ಏರ್ ಇಂಡಿಯಾದ ಅತ್ಯಂತ ದೀರ್ಘ ಎತ್ತರ ಜಿಗಿತ

ಏರ್ ಇಂಡಿಯಾದ ಅತ್ಯಂತ ದೀರ್ಘ ಎತ್ತರ ಜಿಗಿತ - Janathavaniತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಳೆದ ಭಾನುವಾರ ಜು.23 ರಂದು ಮಧ್ಯಾಹ್ನ 2 ಗಂಟೆಗೆ ಏರ್ ಇಂಡಿಯಾ ಬೋಯಿಂಗ್ 787 ವಿಮಾನ ಏರಿದಾಗ, ಅದು ಘರ್ಜಿಸುತ್ತಾ ನಭಕ್ಕೆ ಹಾರಿತು. ಬೆಂಗಳೂರಿಗೆ ವಿದಾಯ ಹೇಳಿದ ಅದು ಮುಖ ಮಾಡಿದ್ದು ಉತ್ತರ ಅಮೆರಿಕಾದ ಸ್ಯಾನ್‌ಫ್ರಾನ್ಸಿಸ್ಕೋದತ್ತ. ಪ್ರಯಾಣಿಕರ ಸುರ ಕ್ಷತಾ ದೃಷ್ಟಿಯಿಂದ ಗಗನಸಖಿ ಹಲವಾರು ಪ್ರಕಟಣೆಗಳನ್ನು ಮಾಡಿದರಲ್ಲದೇ, ಕೆಲವು ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಿದರು.

ಆದರೆ ತರಗತಿಯಲ್ಲಿ ಶಿಕ್ಷಕ, ಶಿಕ್ಷಕಿಯರ ಮಾತಿಗೆ ಕಿವಿಗೊಡದ ತುಂಡ ಹುಡುಗರಂತೆ ಯಾವ ಪ್ರಯಾಣಿಕರೂ ಆಕೆಯ ಮಾತುಗಳ ಕಡೆ ಗಮನ ಕೊಡಲಿಲ್ಲ. ಅಷ್ಟೇ ಏಕೆ ತಮ್ಮ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕರನ್ನೂ ಅವರು ತಲೆ ಎತ್ತಿ ನೋಡಲಿಲ್ಲ. ತಮ್ಮ ಮೊಬೈಲ್‌ಗಳಲ್ಲಿ ತಲ್ಲೀನರಾಗಿದ್ದ ಎಲ್ಲರೂ ತಮ್ಮದೇ ಜಗತ್ತಿನಲ್ಲಿ ವಿಹರಿಸುತ್ತಿದ್ದರು.

ಸ್ವಲ್ಪ ಹೊತ್ತಿನಲ್ಲಿಯೇ ಗಗನಸಖಿ ನಮ್ಮ ಹತ್ತಿರ ಬಂದು, ವಿನಯದಿಂದ ಕುಡಿಯಲು ತಮಗೇನು ಬೇಕು? ಎಂದು ಕೇಳಿದರು. ಅವರ ಕೈಲಿದ್ದ ಟ್ರೇನಲ್ಲಿ ಎರಡು ಗ್ಲಾಸ್‌ಗಳಲ್ಲಿ ಒಂದು ಮಜ್ಜಿಗೆ, ಮತ್ತೊಂದು ಕಿತ್ತಳೆ ಹಣ್ಣಿನ ರಸ ಎಂಬುದನ್ನು ಗಮನಿಸಿದ್ದ ನಾವು ` ಮಜ್ಜಿಗೆ’ ಎಂದು ಸೂಚಿಸಿ ದರು. ಮಜ್ಜಿಗೆಯನ್ನು ಕನ್ನಡ ದಲ್ಲಿ ಶಿವಧ್ಯಾನ ಎನ್ನುತ್ತಾರೆ. ಅದು ದೇವರ ಕೊಡುಗೆ ಎಂದ ರ್ಥ. ಅಸಿಡಿಟಿ ಇರುವವರೆಗೆ ಅದು ರಾಮಬಾಣ. ನಾವು ಮಜ್ಜಿಗೆ ಗ್ಲಾಸ್ ತೆಗೆದುಕೊಂಡ ನಂತರ ಗಗನಸಖಿ ನಮಗೆ ಹಲವು ವಾರಪತ್ರಿಕೆಗಳನ್ನು ಕೊಟ್ಟರು. ಮಜ್ಜಿಗೆ ನಮ್ಮ ಹೊಟ್ಟೆಗೆ ಆಧಾರವಾದರೆ, ಆ ಪತ್ರಿಕೆಗಳು ನಮ್ಮ ಮೆದುಳಿಗೆ ಆಹಾರ ಆದವು.

