7 ಕ್ಷೇತ್ರ, 115 ಅಭ್ಯರ್ಥಿಗಳು, 164 ನಾಮಪತ್ರ

7 ಕ್ಷೇತ್ರ, 115 ಅಭ್ಯರ್ಥಿಗಳು, 164 ನಾಮಪತ್ರ

ದಾವಣಗೆರೆ, ಏ.20 – ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಜಿಲ್ಲೆಯ 7 ಕ್ಷೇತ್ರಗಳಿಂದ 115 ಅಭ್ಯರ್ಥಿಗಳಿಂದ 164 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಗಳೂರು ಕ್ಷೇತ್ರ 15 ನಾಮಪತ್ರ 12 ಅಭ್ಯರ್ಥಿಗಳು, ಹರಿಹರ 21 ನಾಮಪತ್ರ 13 ಅಭ್ಯರ್ಥಿ, ದಾವಣಗೆರೆ ಉತ್ತರ 23 ನಾಮಪತ್ರ 16 ಅಭ್ಯರ್ಥಿ, ದಾವಣಗೆರೆ ದಕ್ಷಿಣ 32 ನಾಮಪತ್ರ 23 ಅಭ್ಯರ್ಥಿಗಳು, ಮಾಯಕೊಂಡ 38 ನಾಮಪತ್ರ 24 ಅಭ್ಯರ್ಥಿಗಳು, ಚನ್ನಗಿರಿ 19 ನಾಮಪತ್ರ 15 ಅಭ್ಯರ್ಥಿಗಳು ಹಾಗೂ ಹೊನ್ನಾಳಿಯಲ್ಲಿ 16 ನಾಮಪತ್ರ 12 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ.

ಇಂದು 69 ನಾಮಪತ್ರಗಳು: ಏಪ್ರಿಲ್ 20 ರಂದು ಸಲ್ಲಿಸಿದ 69 ನಾಮಪತ್ರಗಳಲ್ಲಿ 66 ಪುರುಷ, 3 ಮಹಿಳೆಯರ ನಾಮಪತ್ರಗಳು ಸೇರಿವೆ. ಉಳಿದಂತೆ ಬಿಜೆಪಿ 7, ಕಾಂಗ್ರೆಸ್ 5, ಆಮ್ ಆದ್ಮಿ 6, ಬಿಎಸ್‌ಪಿ 4, ಜೆಡಿಎಸ್ 7, ಇತರೆ ಪಕ್ಷ 9, ಪಕ್ಷೇತರ 31 ನಾಮಪತ್ರಗಳು ಸೇರಿವೆ. ಇಂದು 59 ಪುರುಷ, 3 ಮಹಿಳೆಯರು ಸೇರಿ 62 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 

ಜಗಳೂರು ವಿಧಾನಸಭಾ ಕ್ಷೇತ್ರದಿಂದ ಎಂ.ಓ.ದೇವರಾಜ್ ಜೆಡಿಎಸ್, ದಿವಾಕರ .ಓ, ನಾಗರಾಜ ಎಂ, ರಾಘವೇಂದ್ರ ಕೆ.ಆರ್., ಹೆಚ್.ಪಿ.ರಾಜೇಶ್, ಡಿ.ತಿಪ್ಪೇಸ್ವಾಮಿ, ಭೀಮಪ್ಪ.ಜಿ.ಎನ್ ಪಕ್ಷೇತರ, ಜಿ.ಸ್ವಾಮಿ ಸಮಾಜವಾದಿ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದರು.

ಹರಿಹರ ವಿಧಾನಸಭಾ ಕ್ಷೇತ್ರದಿಂದ ಶ್ರೀನಿವಾಸ ಎನ್.ಹೆಚ್. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2, ಬಿ.ಪಿ.ಹರೀಶ್ ಬಿಜೆಪಿ, ಡಿ.ಹನುಮಂತಪ್ಪ ಬಿಎಸ್‌ಪಿ, ಜಿ.ಹೆಚ್.ಬಸವರಾಜ ಆಮ್ ಆದ್ಮಿ, ಜ್ಞಾನೇಶಪ್ಪ ದರುಗದ ಆಮ್ ಆದ್ಮಿ, ಜಯಕುಮಾರ್ ಟಿ.ಹೆಚ್,  ಕರಿಬಸಪ್ಪ ಮಠದಾವ, ಬಿ.ಎಸ್.ಉಜ್ಜನಪ್ಪ, ಮೂರ್ತಿ ಹೆಚ್.ಕೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. 

ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಲೋಕಿಕೆರೆ ನಾಗರಾಜ್ ಬಿಜೆಪಿಯಿಂದ 2 ನಾಮಪತ್ರ, ಮಂಜುನಾಥ.ಎನ್ ಪಕ್ಷೇತರ, ಎಂ.ಜಿ.ಶಿವಶಂಕರ್ ಜೆಡಿಎಸ್, ಮೊಹಮ್ಮದ್ ಹಯಾತ್ ಎಂ. ಪಕ್ಷೇತರ, ಸುರ್ಜಿತ್ ಜಿ ಸಂಯುಕ್ತ ವಿಕಾಸ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕಾಗಿ ಗೌಸ್‌ಪೀರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 2 ನಾಮಪತ್ರ, ಅಜಯ್ ಕುಮಾರ್ ಬಿ.ಜಿ ಬಿಜೆಪಿ, ಶಾಮನೂರು ಶಿವಶಂಕರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2 ನಾಮಪತ್ರ, ಜೆ.ಅಮಾನುಲ್ಲಾ ಖಾನ್ ಜೆಡಿಎಸ್, ಮೊಹಮದ್ ರಿಯಾಜ್ ಸಾಬ್ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸಾಜಿದ್ ಆಮ್ ಆದ್ಮಿ ಪಾರ್ಟಿ, ಎಂ.ಬಿ.ಪ್ರಕಾಶ್, ಎಸ್.ಕೆ.ಅಫಜಲ್ ಖಾನ್, ಜಿ.ಆರ್.ಶಿವಕುಮಾರಸ್ವಾಮಿ, ದಿಲ್ ಜಾನ್ ಖಾನ್, ಶೇಖ್ ಅಹಮದ್, ಎಂ.ರಾಜಾಸಾಬ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಮಾಯಕೊಂಡ ಕ್ಷೇತ್ರಕ್ಕಾಗಿ ಕೆ.ಎಸ್.ಬಸವರಾಜ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೆ.ಶೇಖರನಾಯ್ಕ ಕರ್ನಾಟಕ ರಾಜ್ಯ ರೈತ ಸಂಘ, ಜಿ.ಎಸ್.ಶ್ಯಾಮ್ ಬಿಜೆಪಿ, ಎಂ.ಬಸವರಾಜನಾಯ್ಕ ಬಿಜೆಪಿ, ಅಜ್ಜಪ್ಪ ಎನ್. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಧರ್ಮನಾಯ್ಕ ಆಮ್ ಆದ್ಮಿ ಪಾರ್ಟಿ, ಹೆಚ್.ಆನಂದಪ್ಪ ಜೆಡಿಎಸ್, ಆರ್.ಯಶೋಧ ಬಿ.ಎಸ್.ಪಿ, ಜಿ.ಎಸ್.ಶ್ಯಾಮ್, ಶ್ರೀಧರ ಎನ್, ಶಿವಾನಂದ ಆರ್, ಕೆ.ಹೆಚ್.ವೆಂಕಟೇಶ್, ಪುಷ್ಪ ಬಿ.ಎಂ, ಪೆದ್ದಪ್ಪ.ಎಸ್, ರೇವ್ಯನಾಯ್ಕ ಸಿ  ಪಕ್ಷೇತರ,

ಚನ್ನಗಿರಿ ಕ್ಷೇತ್ರಕ್ಕೆ ಟಿ.ವಿ.ಪಟೇಲ್ ಜೆಡಿಎಸ್, ಎಂ.ರೂಪ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಶಂಕರ್ ಶಾಮನೂರ ಐರಾ ನ್ಯಾಷನಲ್ ಪಾರ್ಟಿ, ಆದಿಲ್ ಖಾನ್ ಎಸ್.ಕೆ. ಆಮ್ ಆದ್ಮಿ ಪಾರ್ಟಿ,  ಕೆ.ಶಿವಲಿಂಗಪ್ಪ, ಎಂ.ವಿ.ಮಲ್ಲಿಕಾರ್ಜುನ, ರಂಗನಾಥ ಬಿ ಪಕ್ಷೇತರದಿಂದ ನಾಮಪತ್ರ ಸಲ್ಲಿಸಿದರು.

ಹೊನ್ನಾಳಿ ಕ್ಷೇತ್ರದಿಂದ ಎಂ.ಪಿ.ರೇಣುಕಾಚಾರ್ಯ ಬಿಜೆಪಿ, ಬಿ.ಜಿ.ಶಿವಮೂರ್ತಿ ಜೆಡಿಎಸ್ 2, ಕೃಷ್ಣಪ್ಪ ಬಿಎಸ್‌ಪಿ 2, ನರಸಿಂಹಪ್ಪ ಕೆ. ಆಮ್ ಆದ್ಮಿ ಪಾರ್ಟಿ, ರಂಗನಾಥಸ್ವಾಮಿ ಎಂ.,  ಲಕ್ಷ್ಮೀಕಾಂತ ಹೆಚ್.ಟಿ, ವಾಸಪ್ಪ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

error: Content is protected !!