ಗೌರಿಪುರ ಹೊಸೂರುದಲ್ಲಿ ಮತದಾನ ಬಹಿಷ್ಕಾರ

ಗೌರಿಪುರ ಹೊಸೂರುದಲ್ಲಿ ಮತದಾನ ಬಹಿಷ್ಕಾರ

ಜಗಳೂರು, ಏ. 22- ತಾಲ್ಲೂಕಿನ ಕ್ಯಾಸೇನಹಳ್ಳಿ  ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌರಿಪುರ ಹೊಸೂರು ಗ್ರಾಮದ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು  ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ಯುವ ಮುಖಂಡ ಹಾಗೂ ವಕೀಲ ಮೈಲೇಶ್ ಮಾತನಾಡಿ,    ಗ್ರಾಮದಲ್ಲಿ 300ಕ್ಕೂ ಅಧಿಕ ಮತ ಗಳನ್ನು ಹೊಂದಿದ್ದು, 100ಕ್ಕೂ ಹೆಚ್ಚು ಮನೆಗಳಿವೆ. ಈ ಪ್ರದೇಶದಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿ ಜೀವನ ನಡೆಸುತ್ತಿದ್ದಾರೆ.

2002-03ನೇ ಸಾಲಿನಲ್ಲಿ ಸರ್ಕಾರ ದಿಂದ 75 ಫಲಾನುಭವಿಗಳಿಗೆ ಗುಂಪು ಆಶ್ರಯ ಮನೆ ಯೋಜನೆ ಯಡಿ ಮನೆ ನೀಡಲಾಗಿತ್ತು.ಇದರ ಸುತ್ತ ಇದ್ದ ಖಾಲಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿ ದ್ದಾರೆ. ಇವರಿಗೆ ಹಕ್ಕು ಪತ್ರ ನೀಡುವಂತೆ ಗ್ರಾಮ ಪಂಚಾಯಿತಿ, ಹಾಗೂ ತಾಲ್ಲೂಕು ಕಚೇರಿ ಸೇರಿದಂತೆ, ಜನ ಪ್ರತಿನಿಧಿಗಳ ಹತ್ತಿರ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅದ್ದರಿಂದ ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಮತ ದಾನ ಮಾಡದೇ ಬಹಿಷ್ಕಾರ ಮಾಡ ಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ದಲಿತ ಮುಖಂಡ ಸತ್ಯಮೂರ್ತಿ ಮಾತನಾಡಿ, ಇಲ್ಲಿ ವಾಸ ಮಾಡುವ ಜನರು ಮನೆ ಇಲ್ಲದವರು ಹಾಗೂ ನಿರ್ಗ ತಿಕರು, ಕೂಲಿ ಕೆಲಸ ಮಾಡಿ ಜೀವನ ನಡೆ ಸುವಂತಹ ಕುಟುಂಬಗಳು ಹೆಚ್ಚಾಗಿವೆ.

ಈ ಸಂದರ್ಭದಲ್ಲಿ, ತಿಪ್ಪೇಶ್, ಸತೀಶ್, ಹನುಮಂತ್ ರಾಜ್, ನರೇಶ, ನಿರಂಜನ, ಪ್ರಕಾಶ್, ಶ್ರೀಧರ ನಾಗರಾಜ್, ಹನುಮಂತಪ್ಪ, ಪಾಪಮ್ಮ, ಪಾಲಮ್ಮ, ಬಸವರಾಜಪ್ಪ, ಅಜ್ಜಯ್ಯ, ಗಂಗಮ್ಮ ಸೇರಿದಂತೆ ಗೌರಿಪುರ ಹೊಸೂರಿನ   ಮುಖಂಡರು ಇದ್ದರು.

error: Content is protected !!