ದಾವಣಗೆರೆ, ಆ. 10 – ಸ್ಥಳೀಯ ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ಓ ಕಚೇರಿ ವೃತ್ತದಿಂದ ಅಕ್ತರ್ ರಜಾ ವೃತ್ತದವರೆಗೆ ಮಹಾನಗರ ಪಾಲಿಕೆ ವತಿಯಿಂದ ಅಳವಡಿಸಲಾಗಿರುವ ಬೀದಿ ದೀಪ ವ್ಯವಸ್ಥೆಯನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ಥಳದಲ್ಲಿಯೇ ಸಿಸಿಎಂಎಸ್ ವ್ಯವಸ್ಥೆಯ ಮೂಲಕ ಇಂದು ರಾತ್ರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ವಿನಾಯಕ ಪೈಲ್ವಾನ್, ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರು ಗಳಾದ ಎ.ನಾಗರಾಜ್, ಸೈಯದ್ ಚಾರ್ಲಿ, ಜಾಕೀರ್ ಆಲಿ, ಕಬೀರ್ ಖಾನ್, ಜೆ. ಡಿ. ಪ್ರಕಾಶ್, ಉದಯ ಕುಮಾರ್, ಸುಧಾ ಇಟ್ಟಿಗುಡಿ, ಮೀನಾಕ್ಷಿ ಜಗದೀಶ್, ಪಾಮೇನಹಳ್ಳಿ ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಉಪ ಆಯುಕ್ತ ಮಂಜುನಾಥ ಚವ್ಹಾಣ್, ಕಾರ್ಯಪಾಲಕ ಅಭಿಯಂತರರಾದ ಎಂ. ಹೆಚ್. ಉದಯ ಕುಮಾರ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಸ್. ಸಂದೀಪ್ ಮತ್ತು ಪಿ. ಪಿ. ಪಿ. ಪ್ರತಿನಿಧಿ ನಾಗೇಂದ್ರ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.