ಶಾಲೆಯಲ್ಲಿ ಶಿಕ್ಷಕರಿಂದ ಮೊಬೈಲ್ ಬಳಕೆ ಡಿಡಿಪಿಐಗೆ ಹಕ್ಕುಗಳ ಸಮಿತಿ ದೂರು

ಶಾಲೆಯಲ್ಲಿ ಶಿಕ್ಷಕರಿಂದ ಮೊಬೈಲ್ ಬಳಕೆ  ಡಿಡಿಪಿಐಗೆ ಹಕ್ಕುಗಳ ಸಮಿತಿ ದೂರು

ದಾವಣಗೆರೆ, ಡಿ.17- ಇತ್ತೀಚಿನ ದಿನಗಳಲ್ಲಿ ಕೆಲವು ಶಾಲೆಯ ಪ್ರಾಧ್ಯಾಪಕ ರುಗಳು  ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಮೊಬೈಲ್ ಉಪಯೋಗಿಸು ತ್ತಿದ್ದು,  ಇದರಿಂದ ಮಕ್ಕಳ ಏಕಾಗ್ರತೆ ಹಾಗೂ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.   ಈ ಸಂಬಂಧ ಸರ್ಕಾರ  ಹೊರಡಿಸಿರುವ  ಆದೇಶ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ   ರಾಷ್ಟ್ರೀಯ ಮಾನವ   ಹಕ್ಕುಗಳ ತನಿಖಾ ಸಮಿತಿ ಡಿಡಿಪಿಐಯವರಿಗೆ   ಮನವಿ  ಸಲ್ಲಿಸಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ  ಸುಧೀಂದ್ರ ಕುಮಾರ್, ಶ್ರೀಧರ್ ಟಿ,  ಪೋತುಲ ಶ್ರೀನಿವಾಸ್, ಆಶಾ, ವಿನುತ  ಮತ್ತಿತರರು ಹಾಜರಿದ್ದರು.

error: Content is protected !!