ದಕ್ಷಿಣದಲ್ಲಿ ಗೆದ್ದೇ ಗೆಲ್ಲುತ್ತೇವೆ: ಎಸ್ಸೆಸ್

ದಕ್ಷಿಣದಲ್ಲಿ ಗೆದ್ದೇ ಗೆಲ್ಲುತ್ತೇವೆ: ಎಸ್ಸೆಸ್

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ಆಗಮನದಿಂದ ಬಲ ಬಂದಿದೆ. ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಸ್ಪರ್ಧಿಸಿ ಗೆಲ್ಲಲಿದ್ದಾರೆ. ಜೊತೆಗೆ ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಅಥಣಿ ವೀರಣ್ಣ, ಬಿ.ಸಿ.ಉಮಾಪತಿ, ಅಯೂಬ್ ಪೈಲ್ವಾನ್, ಹೆಚ್.ಬಿ.ಗೋಣೆಪ್ಪ, ಅನಿತಾಬಾಯಿ ಮಾಲತೇಶ್, ವಿನಾಯಕ ಪೈಲ್ವಾನ್, ದಿನೇಶ್ ಕೆ.ಶೆಟ್ಟಿ, ಎ.ನಾಗರಾಜ್, ರಾಜಶೇಖರ್ (ಆಡಿಟರ್), ನಾಮಪತ್ರ ಸಲ್ಲಿಸಿದ ವೇಳೆ ಇದ್ದರು.

error: Content is protected !!