ಚನ್ನಗಿರಿ, ಜೂ 10- ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಆಂಜನೇಯ ಸ್ವಾಮಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.
ಮಲ್ಲಿಗೆನಹಳ್ಳಿ ಗ್ರಾಮದ ತಾಲ್ಲೂಕು ಪಂಚಾಯಿತಿ ಪರಾಜಿತ ಅಭ್ಯರ್ಥಿ ಟಿ.ಆರ್.ರಮೇಶ್, ಶಾಸಕ ಕೆ.ಎಸ್.ಬಸವಂತಪ್ಪ ಗೆಲುವು ಸಾಧಿಸಿದರೆ, 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದರು. ಅವರು ದೇವರಲ್ಲಿ ಪ್ರಾರ್ಥಿಸಿದಂತೆ ಕೆ.ಎಸ್.ಬಸವಂತಪ್ಪ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಟಿ.ಆರ್. ರಮೇಶ್ ಮತ್ತು ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವರಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಟಿ.ಆರ್.ರಮೇಶ್, ಹನುಮಂತಪ್ಪ, ತಿಪ್ಪೇಶಿ, ಹಾಲೇಶ್, ಸುರೇಶ್, ಬಸವರಾಜ್, ಲೋಕೇಶ್, ಹನುಮಂತ, ರುದ್ರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.