ಗಣಿತದ ಲೆಕ್ಕಾಚಾರಗಳು ಯಾವಗಲೂ ಸತ್ಯವೆಂದು ಹೇಳಲಾಗದು. ಆ ಏರ್ ಇಂಡಿಯಾ ವಿಮಾನದ ಬೆಂಗಳೂರು ನಿರ್ಗಮನದ ಸಮಯ ಮಧ್ಯಾಹ್ನ 2  ಗಂಟೆ ಹಾಗೂ ಉತ್ತರ ಅಮೆರಿಕಾದ ಸ್ಯಾನ್‌ಪ್ರಾನ್ಸಿಸ್ಕೋ ನಗರದಲ್ಲಿ ಅದರ ಆಗಮನದ ಸಮಯ ಅದೇ ದಿನ ಸಂಜೆ 6 ಗಂಟೆ. ಅಂದರೆ ಪ್ರಯಾಣದ ಅವಧಿ ಕೇವಲ ನಾಲ್ಕು ಗಂಟೆ. ಭಾರತ ಹಾಗೂ ಅಮೆರಿಕಗಳಲ್ಲಿ 12 ಗಂಟೆ 30 ನಿಮಿಷಗಳ ವ್ಯತ್ಯಾಸವಿದೆ. ಹೀಗಾಗಿ ಸ್ಯಾನ್‌ಫ್ರಾನ್ಸಿಸ್ಕೋ ತಲುಪಲು ವಿಮಾನ ತೆಗೆದುಕೊಂಡಿದ್ದು ವಾಸ್ತವವಾಗಿ 16 ಗಂಟೆ, 30 ನಿಮಿಷಗಳ ಈ ಅವಧಿಯಲ್ಲಿ ಅದು ಸುಮಾರು 14000 ಕಿ.ಮೀ. ಅಂತರಿಕ್ಷ ದೂರವನ್ನು ಕ್ರಮಿಸಿತ್ತು. ಕಳೆದ ನಾಲ್ಕು ದಶಕಗಳಲ್ಲಿ ಇದು ನಮ್ಮ ಅತ್ಯಂತ ದೀರ್ಘ ವಿಮಾನ ಪ್ರಯಾಣ ಎಂದು ಶ್ರೀಗಳು ಹೇಳಿದ್ದಾರೆ.

ಅಮೆರಿಕಾ ದೇಶವನ್ನು ಪಾಶ್ಚಿಮಾತ್ಯ ದೇಶ ಎಂದು ಕರೆಯುವುದು ತಪ್ಪೆಂದು ಕಾಣುತ್ತದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳೆಂಬುದು ಸಂಪೂರ್ಣ ಸತ್ಯ ವಲ್ಲ. ನೀವು ನಿಂತ ಜಾಗಕ್ಕೆ ಅವು ಸಾಪೇಕ್ಷತೆ ಹೊಂದಿರುತ್ತವೆ. ನಮ್ಮ ವಿಮಾನವು ಪ್ರಾರಂಭ ದಲ್ಲಿ ಹೊರಟಿದ್ದು ಪಶ್ಚಿಮಾಭಿಮುಖವಾಗಿ ಆದರೆ ಅದು ನಿಗದಿತ ಎತ್ತರ ತಲುಪಿದ ನಂತರ ಪೂರ್ವಾಭಿಮುಖವಾಯಿತು. ಇದನ್ನು ವಿಮಾನ ಚಾಲಕ ಕ್ಯಾಪ್ಟನ್ ಅಭಿ ರಾಜ್ ಪ್ರಕ ಟಿಸಿದಾಗ ನಾವು ನಿಬ್ಬೆರಗಾದೆವು. ಅಮೆರಿಕವು ನಿಸ್ಸಂಶಯವಾಗಿಯೂ ಪಾಶ್ಚಿಮಾತ್ಯ ದೇಶವೇ. ಆದರೆ ನಾವು ಪೂರ್ವದ ಭಾರತ ದೇಶದ ಕಡೆಯಿಂದ ಅಮೆರಿಕಾ ಪಶ್ಚಿಮ ತೀರದ ಸ್ಯಾನ್‌ಫ್ರಾನ್ಸಿಸ್ಕೋ ನಗರವನ್ನು ತಲುಪಿದ್ದೆವು. ಇದಕ್ಕೆ ಭೂಮಿಯ ಅಂಡಾಕಾರವಾಗಿರುವುದು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ ಶ್ರೀಗಳು.

ಜಾಗತಿಕ ವಿಮಾನಯಾನ ಸ್ಪರ್ಧೆಯಲ್ಲಿ ಈ ವಿಮಾನವು ಏರ್ ಇಂಡಿಯಾದ ಅತ್ಯಂತ ದೀರ್ಘ ಎತ್ತರ ಜಿಗಿತವೆಂದು ನಮಗೆ ಭಾಸವಾಯಿತು.

ಸಂಜೆಯ ತಿಂಡಿಯನ್ನು ಕೊಟ್ಟನಂತರ, ಗಗನಸಖಿಯು ಆ ಸುಂದರ ಲೋಹದ ಹಕ್ಕಿ ಯಲ್ಲಿದ್ದ ಸುಮಾರು 250 ಪ್ರಯಾಣಿಕರಿಗೆ ಇತಿಹಾಸದ ಗಗನ ಶಿಕ್ಷಕಿಯಾದರು. ಆಕೆಯು ಭಾರತ ಸ್ವಾತಂತ್ರ್ಯ ಚಳವಳಿಯ ಕೆಳ ಕಂಡ ಪ್ರಸಂಗವನ್ನು ಕುರಿತು ಹೇಳಿದಾಗ ನಮ್ಮಲ್ಲಿ ಸ್ಫುರಿಸಿದ ಗಾಢ ದೇಶಭಕ್ತಿಯ ಭಾವ ದಿಂದಾಗಿ ನಾವು ಮೂಕ ವಿಸ್ಮಿತರಾದೆವು ಎಂದು ಶ್ರೀಗಳು ಅನುಭವ ಹಂಚಿಕೊಂಡಿದ್ದಾರೆ.


ಪ್ರೊ. ಎಸ್.ಬಿ.ರಂಗನಾಥ್‌
ದಾವಣಗೆರೆ.

error: Content is protected !!