ಹರಿಹರ : ಬಿರು ಮಳೆಗೆ ನೆಲಕ್ಕುರುಳಿದ ಮರಗಳು

ಹರಿಹರ : ಬಿರು ಮಳೆಗೆ ನೆಲಕ್ಕುರುಳಿದ ಮರಗಳು

ಹರಿಹರ, ಮೇ 10- ನಗರದಲ್ಲಿ ಸಂಜೆ ಧಾರಾಕಾರವಾಗಿ ಸುರಿದ ಮಳೆ ಗಾಳಿಗೆ ಹಲವಾರು ಬಡಾವಣೆಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. 

ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮರಗಳು ಬಿದ್ದು ಹಲವಾರು ಕಾರು ಹಾಗೂ ಬೈಕ್‌ಗಳಿಗೆ ಹಾನಿಯಾಗಿದೆ.

ಶೋಭಾ ಟಾಕೀಸ್ ರಸ್ತೆ, ಹಳೆ ಪಿ.ಬಿ.ರಸ್ತೆ, ಗಿರಿಯಮ್ಮ ಕಾಲೇಜು ಮುಂಭಾಗ, ಬಸ್ ನಿಲ್ದಾಣ ಹತ್ತಿರ, ಶಿವಮೊಗ್ಗ ರಸ್ತೆ ಮತ್ತು ವಿವಿಧ ಪ್ರಮುಖ ರಸ್ತೆಗಳ ಮಧ್ಯದಲ್ಲಿ ಬೃಹತ್ ಪ್ರಮಾಣದ ಮರಗಳು ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿತ್ತು. ತಡರಾತ್ರಿಯವರೆಗೆ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಲಾಗಿತ್ತು.

ನಗರದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು.    

error: Content is protected !!