ಮತದಾರ ಜಾಗೃತನಾಗಬೇಕು; ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು

ಮತದಾರ  ಜಾಗೃತನಾಗಬೇಕು; ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು

ಭಾರತ  ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಸಾರ್ವ ಭೌಮ, ಜಾತ್ಯತೀತ, ಪ್ರಜಾಸತ್ತಾತ್ಮಕ ರಾಷ್ಟ್ರ. ಎಲ್ಲಾ ನಾಗರಿಕರಿಗೆ, ನ್ಯಾಯ, ಸ್ವಾತಂತ್ರ್ಯ ಮತ್ತು  ಸಮಾನ ತೆಗಳನ್ನು ಪ್ರತಿಪಾದಿಸುವಂತಹ ಸಂವಿಧಾನ ನಮ್ಮದು.  ಆದರೂ ಚುನಾವಣೆಗಳಲ್ಲಿ ಜಾತಿ ಆಧಾ ರಿತ ಮತ್ತು ಜಾತಿ ಅವಲಂಬಿತವಾಗಿ, ಜಾತಿ, ಧರ್ಮಗಳನ್ನೇ ಮೂಲ ಅಸ್ತ್ರವಾಗಿ ಬಳಸಿ ಕೊಳ್ಳುತ್ತಿ ದ್ದಾರೆ.  3000 ಜಾತಿಗಳು 25000 ಉಪಜಾತಿ ಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಹೀಗೆ ಎಲ್ಲಾ ಜಾತಿ ಧರ್ಮಗಳಿಂದ ಕೂಡಿರುವ ಜಾತ್ಯತೀತ ರಾಷ್ಟ್ರವಾಗಿದೆ.  

`ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬಂತೆ ಎಲ್ಲರನ್ನು ಸಮಾನವಾಗಿ ಕಾಣಬೇಕಾದಂತಹ ಕೆಲವು ಧಾರ್ಮಿಕ ಮಠಾಧಿ ಪತಿಗಳೂ ಸಹ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಜಾತಿ, ಧರ್ಮಗಳ ಬಗ್ಗೆ ಪರ-ವಿರೋಧ ಮಾಡಿ ಬಹಿರಂಗವಾಗಿ ಕೆಲವರನ್ನೇ, ಕೆಲವು ಪಕ್ಷಗಳನ್ನೇ ಬೆಂಬಲಿಸುತ್ತಿರುವುದು ಒಂದು ದೊಡ್ಡ ದುರಂತ. ನಮ್ಮ ದೇಶದಲ್ಲಿ ಜಾತಿ ಎಷ್ಟು ಬೇರು ಊರಿದೆ ಎಂದರೆ ಉದಾಹರಣೆ ಮುಖಾಂತರ ಹೇಳಬೇಕೆಂದರೆ ಕಾಡು ನಾಶವಾಗುತ್ತಿದ್ದರೂ ಕಾಡಿನ ಮರಗಳು ಕೊಡಲಿಯ ಹಿಡಿಕೆಗೆ ಓಟು ಹಾಕಿದವು, ಏಕೆಂದರೆ ಕೊಡಲಿಯ ಹಿಡಿ (ಕಾವು) ನಮ್ಮ ಜಾತಿಯವನು ಎಂದು.

ಹಿಂದೆ ರಾಜಕೀಯ ಕ್ಷೇತ್ರ ಮತ್ತು ರಾಜಕಾ ರಣಿಗಳ ಉದ್ದೇಶಗಳು ನಿಸ್ವಾರ್ಥ ಭಾವನೆಯಿಂದ ದೇಶ ಸೇವೆ ಮಾಡುವ ಘನ ಉದ್ದೇಶವಾಗಿತ್ತು. ಆದರೆ ಇವತ್ತಿನ ರಾಜಕೀಯ ಕ್ಷೇತ್ರ ವ್ಯಾಪಾರ ದಂತೆ ಆಗಿದೆ. ಬಂಡವಾಳ ಹಾಕಿ ಲಾಭ ಮಾಡಿ ಕೊಳ್ಳುವುದೇ ಅದರ ಪರಮ ಗುರಿಯಾಗಿದೆ.

