ಅಂಬಾಭವಾನಿ ಬ್ಯಾಂಕ್‌ಗೆ ಗೋಪಾಲರಾವ್‌ ಮಾನೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಗಿರಿಧರ್ ಡಿ.ಮೆಹರ್‌ವಾಡೆ

ಅಂಬಾಭವಾನಿ ಬ್ಯಾಂಕ್‌ಗೆ ಗೋಪಾಲರಾವ್‌ ಮಾನೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಗಿರಿಧರ್ ಡಿ.ಮೆಹರ್‌ವಾಡೆ - Janathavaniದಾವಣಗೆರೆ, ಜು. 25- ಸ್ಥಳೀಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶ್ರೀ  ಅಂಬಾಭವಾನಿ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮರಾಠ ಸಮಾಜದ ಹಿರಿಯ ಮುಖಂಡ ಗೋಪಾಲರಾವ್ ಮಾನೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಸ್.ಎಸ್.ಕೆ. ಸಮಾಜದ ಮುಖಂಡರೂ, ಶ್ರೀ ಭವಾನಿ ಗ್ಲಾಸ್ ಅಂಡ್ ಪ್ಲೈವುಡ್ಸ್ ಮಾಲೀಕರೂ ಆದ ಗಿರಿಧರ್ ಡಿ. ಮೆಹರ್‌ವಾಡೆ ಚುನಾಯಿತಗೊಂಡಿದ್ದಾರೆ.

ಕಳೆದ ವಾರ ಜರುಗಿದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯ ನಂತರ ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಗೋಪಾಲರಾವ್ ಮಾನೆ ಅವರ ಹೆಸರನ್ನು ನಿರ್ದೇಶಕ ಬಾಬುರಾವ್ ಎಸ್. ಸಾಳಂಕಿ ಸೂಚಿಸಿದಾಗ, ಅದನ್ನು  ಗಿರಿಧರ್ ಡಿ. ಮೆಹರ್‌ವಾಡೆ ಅನುಮೋದಿಸಿದರು.

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ  ಗಿರಿಧರ್ ಡಿ. ಮೆಹರ್‌ವಾಡೆ ಅವರ ಹೆಸರನ್ನು ನಿರ್ದೇಶಕ ರಾಜು ಎಲ್. ಬದ್ದಿ ಅವರು ಸೂಚಿಸಿದಾಗ ಅದನ್ನು ಗೋಪಾಲರಾವ್ ಮಾನೆ ಅನುಮೋದಿಸಿದರು.

ನೂತನ ನಿರ್ದೇಶಕರುಗಳಾದ ಆರ್.ಜಿ. ಸತ್ಯನಾರಾಯಣ, ಆನಂದ್ ಡಿ. ಸಫಾರೆ, ಕೆ. ಗಣೇಶ್, ಎಸ್.ಕೆ. ಮಧುಕರ್, ಆರ್. ವಿಠ್ಠಲ್, ವಿ. ಮನೋಹರ್, ವೈದ್ಯರಾದ ಡಾ. ಎಸ್. ರಜನಿ, ಬಾಬು, ಶ್ರೀಮತಿ ಅನಿತಾಬಾಯಿ ಮಾಲತೇಶರಾವ್ ಜಾಧವ್, ಶ್ರೀಮತಿ ರೇಣುಕಾಬಾಯಿ, ಜಿ. ಯಲ್ಲಪ್ಪ ಅವರುಗಳು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಸಹಕಾರ ಸಂಘಗಳ ದಾವಣಗೆರೆ ಉಪವಿಭಾಗದ ಸಹಾಯಕ ನಿಬಂಧಕರ ಕಛೇರಿಯ ಹಿರಿಯ ನಿರೀಕ್ಷಕ ಎಲ್. ಸತೀಶ್‌ನಾಯ್ಕ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಬ್ಯಾಂಕಿನ ವ್ಯವಸ್ಥಾಪಕ  ನಾಗರಾಜ್ ಗೌಡನಕಟ್ಟಿ ಮತ್ತು ಸಹಾಯಕ ವ್ಯವಸ್ಥಾಪಕ ಅನಿಲ್ ಟಿ. ಮಾಳದಕರ್ ಮತ್ತು ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು, ಲೋನ್ ರಿಕವರಿ ಆಫೀಸರ್‌ ಅವರು ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.

ಗಣ್ಯರ ಅಭಿನಂದನೆ : ಚುನಾವಣೆ ನಡೆದ  ನಂತರ ಏರ್ಪಾಡಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ  ಯಶವಂತ್‌ರಾವ್ ಜಾಧವ್, ಮಾಲತೇಶರಾವ್ ಡಿ. ಜಾಧವ್, ಕಿರಣ್ ಕುಮಾರ್ ಎ., ಮಲ್ಲರಸಾ ಕಾಟ್ವೆ, ಅರವಿಂದ್ ಎಲ್. ಬದ್ದಿ, ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನೆ ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಎಸ್.ಎಸ್.ಕೆ. ಸಮಾಜದ ಮುಖಂಡರು ಮತ್ತಿತರರು ಮಾತನಾಡಿ ಶುಭ ಹಾರೈಸಿದರು.

ಗಣ್ಯರಾದ ಎ.ಜಿ. ವಿಠ್ಠಲ್, ಆಲೂರು ಜಯಣ್ಣ,  ಮಲ್ಲಿಕಾರ್ಜುನ, ಪುತ್ತೂರು ಶಲ್ಯವೈದ್ಯ, ದೇವೇಂದ್ರರಾವ್ ಮಾನೆ, ಸುಪ್ರೀತ್‌ ರಾವ್ ಮಾನೆ, ಮಂಜು ಜಾಧವ್, ವಿಠೋಬರಾವ್, ಆಲೂರು ಭೀಮಣ್ಣ, ತಿಮ್ಮಣ್ಣ, ಸಂತೋಷ್ ಪೈಲ್ವಾನ್, ಪ್ರವೀಣ್ ರಾವ್ ಜಾಧವ್, ಚಂದ್ರಪ್ಪ ಮತ್ತಿತರರು ಭಾಗವಹಿಸಿ, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!