ಕೆರೆಯಂತಾದ ಹರಿಹರದ ಕೆಎಸ್ಆರ್‌ಸಿ ಬಸ್ ನಿಲ್ದಾಣ

ಕೆರೆಯಂತಾದ ಹರಿಹರದ ಕೆಎಸ್ಆರ್‌ಸಿ ಬಸ್ ನಿಲ್ದಾಣ

ಮಾನ್ಯರೇ,

ಮಧ್ಯ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹೊಂದಿದ ಕೈಗಾರಿಕಾ ನಗರ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಹರಿಹರೇಶ್ವರ ಭವ್ಯ ದೇವಾಲಯ ಇರುವ ಕ್ಷೇತ್ರ ಎಂದು ಗುರುತಿಸಿಕೊಂಡ ಹರಿಹರದ ಸರ್ಕಾರಿ ಬಸ್ ನಿಲ್ದಾಣವು ಮಳೆಯ ನೀರಿನಿಂದ ಕೆರೆಯಂತಾಗಿದೆ.

ಬಸ್ ನಿಲ್ದಾಣದಲ್ಲಿ ನಿಂತ ನೀರು ಹೋಗುವ ಚರಂಡಿಯಲ್ಲಿ ಕಲ್ಲು, ಮಣ್ಣು ತುಂಬಿದ್ದು, ಮಳೆಯ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಇದರಿಂದ ಪ್ರಯಾಣಿಸುವ ವೃದ್ಧರು, ಮಕ್ಕಳು, ಮಹಿಳೆಯರಿಗೆ ತೊಂದರೆಯಾಗುತ್ತಿದೆ.      ನಿಂತ ಮಳೆ ಹಾಗೂ ಕೊಳಚೆ ನೀರಿನಿಂದ  ಸಾಂಕ್ರಾಮಿಕ ರೋಗ ಭಯವೂ ಇದೆ. 

ಸುಂದರ ಇತಿಹಾಸವುಳ್ಳ ಊರಿನ ಘನತೆಯು ಕೆ.ಎಸ್.ಆರ್.ಟಿ. ಸಿ ಅಧಿಕಾರಿಗಳ ಮತ್ತು ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನೀರಲ್ಲಿ ತೇಲುತ್ತಿದೆ ಎನ್ನಬಹುದು.


– ಸುನೀಲ್ ಹರಿಹರ, ಪತ್ರಿಕೋದ್ಯಮ ವಿದ್ಯಾರ್ಥಿ

error: Content is protected !!