ದೇಶ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಇದೆ. ಅದರಲ್ಲಿ ಪ್ರಮುಖ ದೊಡ್ಡ ಸಮಸ್ಯೆಯೇ `ಭ್ರಷ್ಟಾಚಾರ’.  ಈ ಭ್ರಷ್ಟಾಚಾರ ದಿಂದ ರಾಜಕಾರಣಿಗಳ ಖಜಾನೆ ತುಂಬುತ್ತಿದ್ದು, ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಂತೂ ಅಕ್ರಮ ಹಣ ಮಾಡುವ ಸಾಧನಗಳಾಗಿವೆ.   

ಅಭ್ಯರ್ಥಿಗಳನ್ನು ಗುರ್ತಿಸಿ ಮತ ಹಾಕುವ ಜವಾಬ್ದಾರಿ ನಮ್ಮ ಕೈಯ್ಯಲ್ಲಿ ಇದೆ.  ಅನೇಕ ವರ್ಷಗಳಿಂದ ಬೇರೂರಿರುವ ನಿರುದ್ಯೋಗ  ಸಮಸ್ಯೆಯನ್ನು  ಬಗೆಹರಿಸಬೇಕಾಗಿದೆ.  ಹೆಚ್ಚು ಹಳ್ಳಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಸುಮಾರು ಶೇಕಡ 60-70 ರಷ್ಟು ಜನಸಂಖ್ಯೆ ಕೃಷಿ ಕ್ಷೇತ್ರವನ್ನು ಅವಲಂಬಿಸಿದೆ. 

ಮಳೆ, ಬೆಳೆ ಇಲ್ಲದೇ ಬೆಳೆಗೆ ತಕ್ಕ ಬೆಲೆ ಇಲ್ಲದೆ ರೈತರು ಸಾಲ, ಬಡ್ಡಿ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಾಗಿದೆ. 

ಚುನಾವಣೆ ಸಮಯದಲ್ಲಿ ಟೀಕೆ-ಟಿಪ್ಪಣಿಗಳು ಆರೋಪ, ಸುಳ್ಳು ಆಶ್ವಾಸನೆಗಳು ಪ್ರತ್ಯಾರೋಪಗಳು ಪಕ್ಷಗಳ ಮಧ್ಯೆ ಇದ್ದದ್ದೇ, ಆದರೆ ಅವು ಗಳು ಸತ್ಯಕ್ಕೆ ದೂರವಾಗಿರ ಬಾರದು. ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಅಪಪ್ರಚಾರ, ಸುಳ್ಳು ಆರೋಪ, ಅಪಹಾಸ್ಯದ ಕಾರ್ಟೂನ್, ರೀಮಿಕ್ಸ್, ಎಡಿಟೆಡ್ ವಿಡಿಯೋಗಳು ಇದರಿಂದ ಮುಗ್ಧ ಜನಗಳಿಗೆ ಸತ್ಯಾಂಶ ತಿಳಿಯದೇ ಗೊಂದಲಕ್ಕೆ ಈಡಾಗುತ್ತಿರುವುದಲ್ಲದೆ, ಯಾವ ಪಕ್ಷ ಮತ್ತು ಯಾವ ಅಭ್ಯರ್ಥಿ ಸರಿ ಎನ್ನುವುದನ್ನು ತೀರ್ಮಾನಿಸುವುದು ಕಷ್ಟವಾಗುತ್ತಿದೆ.

