ಉತ್ತಮ ಆಡಳಿತಕ್ಕಾಗಿ ತಪ್ಪದೇ ಮತದಾನ ಮಾಡಿ : ಶ್ರೀನಿವಾಸ್

ಉತ್ತಮ ಆಡಳಿತಕ್ಕಾಗಿ ತಪ್ಪದೇ ಮತದಾನ ಮಾಡಿ : ಶ್ರೀನಿವಾಸ್

ದಾವಣಗೆರೆ, ಮೇ 5-  ದೇಶದಲ್ಲಿ ಉತ್ತಮ ಆಡಳಿತವನ್ನು ಬಯಸುವ ನಾವುಗಳು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ದಾವಣಗೆರೆ ನಗರ ಪಾಲಿಕೆ ಉಪ ಆಯುಕ್ತ ಶ್ರೀನಿವಾಸ್ ಹೇಳಿದರು. 

ಅವರು  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾನ ಜಾಗೃತಿ ವೇದಿಕೆ ಅಡಿಯಲ್ಲಿ  ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ನಮ್ಮ  ಸಂವಿಧಾನವು   ನೀಡಿರುವ  ಮುಖ್ಯವಾದ ಸಂವಿಧಾನಿಕ ಹಕ್ಕು ಮತದಾನ. ವಿದ್ಯಾರ್ಥಿಗಳು ಯುವ ಸಮೂಹವೂ ಚುನಾವಣಾ ಸಂದರ್ಭದಲ್ಲಿ ಮತದಾನವನ್ನು ಆಲಸ್ಯ ಮಾಡದೆ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಪ್ರಾಂಶುಪಾಲ ಪ್ರೊ. ಅಂಜನಪ್ಪ ಮಾತನಾಡಿ, ಚುನಾವಣೆಯನ್ನು ಹಬ್ಬದಂತೆ ಪ್ರತಿಯೊಬ್ಬರೂ ಆಚರಿಸಬೇಕು. ಮತದಾನ ನಮ್ಮ ಹಕ್ಕು ಎಂಬುದು ಎಲ್ಲರಲ್ಲೂ ಅರಿವು ಇರಬೇಕು ಹಾಗೂ ಇತರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕ ಪ್ರೊ. ಕೆ. ನಾರಾಯಣಸ್ವಾಮಿ, ಜಿಲ್ಲಾ ನೋಡಲ್ ಅಧಿಕಾರಿ ಪ್ರೊ. ಸೋಮಶೇಖರಪ್ಪ, ಕಾಲೇಜು ಸಂಚಾಲಕ ಶಂಭುಲಿಂಗಪ್ಪ ನಲ್ಲನವರ್, ಶ್ರೀಮತಿ ಗೀತಾದೇವಿ, ಎಸ್. ವೆಂಕಟೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

ಪ್ರೊ. ಯಶೋಧ ಪ್ರಾರ್ಥಿಸಿದರು. ಪ್ರೊ. ಗೌರಮ್ಮ ನಿರೂಪಿಸಿದರು. ಡಾ. ಸುರೇಶ್‌ ಸ್ವಾಗತಿಸಿದರು.

error: Content is protected !!