ಭರ್ಜರಿ ಮೆರವಣಿಗೆ, ಅಜಯ್ ಕುಮಾರ್ ನಾಮಪತ್ರ ಸಲ್ಲಿಕೆ

ಭರ್ಜರಿ ಮೆರವಣಿಗೆ, ಅಜಯ್ ಕುಮಾರ್ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 20-  ದಕ್ಷಿಣ  ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಜಿ. ಅಜಯ್ ಕುಮಾರ್ ಭಾರೀ ಜನಸ್ತೋಮದೊಂದಿಗೆ ಆಗಮಿಸಿ  ಇಂದು ತಮ್ಮ ಉಮೇದುವಾರಿಕೆಯ ಅರ್ಜಿ ಸಲ್ಲಿಸಿದರು.

ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ ನಗರದಲ್ಲಿ  ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ನಾಮಪತ್ರ ಸಲ್ಲಿಕೆಗೆ ನೆಚ್ಚಿನ ಯುವ  ನಾಯಕನಿಗೆ ಬೆಂಬಲ ಸೂಚಿಸಲು ಹೆಚ್ಚಿನ ಜನ ಸೇರಿದ್ದರು.  ಬಿ.ಜೆ.ಪಿ ಅಭ್ಯರ್ಥಿಗೆ ಜೈಕಾರ ಹಾಕಿ ಬೆಂಬಲ ವ್ಯಕ್ತಪಡಿಸಿದರು.

ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಜಿ.ಎಸ್. ಅನಿತ್‌ಕುಮಾರ, ಜಿಲ್ಲಾ ಅಧ್ಯಕ್ಷ  ಹನಗವಾಡಿ ವೀರೇಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ವೈ. ಮಲ್ಲೇಶ್,
ಕೊಳೇನಹಳ್ಳಿ ಸತೀಶ್, ಮಾಜಿ ಮೇಯರ್ ಎಸ್.ಟಿ. ವೀರೇಶ್ ಸೋಗಿ ಶಾಂತಕುಮಾರ್ ಅವರು  ತೆರೆದ ವಾಹನದಲ್ಲಿ ಸಾಗಿದರು. 

ಈ ಸಂದರ್ಭದಲ್ಲಿ ಮಾಜಿ ಉಪ ಮೇಯರ್ ಗಾಯತ್ರಿ ಬಾಯಿ, ಸೌಮ್ಯ ನರೇಂದ್ರ ಕುಮಾರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ ಗೋಣೇಪ್ಪ, ರಾಕೇಶ್ ಜಾಧವ್, ಬಿ.ಎಂ. ರುದ್ರೇಗೌಡ, ಶಿವಮೂರ್ತಿ, ಕೃಷ್ಣ ಮೂರ್ತಿ ಪವಾರ್, ಎಚ್.ಎಂ. ರುದ್ರಮುನಿ ಸ್ವಾಮಿ, ಗೌಳಿ ಲಿಂಗರಾಜ್ ದಕ್ಷಿಣ ಅಧ್ಯಕ್ಷ ಆನಂದರಾವ್ ಸಿಂದೆ, ಪ್ರಧಾನ ಕಾರ್ಯದರ್ಶಿಗಳಾದ ರಾಜು ನಿಲಗುಂದ, ಗುರು ಪ್ರಸಾದ,  ವಿಜಯಕುಮಾರ್ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಮತ್ತಿತರ ಪ್ರಮುಖರು, ಕಾರ್ಯಕರ್ತರು ಇದ್ದರು.

ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಮ್ಮಿಲನವಾಗಿದೆ. ಒಂದೇ ಮನೆತನಕ್ಕೆ ಅಧಿಕಾರ ಕೊಟ್ಟರೆ ದಾವಣಗೆರೆ ಅಭಿವೃದ್ಧಿ ಕುಂಠಿತವಾಗುತ್ತದೆ ಅನ್ನುವುದನ್ನು ಜನರು ನೋಡಿದ್ದು, ಇದು ಸಾಕಪ್ಪಾ ಎಂದು ಬದಲಾವಣೆ ಬಯಸಿದ್ದಾರೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ ಕುಮಾರ್ ಹೇಳಿದರು. 

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. 

ಇವತ್ತು ಬೂತ್‍ಮಟ್ಟದಿಂದ ಪಕ್ಷ ಸಂಘಟಿಸಿದಂತಹ ಯುವ ಕಾರ್ಯಕರ್ತರಿಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶ ನೀಡಲಾಗಿದ್ದು, ಅದರ ಮುಖಂಡತ್ವವನ್ನು ಪಕ್ಷದ ಹಿರಿಯರು ವಹಿಸಿಕೊಂಡಿದ್ದಾರೆ. ಹೀಗಾಗಿ, ಮೇ 10ರಂದು ನಡೆಯುವ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್‌ ಅವರ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸಿ, ಬಿಜೆಪಿಗೆ ನಾವುಗಳು ಮತ ಕೇಳುತ್ತಿದ್ದೇವೆ ಎಂದರು. 

ಬಿಸಿಲನ್ನು ಲೆಕ್ಕಿಸಿದೆ ಕಾರ್ಯಕರ್ತರು ಬಿಜೆಪಿಯ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಇದರ ಉದ್ದೇಶ ನಾವುಗಳು ಬಿಜೆಪಿಯನ್ನು ಗೆಲ್ಲಿಸಬೇಕು ಎಂಬುವುದಾಗಿದೆ. ಅಭಿಮಾನ ಮತ್ತು ಪ್ರೀತಿಯನ್ನು ಪಕ್ಷದ ಅಭ್ಯರ್ಥಿಗಳಿಗೆ ತೋರಿಸುತ್ತಿದ್ದಾರೆ ಎಂದು ಹೇಳಿದರು. 

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಮೈಮರೆಯಬಾರದು. ಇಂದಿನ ಮೆರವಣಿಗೆಗೆ ಮಾತ್ರ ತಮ್ಮ ಹುಮ್ಮಸ್ಸನ್ನು ತೋರದೆ, ದಾವಣಗೆರೆ ಎರಡು ಕ್ಷೇತ್ರಗಳಲ್ಲೂ ಬಿಜೆಪಿಯ ಗೆಲುವಿಗೆ ಶ್ರಮಿಸಬೇಕು ಎಂದರು.

error: Content is protected !!