ಮಳೆಗಾಗಿ ದುಗ್ಗಮ್ಮನ ಗುಡಿಯಲ್ಲಿ ಎಡೆ ಜಾತ್ರೆ

ಮಳೆಗಾಗಿ ದುಗ್ಗಮ್ಮನ ಗುಡಿಯಲ್ಲಿ ಎಡೆ ಜಾತ್ರೆ

ಮಳೆಗಾಗಿ ದುಗ್ಗಮ್ಮನ ಗುಡಿಯಲ್ಲಿ ಎಡೆ ಜಾತ್ರೆ - Janathavaniಸಂಜೆ ನಗರದಲ್ಲಿ ಮಳೆ ಭಕ್ತರಲ್ಲಿ ಹರ್ಷದ ಹೊಳೆ

ದಾವಣಗೆರೆ, ಜು. 20- ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಮಳೆಗಾಗಿ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಎಡೆ ಜಾತ್ರೆ ನಡೆಸಲಾಯಿತು.

ಬೆಳಿಗ್ಗೆಯಿಂದಲೇ ನಗರದ ವಿವಿಧ ಭಾಗಗಳಿಂದ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಹೋಳಿಗೆ, ತುಪ್ಪ ಮೊದಲಾಗಿ ಸಿಹಿ ಎಡೆ ಮಾಡಿ ಕೊಂಡು ಬಂದು ದೇವತೆಗೆ ಅರ್ಪಿಸಿ, ಮಳೆಗಾಗಿ ಪ್ರಾರ್ಥಿಸಿ ದರು. ಇದಕ್ಕೂ ಮುನ್ನ ದೇವಿಗೆ ವಿಶೇಷ ಪೂಜೆ ನಡೆಸಿ, ಅಲಂಕರಿಸಲಾಗಿತ್ತು. ದೇವಸ್ಥಾನದ ಪುರೋಹಿತ ನಾಗರಾಜ್ ಜೋಯಿಸ್ ಹಾಗೂ ಸಂಗಡಿಗರು ಎಡೆ ಜಾತ್ರೆ ನಡೆಸಿಕೊಟ್ಟರು.

ಮಳೆ ಬಾರದೇ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇತ್ತ ವ್ಯಾಪಾರ ಸ್ಥರೂ ಸಹ ಕಂಗಾಲಾಗಿದ್ದು, ಸಾರ್ವಜನಿಕರು ಬಿಸಿಲಿನ ಬೇಗೆ ತಡೆಯಲಾಗದೆ ಪರಿತಪಿಸುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಈ ಎಡೆ ಜಾತ್ರೆ ನಡೆಸಲಾಗುತ್ತದೆ.

ಮಳೆ ಕ್ಷೀಣಿಸಿದಾಗಲೆಲ್ಲ ದುಗ್ಗಮ್ಮನಿಗೆ ಎಡೆ ಪೂಜೆ ಸಲ್ಲಿಸಿದರೆ ಸಮೃದ್ಧವಾದ ಮಳೆಯಾಗಿ ರೈತರ ಬದುಕು ಹಸನಾಗುವುದು ಎಂಬ ನಂಬಿಕೆ ಇದ್ದು. ಅದೇ ರೀತಿ ಇಂದು ದೇವರಿಗೆ ಎಡೆ ಜಾತ್ರೆ ಆಚರಣೆ ಮಾಡಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಹೇಳಿದ್ದಾರೆ.

ಎಡೆ ಸಮರ್ಪಿಸಿದ ಮರುದಿನವೇ ಉತ್ತಮ ಮಳೆಯಾದ ದಿನಗಳು ಸಾಕಷ್ಟಿವೆ ಎಂದ ಅವರು, ಇದಕ್ಕೂ ಸಹ ಮಳೆ ಬಾರದೆ ಹೋದರೆ ದೇವಸ್ಥಾನದ ಸುತ್ತ ಐದು ದಿನಗಳ ಕಾಲ ಸಂತೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ದೇವಸ್ಥಾನದ ಮುಂದೆ ಸಂತೆ ನಡೆಸಲು ಒತ್ತಾಯ: ಮಳೆ ಬಾರದ ಹಿನ್ನೆಲೆಯಲ್ಲಿ ನಗರ ದೇವತೆ ದೇವಸ್ಥಾನದ  ಮುಂಭಾಗ ವಾರದ ಸಂತೆ ನಡೆಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಸಂತೆ ನಡೆದರೆ ಮಳೆ ಬರುತ್ತದೆ ಎಂಬ  ಪ್ರತೀತಿ ಇದ್ದು, ಇದು ನಿಜವೂ ಕೂಡ ಆಗಿರುವುದು. ಈ ಒತ್ತಾಯ ಹೆಚ್ಚಲು ಕಾರಣವಾಗಿದೆ.

ಹಿಂದಿನ ಹಿರಿಕರು ಮಳೆಯಾಗದ್ದಕ್ಕೆ ದೇವಿಯ ಮುನಿಸು ಕಾರಣ. ಆಕೆಯನ್ನು ಗ್ರಾಮದವರು ಮರೆತಿದ್ದಕ್ಕೆ ಈ ರೀತಿ ಆಗುತ್ತದೆ. ಊರಿನ ಎಲ್ಲರೂ ಬರುವ ಜಾಗವೆಂದರೆ ಸಂತೆ. ಆದ್ದರಿಂದ ಆ ಸಂತೆಯನ್ನೇ ದೇವಸ್ಥಾನದ ಮುಂದೆ ಮಾಡಿದರೆ, ಸಂತೆಗೆ ಬಂದವರು ದೇವಿಗೆ ಪೂಜೆ ಸಲ್ಲಿಸಿ ಮಳೆ ತರಿಸು ತಾಯಿ ಎಂದು ಬೇಡಿಕೊಂಡಿದ್ದರು. ಅದರಂತೆ ಸಂತೆಯನ್ನೂ ನಡೆಸಿದ್ದರು. ಮಳೆಯೂ ಬಂದಿತ್ತು. ಅದೇ ಆಚರಣೆ ಇಂದಿಗೂ ಮುಂದುವರೆದುಕೊಂಡು ಬಂದಿದೆ ಎನ್ನಲಾಗಿದೆ.

ಮಹಾನಗರ ಪಾಲಿಕೆ ಹಾಗೂ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಾಡಿಕೆಯಂತೆ ವಾರದ ಸಂತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಸಾಮಾನ್ಯವಾಗಿ ದೇವಸ್ಥಾನದ ಸುತ್ತಮುತ್ತ 5 ವಾರಗಳ ಕಾಲ ಸಂತೆ ನಡೆಸಲಾಗುತ್ತಿದೆ.  ಸಾವಿರಾರು ವ್ಯಾಪಾರಸ್ಥರು ಮತ್ತು ಅಷ್ಟೇ ಗ್ರಾಹಕರು ಬರಲಿದ್ದು, ಒಂದು ವಾರಕ್ಕೆ ಒಟ್ಟು ಸುಮಾರು 20 ರಿಂದ 25 ಲಕ್ಷದಷ್ಟು ವ್ಯಾಪಾರ-ವಹಿವಾಟು ನಡೆಯಲಿದೆ.

error: Content is protected !!