಾರ್‌ ಆರ್‌.ರವಿ, ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್‌, ಬಿ. ಮಂಜುನಾಥ್‌, ಟಿ. ಹನುಮಂತಪ್ಪ, ನಯಾಜ್‌, ಖಲೀಲ್‌, ಷಾ ಅಬ್ರಾರ್‌, ಭೋವಿ ಶಿವು, ಪಿ.ಆರ್. ರಾಜು, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್‌, ಭೋವಿಕುಮಾರ್‌, ರುಸ್ತುಂ, ಚಮನ್‌ ಷಾ, ಕೆ.ಪಿ. ಗಂಗಾಧರ್‌, ಮುಖಂಡರಾದ ಕೆ.ಜಿ. ವೀರನಗೌಡ್ರು, ಸುಬ್ಬಿ ರಾಜಣ್ಣ, ಎ.ಕೆ. ಲೋಕೇಶ್‌, ಭೋವಿ ಮಂಜಣ್ಣ, ನ್ಯಾಯಬೆಲೆ ಅಂಗಡಿ ಮಂಜಣ್ಣ, ಪಾಳೇಗಾರ್‌ ನಾಗರಾಜ್‌, ಬೆಣ್ಣೆಹಳ್ಳಿ ಬಸವರಾಜ್‌, ಎ.ಕೆ. ನಾಗರಾಜ್‌, ಭಾಷಾ, ಜಿಗಳಿ ಹನುಮಗೌಡ ಕುಮಾರನಹಳ್ಳಿ ಸುನೀಲ್‌ ಸೇರಿದಂತೆ ಇತರರು ಭಾಗವಹಿಸಿದ್ದರು. 

ಶ್ರೀಮತಿ ಮುಮ್ತಾಜ್‌ ಪ್ರಾರ್ಥಿಸಿದರು. ಪುರಸಭೆ ಅಧಿಕಾರಿ ದಿನಕರ್‌ ಸ್ವಾಗತಿಸಿದರು. ಕಿರಿಯ ಆರೋಗ್ಯ ಸಹಾಯಕ ಶಿವರಾಜ್‌ ನಿರೂಪಿಸಿದರೆ, ಪರಿಸರ ಇಂಜಿನಿಯರ್‌ ಉಮೇಶ್‌ ವಂದಿಸಿದರು.

error: Content is protected !!