ಹರಿಹರ ದರ್ಗಾ ಹತ್ತಿರದ ರಸ್ತೆ ಕಾಮಗಾರಿಗೆ ಚಾಲನೆ

ಹರಿಹರ ದರ್ಗಾ ಹತ್ತಿರದ ರಸ್ತೆ ಕಾಮಗಾರಿಗೆ ಚಾಲನೆ

ಹರಿಹರ, ಡಿ.20-ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಸಭೆಯ ತೀರ್ಮಾನದಂತೆ ಹರಿಹರ ತುಂಗಭದ್ರಾ ನದಿ ಮುಂಭಾಗದ ದರ್ಗಾ ಹತ್ತಿರದ 50 ಅಡಿ ರಸ್ತೆ ಅಭಿವೃದ್ಧಿ  ಕಾಮಗಾರಿಗೆ ತಾತ್ಕಾಲಿಕ ವಾಗಿ ಚಾಲನೆ ನೀಡಲಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ಈ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ಸಲ್ಲಿಸಿದ ನಂತರ ಪತ್ರಿ ಕಾಗೋಷ್ಠಿಯಲ್ಲಿ ಅವರು ಮಾತ ನಾಡಿದರು. ಶಾಸಕ  ಹರೀಶ್, ಬಿಜೆಪಿ ಯವರು, ಸಂಘ ಪರಿವಾರದವರು ಕಾಮಗಾರಿ ಮಾಡಲು ಬಿಡುತ್ತಿಲ್ಲ ಎಂಬ ಆರೋಪವನ್ನು  7 ವರ್ಷ ದಿಂದ ಕೇಳುತ್ತಾ ಬಂದಿದ್ದೆ.  ಆದರೆ ಈ ರಸ್ತೆ ದುರಸ್ತಿ ಮಾಡಿಸುತ್ತೇನೆಂಬ ವಿಶ್ವಾಸ ನನ್ನದಾಗಿತ್ತು ಎಂದರು.

ದಾಖಲೆ ಇಲ್ಲದ ದರ್ಗಾದ ಬಳಿ 66.5 ಸಾವಿರ ಅಡಿ ಜಾಗ ಇದೆ. ಆದರೆ ನಗರಸಭೆಯ ದಾಖಲೆಯಲ್ಲಿ ಇರುವಂತದ್ದು ಕೇವಲ 11 ಸಾವಿರ ಅಡಿ ಮಾತ್ರ. 51 ಸಾವಿರ ಅಡಿ ಜಾಗಕ್ಕೆ ನಗರಸಭೆ ಮತ್ತು ತಹಶೀಲ್ದಾ ರರಿಗೆ ದರ್ಗಾ ಸಮಿತಿಯವರು ಯಾ ವುದೇ ರೀತಿಯ ದಾಖಲೆ ಕೊಟ್ಟಿಲ್ಲ. ದರ್ಗಾದವರು ಗೋಪುರ ಕಟ್ಟಿದ್ದು ಇತ್ತೀಚೆಗೆ. ದರ್ಗಾ ಉಳಿಸಲಿಕ್ಕೆ ಒತ್ತು ವರಿ ಮಾಡಿಕೊಂಡಿದ್ದಾರೆಂದರು.

ಅಧಿವೇಶನದಲ್ಲಿ 7 ವರ್ಷಗಳಿಂದ ಇರುವ ಒಂದು ಸಮಸ್ಯೆಯನ್ನು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಅಧಿಕಾರಿ, ನಾನು 4 ದಿನಗಳಲ್ಲಿ ಪರಿಹರಿಸುವುದಾಗಿ ಅಧಿಕೃತ ಪೊಲೀಸ್ ರಕ್ಷಣೆ ಕೊಡಿ ಎಂದು ರಸ್ತೆ ಕಾಮಗಾರಿ ಮಾಡಲಿಕ್ಕೆ ಮುಂದಾದ ಸಮಯದಲ್ಲಿ,  ನಮ್ಮ ಸಂಘಟಕರು ಶಾಸಕರು ಇಲ್ಲದ ಸಮಯದಲ್ಲಿ ದಬ್ಬಾಳಿಕೆ ಮಾಡಿ ಕಾಮಗಾರಿ ಮಾಡಬೇಡಿ ಎಂದು ತಡೆದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಬಿ.ಪಿ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಜಿ.ಎಸ್. ಬಸವರಾಜ್, ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿ ನರೇಂದ್ರ ಬಾಬು ಸೇರಿ ದಂತೆ ಇತರೆ ಅಧಿಕಾರಿಗಳ ಸಮ್ಮುಖ ದಲ್ಲಿ ಸಭೆ ನಡೆಯಿತು ಎಂದರು.

