ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ

ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ

ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ ಈ ದಿನ ವನ್ನು ಅಂತರರಾಷ್ಟ್ರೀಯ ಜನಸಂಖ್ಯಾ ದಿನವನ್ನಾಗಿ ಆಚರಿಸಲಾ ಗುವುದು. ಜನಸಂಖ್ಯಾ ಸ್ಪೋಟದಿಂದ ಆಗುವ ಸಮ ಸ್ಯೆಗಳು, ಅವುಗಳ ನಿವಾರಣೆಗಾಗಿ ಕೈಗೊಳ್ಳುವ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ದಿನ.

1987 ರ ಜುಲೈ 11ರಂದು ವಿಶ್ವದ ಜನಸಂಖ್ಯೆ 5 ಬಿಲಿಯನ್ (500 ಕೋಟಿ) ತಲುಪಿದ್ದರ ನೆನಪಿಗಾಗಿ ವಿಶ್ವಸಂಸ್ಥೆ ಈ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲು ಘೋಷಿಸಿದ ದಿನ ಇದು. ಈ ದಿನ ಪ್ರತಿಯೊಬ್ಬ ಪ್ರಜೆ, ಜನಸಂಖ್ಯಾ ಸ್ಪೋಟದಿಂದಾಗುವ ಸಮಸ್ಯೆಗಳಲ್ಲಿ ಲಿಂಗ ಸಮಾನತೆ, ಕುಟುಂಬ ಯೋಜನೆಯ ಮಹತ್ವ, ಬಡನತ, ಅಜ್ಞಾನ, ಮಾನವ ಹಕ್ಕುಗಳ ಬಗ್ಗೆ, ಬಾಣಂತಿಯರ ಹಾಗೂ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಚಿಂತಿಸುವ ದಿನ ಇದಾಗಿದೆ.

ಈ ದಿನದಂದು ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯ ಕಡೆಗೆ ಜಾಗತಿಕ ಗಮನ ಸೆಳೆಯುವ ಗುರಿ ಹೊಂದಬೇಕಾಗಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳು, ಹವಾಮಾನ, ಮಾಲಿನ್ಯ ಮತ್ತು ಒಟ್ಟಾರೆ ಗ್ರಹದ ಮೇಲೆ ಬೀರುವ ಪರಿಣಾಮವಾಗಿದೆ. ಪ್ರಸ್ತುತ ವಿಶ್ವ ಜನಸಂಖ್ಯೆಯು 7.9 ಶತಕೋಟಿಯ ಸಮೀಪದಲ್ಲಿದೆ. ನಾವು ಈ ಲೇಖನ ಓದುತ್ತಿರುವಂತೆ ಪ್ರತಿ ಸೆಕೆಂಡಿಗೆ ಮಾರ್ಗವನ್ನು ಹುಡುಕುವ ತುರ್ತು ಅವಶ್ಯಕತೆ ಇದೆ.

ವಿಶ್ವ ಜನಸಂಖ್ಯೆಯ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಕೆಲವು ಆಘಾತಕಾರಿ ಸಂಗತಿಗಳು ಇಲ್ಲಿವೆ 

* 1800ರ ದಶಕದಲ್ಲಿ ವಿಶ್ವದ ಜನಸಂಖ್ಯೆಯು ಒಂದು ಬಿಲಿಯನ್ ಆಗಿತ್ತು. ಈಗ ಪ್ರತಿ 12-15 ವರ್ಷಗಳಿಗೊಮ್ಮೆ ಒಂದು ಶತಕೋಟಿಯನ್ನು ಸೇರಿಸಲಾಗುತ್ತದೆ.

* 2024ರ ವೇಳೆಗೆ ಭಾರತವು ಚೀನಾ ಬಿಟ್ಟು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ.

* ಈ ಪ್ರಸ್ತುತ ಬೆಳವಣಿಗೆ ಗಮನಿಸಿದರೆ, 2050ರ ಹೊತ್ತಿಗೆ ಬದುಕುಳಿಯಲು 3 ಭೂಮಿಗಳು ಬೇಕಾಗುತ್ತವೆ.

* ನಮ್ಮ ಜನಸಂಖ್ಯೆಯು 1970ರಲ್ಲಿದ್ದಂತ ಎರಡು ಪಟ್ಟು ಹೆಚ್ಚಾಗಿದೆ.

