ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಂಕಿ – ಅಂಶಗಳನ್ನು ಪಡೆದ ಆಯೋಗದ ವೀಕ್ಷಕರು

ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಂಕಿ – ಅಂಶಗಳನ್ನು ಪಡೆದ ಆಯೋಗದ ವೀಕ್ಷಕರು

ದಾವಣಗೆರೆ, ಏ.20- ಚುನಾವಣಾ ಆಯೋಗ ಚುನಾವಣಾ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರಿಂದ ಇಂದು ಪಡೆದರು. 

ಡಿಸಿ ಕಾಪಶಿ ಮಾತನಾಡಿ, ಜಿಲ್ಲೆಯಲ್ಲಿ 2011ರ ಜನಗಣತಿಯನ್ವಯ 1643494 ಜನಸಂಖ್ಯೆ ಇದ್ದು, ಬೆಳವಣಿಗೆ ದರದನ್ವಯ ಪ್ರಸ್ತುತ 1882261 ಜನಸಂಖ್ಯೆ ಹೊಂದಲಾಗಿದೆ ಎಂದು ಅಂದಾಜಿಸಲಾಗಿದೆ. 194 ಗ್ರಾಮ ಪಂಚಾಯಿತಿ ಗಳು ಮತ್ತು 932 ಕಂದಾಯ ಗ್ರಾಮಗಳಿದ್ದು, 1435871 ಮತದಾರರಿದ್ದಾರೆ. ಪ್ರಸ್ತುತ 7 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 1683 ಮತಗಟ್ಟೆಗಳು ಮತ್ತು ಹೆಚ್ಚುವರಿಯಾಗಿ 2 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಲ್ಲಿ 1172 ಮತಗಟ್ಟೆ ಸ್ಥಳಗಳಿರುತ್ತವೆ. ಈ ಮತಗಟ್ಟೆ ಗಳಿಗೆ 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿದ್ದು,1683 ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. 

ಚುನಾವಣಾ ತಂಡಗಳನ್ನು ರಚಿಸಲಾಗಿದ್ದು, ವೆಚ್ಚದ ಮೇಲ್ವಿಚಾರಣೆ, ಸ್ಕ್ವಾಡ್, ಚೆಕ್‌ಪೋಸ್ಟ್, ಎಂಸಿಎಂಸಿ ಸೇರಿದಂತೆ ಸಾಮಾಜಿಕ ಜಾಲ ವೀಕ್ಷಣೆ, ಕಂಟ್ರೋಲ್ ರೂಂ, ಮಸ್ಟರಿಂಗ್, ಡಿ.ಮಸ್ಟರಿಂಗ್ ಸ್ಥಳ, ಚುನಾವಣಾ ಸಿಬ್ಬಂದಿ ನೇಮಕ, ತರಬೇತಿ, ವಾಹನಗಳ ವ್ಯವಸ್ಥೆ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಿದರು. 

ಎಸ್ಪಿ ಸಿ.ಬಿ.ರಿಷ್ಯಂತ್ ಮಾತನಾಡಿ, ಈಗಾಗಲೇ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಅರೆ ಸೇನಾಪಡೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 7 ತುಕಡಿಗಳು ಕಾರ್ಯನಿರ್ವಹಿಸುತ್ತಿವೆ. ಮತದಾನದ ವೇಳೆ ಇನ್ನೂ ಹೆಚ್ಚಿನ ಅರೆಸೇನಾ ಪಡೆ ಸಿಬ್ಬಂದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಮತದಾನ ದಿನದಂದು ಮತಗಟ್ಟೆಗೆ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲು ವಿವರವಾದ ಯೋಜನೆ ಸಿದ್ದಪಡಿ ಸಲಾಗಿದೆ. ಗೂಂಡಾ ಕಾಯ್ದೆ, ರೌಡಿ ಸೀಟರ್‌ಗಳನ್ನು ಈಗಾಗಲೇ ಗಡೀಪಾರು ಮಾಡಲಾಗಿದೆ. ಪರವಾನಗಿ ಪಡೆಯಲಾಗಿದ್ದ 688 ಶಸ್ತ್ರಾಸ್ತ್ರಗಳಲ್ಲಿ 635 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿಸಲಾಗಿ ಬ್ಯಾಂಕ್ ಇತರೆ ಭದ್ರತಾ ಏಜೆನ್ಸಿಗಳಿಗೆ ವಿನಾಯಿತಿ ನೀಡಲಾಗಿದೆ.  ಚುನಾವಣಾ ಸಂದರ್ಭದಲ್ಲಿ ಬೆದರಿಕೆಯುಂಟು ಮಾಡುವವರ ಮೇಲೆ ತೀವ್ರ ನಿಗಾವಹಿಸಲಾಗಿದ್ದು, ಜನರು ನಿರ್ಭಯವಾಗಿ ಚುನಾವಣೆಯಲ್ಲಿ ಭಾಗಿಯಾಗಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದರು. 

ಜಿ.ಪಂ. ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮತದಾನ ಹೆಚ್ಚಳಕ್ಕಾಗಿ ಕೈಗೊಂಡ ಕ್ರಮಗಳು ಮತ್ತು ಕಾರ್ಯಕ್ರಮಗಳ ವಿವರ ನೀಡಿದರು. 

