ದಾವಣಗೆರೆ ತಾಲ್ಲೂಕು ಗೋಪನಾಳು ಗ್ರಾಮದ, ದಾವಣಗೆರೆ ಎಂಸಿಸಿ “ಬಿ” ಬ್ಲಾಕ್, # 3622, 8ನೇ ಮೇನ್, 5ನೇ ಕ್ರಾಸ್ ವಾಸಿ ಡಾ|| ಎಸ್.ಕೆ. ಕೆಂಚನಗೌಡ, MSc., (Agr) Phd., ನಿವೃತ್ತ ಪ್ರಾಧ್ಯಾಪಕರು, ಜಿ.ಕೆ.ವಿ.ಕೆ, ಬೆಂಗಳೂರು., ಇವರ ಧರ್ಮಪತ್ನಿ ಶ್ರೀಮತಿ ಸುವರ್ಣ ಕೆಂಚನಗೌಡ ಇವರು ದಿನಾಂಕ : 17.05.2023 ಸಂಜೆ 5.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 79 ವರ್ಷ ವಯಸ್ಸಾಗಿತ್ತು. ಇವರು ಪತಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ದಿನಾಂಕ : 19.05.2023ರ ಶುಕ್ರವಾರ ಮಧ್ಯಾಹ್ನ 2.00 ಗಂಟೆಗೆ ದಾವಣಗೆರೆ ತಾಲ್ಲೂಕು, ಗೋಪನಾಳು ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು. ಶುಕ್ರವಾರ 19.05.2023ರ ಬೆಳಿಗ್ಗೆ 8.00 ರಿಂದ 11.00ರ ವರೆಗೆ # 3622, 8ನೇ ಮೇನ್, 5ನೇ ಕ್ರಾಸ್, ಎಂಸಿಸಿ `ಬಿ’ ಬ್ಲಾಕ್ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಗೋಪನಾಳು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025