ದಾವಣಗೆರೆ ಸಿಟಿ ನಿಜಲಿಂಗಪ್ಪ ಬಡಾವಣೆ ಲಕ್ಷ್ಮಿ ಫ್ಲೋರ್ ಮಿಲ್ ಸಮೀಪದ ನ್ಯಾಷನಲ್ ಕಾನ್ವೆಂಟ್ ಹಿಂಭಾಗ `ಮಾರುತಿ ನಿಲಯ’ದ ವಾಸಿ, ದಾವಣಗೆರೆ ಸಿಟಿ ಮುನ್ಸಿಪಾಲಿಟಿ ನಿವೃತ್ತ ಹೆಲ್ತ್ ಇನ್ಸ್ಪೆಕ್ಟರ್ ಆದ, ಶ್ರೀ ಮಾರುತಿ ಟೆಕ್ಸ್ಟೈಲ್ಸ್ನ ಮಾಲೀಕರಾದ ಶ್ರೀ ಸಿದ್ದ ಪದ್ಮಸಾಲಿ ಚನ್ನಮಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ಪಿ. ಸಿ. ಲಕ್ಷ್ಮೀದೇವಮ್ಮ ಅವರು ದಿನಾಂಕ 28-05-2023ರ ಭಾನುವಾರ ರಾತ್ರಿ 10.30 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಪತಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29-05-2023ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ತರಳಬಾಳು ನಗರ 6ನೇ ಮೈಲಿಕಲ್ಲಿನಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
September 27, 2024