ಚುನಾವಣಾ ವೀಕ್ಷಕರು, ಪೊಲೀಸ್ ವೀಕ್ಷಕರು ಮತ್ತು ವೆಚ್ಚ ವೀಕ್ಷಕರು, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು. 

ಚುನಾವಣಾ ವೀಕ್ಷಕರನ್ನು ಸಂಪರ್ಕಿಸಲು ವಿವರ; ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಗೆ ಕ್ಷೇತ್ರವಾರು ಚುನಾವಣಾ ಆಯೋಗದಿಂದ ನೇಮಕ ಮಾಡಿರುವ ಚುನಾವಣಾ ವೀಕ್ಷಕರು ಏ. 19 ರಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು,  ವೆಚ್ಚ ವೀಕ್ಷಕರು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ವೀಕ್ಷಣೆ ಮಾಡುವರು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ವೀಕ್ಷಣಾ ವರದಿಯನ್ನು ಆಯೋಗಕ್ಕೆ ನೀಡುವರು. 

ಚುನಾವಣೆಗೆ ಸಂಬಂಧಿಸಿದ ಯಾವುದೇ ಅಹವಾಲುಗಳು, ದೂರುಗಳು, ಸಲಹೆಗಳು ಇದ್ದಲ್ಲಿ ಸಾರ್ವಜನಿಕರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವೀಕ್ಷಕರನ್ನು ಭೇಟಿ ಮಾಡುವ ಮೂಲಕ ಅಥವಾ ಅವರ ಇ.ಮೇಲ್, ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಸಂದೇಶಗಳ ಮೂಲಕ ಗಮನ ಸೆಳೆಯಬಹುದಾಗಿದೆ.

ಚುನಾವಣಾ ಸಾಮಾನ್ಯ ವೀಕ್ಷಕರು; ಜಗಳೂರು ಮತ್ತು ಹರಿಹರಕ್ಕೆ ಐಎಎಸ್ ಅಧಿಕಾರಿ ರಂಜಿತ್ ಕುಮಾರ್ ಜೆ. ಇವರ ಮೊಬೈಲ್ 6366550103 ಇ-ಮೇಲ್ [email protected]   ಇವರು ದಾವಣಗೆರೆ ಸರ್ಕ್ಯೂಟ್‌ಹೌಸ್ ಮೊದಲ ಮಹಡಿ ವಿವಿಐಪಿ ಕೊಠಡಿ ಸಂಖ್ಯೆ 2 ರಲ್ಲಿ ಬೆಳಗ್ಗೆ 8 ರಿಂದ 9 ರ ವರೆಗೆ ಲಭ್ಯರಿರುವರು. ಜಗಳೂರು ತಾಲ್ಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಇರುವರು. ಹರಿಹರದ ತಾಲ್ಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ, ಗುರುವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಇರುವರು. 

ದಾವಣಗೆರೆ ಉತ್ತರ ಮತ್ತು ದಕ್ಷಿಣ; ಐಎಎಸ್ ಅಧಿಕಾರಿ ಟಿ.ಎನ್.ಹರಿಹರನ್ ಇವರ ಇ.ಮೇಲ್ ವಿಳಾಸ; [email protected]    ಮೊಬೈಲ್ ಸಂಖ್ಯೆ 7483061914 ಇದಾಗಿದ್ದು ದಾವಣಗೆರೆ ಸರ್ಕ್ಯೂಟ್ ಹೌಸ್ ಕೊಠಡಿ ಸಂಖ್ಯೆ 2 ರಲ್ಲಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಲಭ್ಯರಿರುವರು. 

ಮಾಯಕೊಂಡ ಮತ್ತು ಚನ್ನಗಿರಿ ಕ್ಷೇತ್ರ;  ಐಎಎಸ್ ಅಧಿಕಾರಿ ದೇಬಾಶಿಸ್ ದಾಸ್ ಇವರ ಇ.ಮೇಲ್ [email protected]   ಮೊಬೈಲ್ 6364907109. ಇವರು ಮಾಯಕೊಂಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ  ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಹಾಗೂ ಚನ್ನಗಿರಿ ತಾಲ್ಲೂಕು ಕಚೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆವರೆಗೆ ಲಭ್ಯರಿರುವರು.

ಹೊನ್ನಾಳಿ ಕ್ಷೇತ್ರ; ಐಎಎಸ್ ಅಧಿಕಾರಿ ಕೆ.ಕೆ.ಸುಧಾಮಾ ರಾವ್ ಇವರ ಇ.ಮೇಲ್ ವಿಳಾಸ [email protected] , ಮೊಬೈಲ್ 9632424820 ಆಗಿರುತ್ತದೆ. ಇವರು ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಲಭ್ಯರಿರುವರು. 

ಪೊಲೀಸ್ ವೀಕ್ಷಕರು; ಜಿಲ್ಲೆಯ 7 ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸರ್ವಶ್ರೇಷ್ಟ ತ್ರಿಪಾಠಿ ಆಗಮಿಸಿದ್ದು, ಇವರ ಇ.ಮೇಲ್ [email protected]  ಮೊಬೈಲ್ ಸಂಖ್ಯೆ 807336941 ಆಗಿರುತ್ತದೆ. ಇವರು ದಾವಣಗೆರೆ ಸರ್ಕ್ಯೂಟ್‌ ಹೌಸ್‌ನಲ್ಲಿ ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಲಭ್ಯವಿರುವರು. 

error: Content is protected !!