ವೀರಶೈವ ಲಿಂಗಾಯತರನ್ನು ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಬೇಕು – ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಶೇಖರ್ ಒತ್ತಾಯ

ವೀರಶೈವ ಲಿಂಗಾಯತರನ್ನು ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಬೇಕು – ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಶೇಖರ್ ಒತ್ತಾಯ

ಹರಪನಹಳ್ಳಿ, ಡಿ. 17 – ಜಾತಿ-ಗಣತಿ ಮರು ಸರ್ವೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹಾಗೂ ಸಂಘಟನೆ ಗಾಗಿ ದಾವಣಗೆರೆಯಲ್ಲಿ ಇದೇ ದಿನಾಂಕ 23 ಹಾಗೂ 24 ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದ 24ನೇ ಮಹಾ ಅಧಿವೇಶನದ ಉದ್ದೇಶವಾಗಿದೆ.

ಈ ಕುರಿತು ಪಟ್ಟಣದ ಕೆ.ಸಿ.ಎ. ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಶೇಖರ ಅವರು, ಈಗ ನಡೆಸಿರುವ ಜಾತಿ ಗಣತಿ ವೈಜ್ಞಾನಿಕವಾಗಿಲ್ಲ, ಆದ್ದರಿಂದ ಜಾತಿ ಗಣತಿಯನ್ನು ಇನ್ನೊಮ್ಮೆ ವೈಜ್ಞಾನಿಕ ವಾಗಿ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ವೀರಶೈವ ಲಿಂಗಾಯುತರು ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರಾಗಿದ್ದು, ನಮ್ಮನ್ನು ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಬೇಕು. ಹೀಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಅಂದಿನ ಮಹಾ ಅಧಿವೇಶನದಲ್ಲಿ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.

ಅಂದು ಬೆಳಿಗ್ಗೆ 10.30ಕ್ಕೆ ಪಂಚಪೀಠದ ಶ್ರೀ ಉಜ್ಜಯಿನಿ, ಶ್ರೀಶೈಲ ಜಗದ್ಗುರುಗಳು, ತುಮಕೂರು ಸಿದ್ದಗಂಗಾ ಶ್ರೀಗಳು, ಹರಿಹರ ಪಂಚಮಸಾಲಿ ಪೀಠದ ಸ್ವಾಮಿಗಳು, ಗದಗಿನ ಕಲ್ಲಯ್ಯಜ್ಜಯ್ಯನವರು, ಹುಬ್ಬಳ್ಳಿ ಮೂರು ಸಾವಿರ ಮಠದ ಸ್ವಾಮೀಜಿಗಳು ಸಾನಿಧ್ಯದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಹಿಸುವರು. ಅಂದಿನ ಸಮಾ ರಂಭಕ್ಕೆ ಹರಪನಹಳ್ಳಿ ತಾಲ್ಲೂಕಿ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳ ಬೇಕು ಎಂದು ಕೋರಿದರು.

ವೀರಶೈವ ಮಹಾಸಭಾದ ವಿಜಯನಗರ ಜಿಲ್ಲಾ ಉಸ್ತುವಾರಿ ಪ್ರಕಾಶ ಪಾಟೀಲ್‌ ಸಹ ಸಮಾರಂಭದ ಮಾಹಿತಿ ನೀಡಿದರು. ವೀರಶೈವ ಮಹಾಸಭಾದ ಕಾರ್ಯದರ್ಶಿ ಟಿ.ಎಂ. ಮಲ್ಲಿಕಾರ್ಜುನ ಪದಾಧಿಕಾರಿಗಳಾದ ಶಶಿಧರ ಪೂಜಾರ, ಅಂಬ್ಲಿ ಮಂಜುನಾಥ, ಹೆಚ್‌.ಎಂ. ಕೊಟ್ರಯ್ಯ, ಕಾನಹಳ್ಳಿ ರುದ್ರಪ್ಪ, ಹೆಚ್‌.ಎಂ. ಜಗದೀಶ, ವಾಗೀಶ, ಆರ್.ಎಂ. ಕೊಟ್ರಯ್ಯ, ಕಲ್ಲಹಳ್ಳಿ ಗುರುಸಿದ್ದಯ್ಯ, ವಕೀಲ ಬಸವರಾಜ, ಕಾಶಿನಾಥ ಇತರರು ಹಾಜರಿದ್ದರು.

error: Content is protected !!