ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಸಿ

ಮಾನ್ಯರೇ,

ಕಳೆದ 15-20 ದಿನಗಳಿಂದಲೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಯುತ್ತಲೇ ಇದೆ ಸ್ವಾಗತಾರ್ಹ. ಅದೇ ರೀತಿ ಕೋಟ್ಯಂತರ ಜನರು ಬಳಸುವ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ, ದೇಶದ ಬಡ ಮತ್ತು ಮಧ್ಯಮ ವರ್ಗದವರ ಮೇಲಿನ  ಹೊರೆಯನ್ನು ಕಡಿಮೆ ಮಾಡಿಸಬೇಕಾಗಿದೆ. ಈಗಾಗಲೇ  ಬೆಲೆ ಏರಿಕೆಯ ಬಿಸಿಯಿಂದ ಬಡ ಮತ್ತು ಮಧ್ಯಮ ವರ್ಗದವರ ಬದುಕು ಬಹಳ ದುಸ್ತರವಾಗಿದೆ. ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಜನರು! ಮತ್ತೆ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ವಾಣಿಜ್ಯ ಬಳಕೆಯ ಸಿಲಿಂಡರ್ ನಂತೆ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು ಇಳಿಸಬೇಕಾಗಿದೆ.


– ಮುರುಗೇಶ ಡಿ., ಹವ್ಯಾಸಿ ಬರಹಗಾರರು, ದಾವಣಗೆರೆ.

error: Content is protected !!