* ಜನಸಂಖ್ಯಾ ಸ್ಪೋಟವು ಪರಿಸರ ಹಾನಿಯ ಪ್ರಾಥಮಿಕ ಮೂಲವಾಗಿದೆ.

* ವೇಗದ ಜನಸಂಖ್ಯೆಯ ಬೆಳವಣಿಗೆ ಮತ್ತು ತಾಂತ್ರಿಕ ಆವಿಷ್ಕಾರಗಳು, ನೈಸರ್ಗಿಕ ಅವ್ಯವಸ್ಥೆಯನ್ನು ಸೃಷ್ಟಿಸಿದೆ.

* ಮನುಷ್ಯನಿಗೆ ಜೀವನಾಧಾರವನ್ನು ಉತ್ಪಾದಿಸುವ ಭೂಮಿಯಲ್ಲಿರುವ ಶಕ್ತಿಗಿಂತ ಜನಸಂಖ್ಯೆಯ ಶಕ್ತಿಯು ಅನಿರ್ದಿಷ್ಟವಾಗಿ ದೊಡ್ಡದಾಗಿದೆ.

* ನಾವು ವಿಶ್ರಮಿಸಿಕೊಳ್ಳುವ ಸಮಯ ಕಳೆದುಹೋಗಿವೆ. ನಮ್ಮ  ಮುಂಬರುವ ಪೀಳಿಗೆಗೆ ಸಹಾಯ ಮಾಡಲು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಅನಿವಾರ್ಯತೆಯಿದೆ.

* ಆರೋಗ್ಯದ ಸುಧಾರಣೆ, ಮಹಿಳೆಯರ ಸಬಲೀಕರಣದಿಂದ ಜನಸಂಖ್ಯೆಯ ಬೆಳವಣಿಗೆಯು ಕಡಿಮೆಯಾಗುತ್ತದೆ.

* ಜನಸಂಖ್ಯೆಯ ಹೆಚ್ಚಳದ ಪರಿಣಾಮದಿಂದ ದರದೊಂದಿಗೆ ಜನಸಂಖ್ಯೆಯು ಆಹಾರದ ಮೂಲಭೂತ ಹಕ್ಕು ಬೆಳೆಯುತ್ತಿದೆ.

* ಶಿಕ್ಷಣವೂ ಒಂದು ದಿನ ಐಷಾರಾಮಿ ಆಗಬಹುದು.

ಈ ವರ್ಷ ಮಹೋತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂತೋಷ ಮತ್ತು ಸಮೃದ್ಧಿ ಸಮಾಜ ನಿರ್ಮಿಸಲು, ಕುಟುಂಬ ಯೋಜನೆಯನ್ನು ಪಾಲಿಸುವ ಪಣ ತೊಡಬೇಕಾಗಿದೆ. ಪ್ರತಿಯೊಬ್ಬರಿಗೂ ಕುಟುಂಬ ಯೋಜನೆ, ಲಿಂಗ ಸಮಾನತೆ, ಬಾಲ್ಯವಿವಾಹ, ಮಾನವ ಹಕ್ಕುಗಳು, ಆರೋಗ್ಯದ ಹಕ್ಕು, ಶಿಶು ಮತ್ತು ಮಹಿಳೆಯರ ಆರೋಗ್ಯ ಬಗ್ಗೆ ಅರಿವು ಮೂಡಿಸಬೇಕಿದೆ.

