ಕರ್ನಾಟಕ ರಾಜ್ಯ ಬಜೆಟ್-2023 ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳು

ಮಾನ್ಯರೇ, 

ಮುಖ್ಯಮಂತ್ರಿಗಳು ಜುಲೈ 7 ರಂದು (ಇಂದು) ಮಂಡಿಸಲಿರುವ ಬಜೆಟ್‌ ಮೇಲೆ ರಾಜ್ಯದ ಜನರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ನಮ್ಮ ದಾವಣಗೆರೆ ಜಿಲ್ಲಾವಾರು, ಅನೇಕ ಬೇಡಿಕೆಗಳು ಇಟ್ಟುಕೊಂಡಿದ್ದಾರೆ.     

1.  ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಚುರುಕಿಗೆ ವಿಶೇಷ 500 ಕೋಟಿ ಅನುದಾನ.

2.  ದಾವಣಗೆರೆ ಜಿಲ್ಲೆ ಐಟಿ ಪಾರ್ಕ್‌ (ಹೊಸ ಜಾಗದಲ್ಲಿ, ಹೊಸ IT ಪಾರ್ಕ್ ಸ್ಥಾಪನೆ)  ವಿಶೇಷ 100 ಕೋಟಿ ಅನುದಾನ ಬೇಕು ಎಂಬುದು ಜನರ ಬಹುದಿನದ ಬೇಡಿಕೆ.

3.  ಪ್ರವಾಸೋದ್ಯಮಕ್ಕೆ ಬೇಕಾದ ಯೋಜನೆ ಜನರ ನಿರೀಕ್ಷೆ (ಶಾಂತಿಸಾಗರ, ಕೊಂಡಜ್ಜಿ, ಹರಿಹರ, ಅನಗೋಡು ಪಾರ್ಕ್).

4.  ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ  ಜವಳಿ ಪಾರ್ಕ್ ನಿರ್ಮಾಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್‌ ಬ್ಯಾಂಕ್‌.

5.  ರೈಲ್ವೆ, ಹೆದ್ದಾರಿ ಯೋಜನೆಗಳಿಗೆ 3,000 ಕೋಟಿ (ಸ್ಪೆಷಲ್‌ ಪ್ಯಾಕೇಜ್‌) ಹಣ ಬಿಡುಗಡೆ ಮಾಡಬೇಕು.

6.  ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ ಜೊತೆ ಇತರೆ ಕೈಗಾರಿಕೆಗಳು, ಜಿಲ್ಲೆಯಲ್ಲಿ ಸೆಜ್, ಕೈಗಾರಿಕಾ ಕಾರಿಡಾರ್‌ ಸ್ಥಾಪನೆ ಮಾಡಬೇಕು.

7.  ದಶಕದಿಂದ ಬೇಡಿಕೆ, ದಾವಣಗೆರೆ ವಿಮಾನ ನಿಲ್ದಾಣಕ್ಕೆ ಮಂಜೂರು ಹಾಗು ಅನುದಾನ (ಉಡಾನ್‌ ಯೋಜನೆಯಡಿ ದಾವಣಗೆರೆ ವಿಮಾನ ನಿಲ್ದಾಣ ನಿರ್ಮಾಣ). ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕಿದೆ. ಪಾಳು ಬಿದ್ದಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್‌ ಕೈಗಾರಿಕೆಗಳನ್ನು ಸೆಳೆಯಬೇಕು.

8.  ಭದ್ರಾ ನದಿಯ ಹೂಳು ತೆಗೆದರೆ ದಾವಣಗೆರೆ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗಲಿದೆ.

9. ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನು ಚುರುಕುಗೊಳಿಸಬೇಕು.

10.  ಸ್ಥಳೀಯ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಒತ್ತು ನೀಡಲಿ.

11.  ದಾವಣಗೆರೆ ಹೊರ ವರ್ತುಲ ರಸ್ತೆಗೆ 500 ಕೋಟಿ ಅನುದಾನ.

12. ದಾವಣಗೆರೆ ಸಾಲುಮರದ ತಿಮಕ್ಕ ಉದ್ಯಾನವನ ನಿರ್ಮಾಣ ಮಾಡಬೇಕು (ಅನಗೋಡು ಹಾಗು ಬಾತಿಯಲ್ಲಿ).

13.  ದಾವಣಗೆರೆ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ,  ಕೆರೆ ತುಂಬಿಸುವ ಯೋಜನೆ ಅನುಷ್ಠಾನವಾಗಬೇಕು.

14.  ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್‌ ಪಾರ್ಕ್ ಆರಂಭಿಸಬೇಕು.

15. ದಾವಣಗೆರೆ ಟ್ರಾಫಿಕ್‌ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ, ಟರ್ಮಿನಲ್ ನಿರ್ಮಾಣ ಮಾಡಬೇಕು – ಸಿಟಿ ಮೇಲೆ ಟ್ರಾಫಿಕ್ ಸಮಸ್ಯೆ  ಕಡಿಮೆ ಆಗುತ್ತದೆ.

16.  ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ, ಸುಸಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು.


– ರೋಹಿತ್  ಎಸ್. ಜೈನ್, ಮುಖ್ಯ ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ.

error: Content is protected !!