ಅಂಚೆ ಇಲಾಖೆಯ ಸಾವರಿನ್ ಬಂಗಾರದ ಬಾಂಡ್ ಯೋಜನೆಗೆ ಚಾಲನೆ

ಅಂಚೆ ಇಲಾಖೆಯ ಸಾವರಿನ್ ಬಂಗಾರದ ಬಾಂಡ್ ಯೋಜನೆಗೆ ಚಾಲನೆ

ದಾವಣಗೆರೆ, ಡಿ. 18 – ಅಂಚೆ ಇಲಾಖೆ ವತಿಯಿಂದ ಸಾವರಿನ್ ಬಂಗಾರದ ಬಾಂಡ್ ಯೋಜನೆಯ ಮೂರನೇ ಸರಣಿಗೆ ಡಿ.18ರಿಂದ
ಚಾಲನೆ ನೀಡಲಾಗಿದೆ. ಡಿಸೆಂಬರ್ 22ರವರೆಗೆ 6,199 ರೂ.ಗಳ ದರದಲ್ಲಿ ಬಂಗಾರದ ಬಾಂಡ್‌ಗಳನ್ನು ಖರೀದಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಾಂಡ್‌ಗಳಿಗೆ ವರ್ಷಕ್ಕೆ ಶೇ.2.5ರ ಬಡ್ಡಿ ನೀಡಲಾಗುವುದು. ಬಾಂಡ್ ಅವಧಿ 8 ವರ್ಷದ್ದಾಗಿದೆ. ಈ ಹಿಂದೆ 2015ರಲ್ಲಿ 2,916 ರೂ. ದರದಲ್ಲಿ ಬಾಂಡ್‌ಗಳನ್ನು ಮಾರಲಾಗಿತ್ತು. ಈಗ ಅವರಿಗೆ 6,199 ರೂ. ಮತ್ತು ಶೇ.2.5ರ ಬಡ್ಡಿ ಸಹ ದೊರೆತಿದೆ. ಒಟ್ಟಾರೆ ಹೂಡಿಕೆಯು ಎರಡು ಪಟ್ಟಿಗೂ ಹೆಚ್ಚಾಗಿದೆ ಎಂದು ಇಲಾಖೆ ಹೇಳಿದೆ.

ಇದು ಸುರಕ್ಷಿತ ಹೂಡಿಕೆಯಾಗಿದ್ದು, ಐದನೇ ವರ್ಷದಿಂದ ಅವಧಿ ಪೂರ್ವದಲ್ಲೇ ವಾಪಸ್ ಪಡೆಯಲು ಅವಕಾಶ ಇದೆ. ವ್ಯಕ್ತಿಗಳು ಕನಿಷ್ಠ 1 ಗ್ರಾಂ ಹಾಗೂ ಗರಿಷ್ಠ 4 ಕೆ.ಜಿ. ಖರೀದಿಸಲು ಅವಕಾಶ ಇದೆ. ಟ್ರಸ್ಟ್‌ ಹಾಗೂ ಚಾರಿಟೆಬಲ್ ಸಂಸ್ಥೆಗಳು 20 ಕೆ.ಜಿ.ವರೆಗೆ ಖರೀದಿಸಬಹುದು.

ಈ ಬಾಂಡ್‌ಗಳಿಗೆ ತೆರಿಗೆ ವಿನಾಯಿತಿ ಲಭ್ಯವಿದೆ, ಷೇರು ವಿನಿಮಯ ಕೇಂದ್ರದಲ್ಲಿ ಮಾರಾಟ ಮಾಡಬಹುದು. ಇದು ಸುರಕ್ಷಿತ ಹೂಡಿಕೆಯ ಮಾರ್ಗವಾಗಿದೆ ಹಾಗೂ ಲಾಭವನ್ನೂ ನೀಡುತ್ತದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿಗೂ ನೆರವಾದಂತಾಗುತ್ತದೆ ಎಂದು ಅಂಚೆ ಇಲಾಖೆ ಹೇಳಿದೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಸಂಪರ್ಕಿಸಬಹುದು.

error: Content is protected !!