ವಿಶ್ವ ಜನಸಂಖ್ಯಾ ದಿನಾಚರಣೆ-ಸಂತಾನೋತ್ಪತ್ತಿ ಪ್ರಕ್ರಿಯೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುವುದರ ಬಗ್ಗೆ ಅಭಿವೃದ್ಧಿ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಫೋಕಸ್ ಮಾಡಬೇಕಿದೆ. ಜನಸಂಖ್ಯೆಯಿಂದ ಹೆಚ್ಚಿದ ಬಡತನ, ಬಡತನದಿಂದ ಅಜ್ಞಾನ, ಅಜ್ಞಾನದಿಂದ ಅವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಾನವ ಸಂಪನ್ಮೂಲ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳಿಗಿಂತ ಹೆಚ್ಚಿನ ಶಕ್ತಿ ಹೊಂದಿದ್ದಾದರೂ, ಅತಿಯಾದ ಜನಸಂಖ್ಯೆ ವಿಶ್ವಕ್ಕೆ ಶಾಪವಾಗಿ ಪರಿಣಮಿಸಿದೆ. ಪ್ರತಿಯೊಬ್ಬ ಮನುಷ್ಯ ಶಿಕ್ಷಣ ಪಡೆದು, ಸಂಸ್ಕಾರವಂತನಾಗಿ, ದುಡಿಮೆ ಮಾಡಿ ತಾನು, ತನ್ನ ಕುಟುಂಬ, ತನ್ನ ಸಮಾಜ, ತನ್ನ ದೇಶ ಎಂದು ಭಾವಿಸಿ, ತಾನೂ ಅಭಿವೃದ್ಧಿ ಹೊಂದುತ್ತಾ, ದೇಶವನ್ನೂ ಅಭಿವೃದ್ಧಿ ಪಥದತ್ತ ನಡೆಸಿದರೆ ಮಾನವ ಸಂಪನ್ಮೂಲ ಪರಿಸರಕ್ಕೆ ವರವಾಗಬಹುದು.

ಇದೆಲ್ಲರ ನಡುವೆ, ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರ ಜನಸಂಖ್ಯೆ ನಿಯಂತ್ರಿಸಲು ತಮ್ಮದೇ ಆದ ಕ್ರಮ ತೆಗೆದುಕೊಳ್ಳಲಿ.

ಬಿಟ್ಟಿಯಾಗಿ, ಪುಕ್ಕಟೆಯಾಗಿ ಏನನ್ನೂ ಕೊಡದೇ, 6 ರಿಂದ 14 ವರ್ಷ ವಯಸ್ಸಿನ ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗುವಂತಾಗಲಿ. ಆರ್‌ಟಿಇ ಸೀಟುಗಳ ಅಡಿಯಲ್ಲಿ ಶಿಕ್ಷಣ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಮಾತ್ರ ಸಿಗುವ ವ್ಯವಸ್ಥೆ ರೂಪುಗೊಳ್ಳಲಿ. ಓದಿದ ನಿರುದ್ಯೋಗಿಗಳಿಗೆ ಸರ್ಕಾರ ಯಾವುದಾದರೂ ದುಡಿಯುವ ಕೆಲಸ ಕೊಡಲಿ. ಇಂತಹ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸರ್ಕಾರ ಗಮನ ಹರಿಸಲಿ. ಯಾವ ದಂಪತಿಗೆ ಒಂದು ಮಗು ಇದೆಯೋ ಅವರಿಗೆ ಮಾತ್ರ ಸರ್ಕಾರಿ ನೌಕರಿ ಲಭಿಸುವ ಯೋಜನೆ ರೂಪುಗೊಳ್ಳಲಿ. ಕುಟುಂಬ ಯೋಜನೆ ಕಡ್ಡಾಯವಾಗಲಿ.

ಏಕೆಂದರೆ, ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಮೂಲ ಜನಸಂಖ್ಯಾ ಬೆಳವಣಿಗೆ. ಇದನ್ನು ಕಡೆಗಣಿಸಿ, ನಿರ್ಲಕ್ಷಿಸಿದರೆ ಮುಂದೊಂದು ದಿನ ನಿಂತು ನಿದ್ರಿಸುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸರ್ಕಾರಿ ನೌಕರಿಗೆ ಸಿಗುವ ಎಲ್ಲಾ ಅರ್ಹತೆಗಳ ಜೊತೆಗೆ ಒಂದು ದಂಪತಿಗೆ ಒಂದು ಮಗು ಎಂಬ ನಿಯಮದ ವ್ಯವಸ್ಥೆ ರೂಪುಗೊಂಡರೆ ಉತ್ತಮವಲ್ಲವೇ? ಚೀನಾದಲ್ಲಿ 2-2ಕ್ಕಿಂತ ಹೆಚ್ಚು ಮಕ್ಕಳಾದರೆ ಕಂಡಲ್ಲಿ ಗುಂಡು ಜಾರಿಗೆ ಬಂದಿರುವ ನಿಯಮ ನಮ್ಮಲ್ಲಿ ಬೇಕಾ?


ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ - Janathavaniಡಾ. ಅನಿತಾ ಹೆಚ್. ದೊಡ್ಡಗೌಡರ್
99021 98655

error: Content is protected !!