ಸರ್ಕಾರ ಅವಿವಾಹಿತರಿಗೆ ಕಂಕಣ ಭಾಗ್ಯ ನೀಡಲಿ

ಮಾನ್ಯರೇ, 

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದಾಖಲೆಯ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದು, ತನ್ನ  ಭರವಸೆಗಳನ್ನೆಲ್ಲಾ ಈಡೇರಿಸುವತ್ತ ದಾಪುಗಾಲಿಟ್ಟಿದೆ. ಕೆಲ ಜನಪ್ರಿಯ ಯೋಜನೆಗಳೇ ಕಾಂಗ್ರೆಸ್‌ನ ಈ ಬಹುಮತಕ್ಕೆ ಕಾರಣವೂ ಎನ್ನಬಹುದು. ಆದರೆ, ರಾಜ್ಯದಲ್ಲಿ ಅವಿವಾಹಿತ ಯುವಕರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಲೇ ಇದೆ.  ರೈತಾಪಿ, ಬಡ ಮತ್ತು ಮಧ್ಯಮ ವರ್ಗದ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕಾರಣ ಹುಡುಗ ಸರ್ಕಾರಿ ನೌಕರಿಯಲ್ಲಿರಬೇಕು, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಿನ್ನೆಲೆ ಯಳ್ಳವರಾಗಿರಬೇಕು ಎಂಬ ಮನಸ್ಥಿತಿ. ಸರ್ಕಾರಿ ನೌಕರಿ ಎಂಬುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಎಂದು ಬಹುಶಃ ತಿಳಿದಿರಬಹುದೇನೋ ಈ ಹೆಣ್ಣೆತ್ತವರು, ನಿಜಕ್ಕೂ ನಾ ಕಾಣೆ. `ಹೆಣ್ಣಿನ ಸಮಸ್ಯೆ’ ಎಂಬುದು ಕಣ್ಣಿಗೆ ಕಾಣದ ರಾಜ್ಯದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಆದ ಕಾರಣ,  ಸರ್ಕಾರವು ರಾಜ್ಯದ ಎಲ್ಲಾ ವರ್ಗದವರಿಗೂ ಭಾಗ್ಯಗಗಳನ್ನು  ನೀಡಿದ ಹಾಗೆ ಅವಿವಾಹಿತ ಯುವಕರಿಗೆ ಯಾವ ರೂಪದಲ್ಲಾದರೂ ಕೂಡ ಕಂಕಣ ಭಾಗ್ಯ  ನೀಡಬೇಕಾಗಿದೆ.


– ಮುರುಗೇಶ ಡಿ., ಹವ್ಯಾಸಿ ಬರಹಗಾರರು,  ದಾವಣಗೆರೆ.

error: Content is protected !!