ಚುನಾವಣೆ ಕಾವು ಏರುತ್ತಿರುವ ಪ್ರಚಾರದ ಸಮಯದಲ್ಲಿ ಹಳ್ಳಿಗಳಲ್ಲಿ ರೈತರು, ಯುವಕರು, ನಿರುದ್ಯೋಗಿಗಳಿಗೆ ಅಂಗೈಯಲ್ಲಿ ಅರಮನೆ ತೋರಿಸುವ ಕೆಲವು ರಾಜಕಾರಣಿಗಳ ಪ್ರಚೋದನೆಗಳಿಗೆ ಮತ್ತು ಸುಳ್ಳು ಆಶ್ವಾಸನೆಗಳಿಗೆ, ಹಣ ಹೆಂಡಕ್ಕೆ ಆಸೆಪಟ್ಟು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ರಾಜಕೀಯದಲ್ಲಿ ಮುಳುಗಿ ಯುವ ಶಕ್ತಿ, ದುಡಿಮೆ, ಸಮಯ ಎಲ್ಲಾ ವ್ಯರ್ಥವಾಗುತ್ತಿದೆ.  

ರಾಜಕೀಯ ಅಭ್ಯರ್ಥಿಗಳ ಹಿನ್ನೆಲೆ ಅರಿತು ಅವರು ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಅವರ ಪರಿಶ್ರಮ, ಪ್ರತಿಭೆ, ವಿದ್ಯೆ ಸಾಮಾನ್ಯ ಜ್ಞಾನ, ಅವರ ವೈಯಕ್ತಿಕ ಚರಿತ್ರೆ, ಯೋಗ್ಯತೆ, ಅರ್ಹತೆ ದೂರದೃಷ್ಟಿ, ತಂತ್ರಜ್ಞಾನ ಮತ್ತು ಕಾನೂನಿನ ಅರಿವು ಅವರ ತತ್ವ ಸಿದ್ದಾಂತಗಳ ಹಿನ್ನೆಲೆಯನ್ನು ಅರಿತು ಅಭ್ಯರ್ಥಿ ಮತ್ತು ಪಕ್ಷ ಮಾಡಿರುವ ಅಭಿವೃದ್ಧಿ ಕಾರ್ಯಗಳ ನಿದರ್ಶನಗಳನ್ನು ಮತ್ತು ಸಮಾಜ ಸೇವೆಗಳನ್ನು ಅರಿತು ಜಾಗೃತರಾಗಿ ಮತ ಚಲಾಯಿಸಬೇಕು. ರಾಜಕೀಯ ನಾಯಕರುಗಳು ಜನರ ನಾಯಕರಾಗದೆ ಜನಸೇವಕರಾಗಬೇಕು.

ಜನಪರ ಕಾರ್ಯಗಳನ್ನು ಮಾಡುವಂತವ ರಿಗೆ ಮತ ಚಲಾಯಿಸಿ, ಬರೀ ಪ್ರಚಾರ, ಅಧಿಕಾರ, ಕೀರ್ತಿ, ಹಣ ಪಡೆದು ಬೆಳಗಾಗುವುದರೊಳಗೆ ಶ್ರೀಮಂತರಾಗಬೇಕು ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹವರು ಚುನಾವಣೆ ಮುಗಿದ ನಂತರ ಮತದಾರರತ್ತ ತಲೆ ಹಾಕಿ ಮಲಗುವು ದಿಲ್ಲ. ಇಂತಹವರಿಗೆ ಮತ ಹಾಕುವುದು ವ್ಯರ್ಥ.

ವಿಧಾನಸಭೆ ಚುನಾವಣೆಗೆ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸೋಣ.  ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ಇದರಿಂದ ಮುಂದಿನ ಐದು ವರ್ಷಗಳ ನಮ್ಮ ಮತ್ತು ದೇಶದ ಭವಿಷ್ಯ ನಿರ್ಧಾರವಾಗಲಿದೆ.  ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ಜನ ಸಾಮಾನ್ಯರ ಹಿತ ಬಯಸುವ ಅಭ್ಯರ್ಥಿ ಮತ್ತು ಪಕ್ಷಗಳನ್ನು ಆರಿಸಿ ಸದೃಢ  ಭಾರತ ದೇಶವನ್ನು ಕಟ್ಟೋಣ.


ಮತದಾರ ಜಾಗೃತನಾಗಬೇಕು; ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು - Janathavaniಹೆಚ್.ವಿ. ಮಂಜುನಾಥ ಸ್ವಾಮಿ
[email protected]

error: Content is protected !!