ಮಾನ್ಯರೇ,
ನಮ್ಮ ರಾಜ್ಯದಲ್ಲಿ ಮೊದಲು ಮುಖ್ಯ ಕಂದಾಯ ವಿಭಾಗಗಳಿರುವ ಬೆಂಗಳೂರು, ಮಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿ ಮಹಾನಗರಗಳಲ್ಲಿ ಮಾತ್ರ ವಿಶ್ವ ವಿದ್ಯಾನಿಲಯಗಳು ಇರುತ್ತಿದ್ದವು. ಆದರೆ ಶಿಕ್ಷಣವು ವ್ಯಾಪಾರೀಕರಣಗೊಳ್ಳುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಅವು ನಾಯಿಕೊಡೆಗ ಳಂತೆ ತಲೆ ಎತ್ತುತ್ತಿರುವುದೇನೋ ಸರಿ, ಆದರೆ ಹಲವು ಕಡೆ ` ವಿಶ್ವವಿದ್ಯಾನಿಲಯ’ ಹಾಗೂ ಕೆಲವು ಕಡೆ `ವಿಶ್ವವಿದ್ಯಾಲಯ’ ಎಂದು ಹೆಸರುಗಳಿರುವುದು ಜನ ಸಾಮಾನ್ಯರಿಗೆ ಗೊಂದಲ ಉಂಟುಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳೇ ಹೀಗೆ ದ್ವಂದ್ವ ನಾಮಾವಳಿಗಳ ಫಲಕಗಳನ್ನು ಬರೆಸಿಕೊಂಡಿರುವುದು ಎಷ್ಟು ಸರಿ ?
ಅದೇ ರೀತಿ ಮಂತ್ರಾಲಯ, ಸಚಿವಾಲಯ, ಗ್ರಂಥಾಲಯ, ದೇವಾಲಯ, ಶಿವಾಲಯ, ಹೀಗೆ ಶಬ್ದಗಳ ಬಳ್ಳಿ ಕುಡಿಯೊಡೆ ದರೆ ನಾವು ಯಾವ ಕನ್ನಡ ಪದಕೋಶದಲ್ಲಿ ಹುಡುಕಬೇಕಿದೆ ? ಈ ಹಿಂದೆ ಜನಪ್ರಿಯ ಮಾಜಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ , ವಾಜಪಾಯ್ , ವಾಜಪೈ, ವಾಜಪಾಯೇ, ಎಂದೆಲ್ಲಾ ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಹೀಗೆ ಭಾಷೆ ಮತ್ತು ಉಚ್ಚಾರಗಳ ಬಳಕೆ ಸಂದರ್ಭದಲ್ಲಿ ದ್ವಂದ್ವ ಮತ್ತು ಗೊಂದಲಗಳ ನೀತಿ ಏಕೆ ?
– ಜೆ. ಎಸ್. ಚಂದ್ರನಾಥ, ನೀಲಾನಹಳ್ಳಿ, 8296522692