ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತ ಚಿಕಿತ್ಸೆ

ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತ ಚಿಕಿತ್ಸೆ

ಸೌಲಭ್ಯದ ಸದುಪಯೋಗಕ್ಕೆ ಪ್ರಭಾ ಮಲ್ಲಿಕಾರ್ಜುನ್ ಕರೆ

ದಾವಣಗೆರೆ,ಜೂ.12-  ತಾಲ್ಲೂಕಿನ ಅರಸಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ  ರಕ್ತ ಹೀನತೆ ಚಿಕಿತ್ಸೆಯನ್ನು ಪಡೆದ ಮಕ್ಕಳಿಗೆ ಹಾಗೂ   ಸಹಕರಿಸಿದ ಅಂಗನವಾಡಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ಪ್ರಶಂಸನಾ ಪತ್ರವನ್ನು  ವಿತರಿಸಲಾಯಿತು.

 ಪತ್ರವನ್ನು ವಿತರಿಸಿದ ಟ್ರಸ್ಟ್‍ನ ಆಜೀವ ಟ್ರಸ್ಟಿ  ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ್   ಮಾತನಾಡಿ,   ಟ್ರಸ್ಟ್ ವತಿಯಿಂದ ಗರ್ಭಿಣಿ  ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತವಾಗಿ ಡಿಲೆವರಿ ಸೌಲಭ್ಯಗಳನ್ನೂ ಸಹ ನೀಡುತ್ತಿದ್ದು, ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.

 ಗ್ರಾಮ ಪಂಚಾಯತಿ  ಅಧ್ಯಕ್ಷರಾದ ಸ್ವರ್ಣಜಾ ಅಂಜಿಬಾಬು ಮಾತನಾಡಿ  ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ತುಂಬಾ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ, ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.  

 ಸದರಿ ಸಮಾರಂಭದಲ್ಲಿ ಸಮುದಾಯ ವಿಭಾಗದ ಪ್ರಾಧ್ಯಾಪಕರಾದ ಡಾ. ಶೀಲಾ ಪಿ. ಹಾವೇರಿ ಮತ್ತು ಮಕ್ಕಳ ತಜ್ಜರಾದ ಡಾ. ಮಾಳವಿಕ  `ರಕ್ತ ಹೀನತೆ ಮತ್ತು ಅಪೌಷ್ಠಿಕತೆ’ ಕುರಿತು ಮಾಹಿತಿ ನೀಡಿದರು.

ಎಸ್.ಎಸ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ  ಡಾ. ಬಿ. ಎಸ್.ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್‌ಕುಮಾರ್ ಅಜ್ಜಪ್ಪ, ಸಮುದಾಯ ವಿಭಾಗದ ಮುಖ್ಯಸ್ಥ  ಡಾ.ಅಶ್ವಿನ್ ಕುಮಾರ್,   ಸಮುದಾಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಂಗನಾಥ ಎಸ್. ಸಿ. ಮತ್ತು ಡಾ. ಮನು ಎ. ಎಸ್., ಡಾ. ಶಾಂತಲಾ ಅರುಣ್ ಕುಮಾರ್,   ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರತ್ನಮ್ಮ , ತಾಲ್ಲೂಕ್ ಆರೋಗ್ಯಾಧಿಕಾರಿ ಡಾ. ದೇವರಾಜ್ ಪಟಿಗೆ, ಶಿಶು ಅಭಿವೃಧಿ ಯೋಜನಾಧಿಕಾರಿ  ಪ್ರಿಯದರ್ಶಿನಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ  ಡಾ. ರುದ್ರೇಶ್, ಸಮುದಾಯ ವಿಭಾಗದ ಸಾಮಾಜಿಕ ಕಾರ್ಯಕರ್ತರಾದ ನಾಗರಾಜ ಟಿ.ಜಿ ಮತ್ತು ಅಶೋಕ್ ಕುಮಾರ್ ಎಂ.ಎಸ್. ಮತ್ತಿತರರು ಉಪಸ್ಥಿತರಿದ್ದರು.

error: Content is protected !!