ಸಾರ್ವಜನಿಕರು ಓಡಾಡುವು ದಕ್ಕೆ ಅನುಕೂಲ ಆಗಬೇಕು ಎಂಬ ದೃಷ್ಟಿಯಿಂದ ಈಗ 50 ಅಡಿ ರಸ್ತೆಯನ್ನು ತಾತ್ಕಾಲಿಕವಾಗಿ ಕಾಮ ಗಾರಿ ಮಾಡಲು ಅವಕಾಶ ಕಲ್ಪಿಸಿ ಎಂದು ಹೇಳಿದಾಗ ಅದಕ್ಕೆ ಸಮ್ಮತಿಯನ್ನು ನೀಡಲಾಯಿತು ಎಂದರು.

ನಿನ್ನೆ ಕೂಡ ಲೋಕೋಪಯೋಗಿ ಇಲಾಖೆಯ ಅಧಿಕಾರಿ ನರೇಂದ್ರ ಬಾಬು ಜಿಲ್ಲಾಧಿಕಾರಿ ಬಳಿ ಮಾತನಾಡಿದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿಂಬದಿಯಲ್ಲಿರುವ ನೀರಿನ ಟ್ಯಾಂಕ್ ಬಳಿ ಇರುವ ಇನ್ನೊಂದಿಷ್ಟು ಜಾಗವನ್ನು ಒಡೆದು ಕಾಮಗಾರಿ ಮಾಡುವ ಉದ್ದೇಶ ಅವರದ್ದಾಗಿತ್ತು. ಹಾಗಿದ್ದರೆ ಅಕ್ರಮ ಮಾಡಿಕೊಂಡವರ ಜಾಗವನ್ನು ಮೊದಲು ವಶಪಡಿಸಿಕೊಂಡು ತದನಂತರ 120 ಅಡಿ ರಸ್ತೆಯನ್ನು ಮಾಡಬೇಕೆಂದು ತಾಕಿತು ಮಾಡಿದ್ದೇವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹನುಮಂತಪ್ಪ, ಗ್ರಾಮಾಂತರ ಘಟಕದ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಮುಖಂಡರಾದ ಪರಶುರಾಮ್ ಕಾಟ್ವೆ, ರಾಜು ರೋಖಡೆ, ಹೆಚ್. ಮಂಜಾನಾಯ್ಕ್, ತುಳಜಪ್ಪ ಭೂತೆ, ರವಿಕುಮಾರ್, ವಿನಾಯಕ ಆರಾಧ್ಯಮಠ, ಐರಣಿ ನಾಗರಾಜ್, ಶ್ರೀನಿವಾಸ್ ಚಂದಪೂರ್, ಅಜ್ಜಪ್ಪ ಶೇರಾಪುರ, ರಾಜು ಸೋಳಂಕಿ,  ಆಪ್ತ ಸಹಾಯಕ ಶಿವಶಂಕರ್ ಚಿಕ್ಕಬಿದರಿ. ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕರು ವರಾಹಚಾರ್, ಕೆಂಚನಹಳ್ಳಿ ಶಿವಕುಮಾರ್, ಆಟೋ ರಾಜು ಇತರರು ಹಾಜರಿದ್ದರು.         

error: Content is protected !!