ಕಿಕ್ಕಿರಿದು ಸೇರಿದ ಅಭಿಮಾನಿಗಳೊಂದಿಗೆ ಶಾಸಕ ಎಸ್.ವಿ ರಾಮಚಂದ್ರ ನಾಮಪತ್ರ ಸಲ್ಲಿಕೆ
ಜಗಳೂರು, ಏ.17- ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಎಸ್.ವಿ ರಾಮಚಂದ್ರ ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಹೊರಕೆರೆಯಲ್ಲಿರುವ ನಗರದೇವತೆ ಶ್ರೀ ದೊಡ್ಡ ಮಾರಿಕಾಂಬ ದೇವಸ್ಥಾನದಲ್ಲಿ ಸಹ ಸ್ರಾರು ಅಭಿಮಾನಿಗಳು, ಕಾರ್ಯ ಕರ್ತರು, ಮುಖಂಡ ರೊಂದಿಗೆ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಸಾಗಿ ತಾಲ್ಲೂಕು ಕಚೇರಿ ತಲುಪಿತು, ರೋಡ್ ಶೋನಲ್ಲಿ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು.
ಸಂಸದ ಜಿ.ಎಂ ಸಿದ್ದೇಶ್ವರ, ವಿಧಾನಸಭಾ ಕ್ಷೇತ್ರದ ರಾಜ್ಯ ಉಸ್ತುವಾರಿ ಗುಜರಾತ್ ಮಾಜಿ ಶಾಸಕ ಸಂಜಯ್ ಪಾಟೀಲ್, ಶ್ರೀಮತಿ ಇಂದಿರಾ ರಾಮಚಂದ್ರ, ಮಂಡಲ ಅಧ್ಯಕ್ಷ ಎಸ್.ಸಿ ಮಹೇಶ್, ಡಾ.ಟಿ.ಜಿ ರವಿ ಕುಮಾರ್, ಡಾ.ಶಿವಯೋಗಿಸ್ವಾಮಿ, ಆರುಂಡಿ ನಾಗರಾಜ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಶಾಸಕರಿಗೆ ಸಾಥ್ ನೀಡಿದರು.
ನಂತರ ತಾಲ್ಲೂಕು ಕಚೇರಿ ಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದ ರ್ಭದಲ್ಲಿ ಮಂಡಲ ಅಧ್ಯಕ್ಷ ಎಚ್.ಸಿ ಮಹೇಶ್, ರಾಜ್ಯ ಪಕ್ಷದ ಉಸ್ತುವಾರಿ ಸಂಜಯ್ ಪಾಟೀಲ್, ಡಿ.ವಿ ನಾಗಪ್ಪ, ಬಿಸ್ತುವಳ್ಳಿ ಬಾಬು, ಸೊಕ್ಕೆ ನಾಗರಾಜ್ ಇದ್ದರು.
ಎರಡು ನಾಮಪತ್ರ ಸಲ್ಲಿಕೆ:- ಮೆರವಣಿಗೆಗೆ ಮುನ್ನ ಶಾಸಕ ರಾಮಚಂದ್ರ ಅವರು ಬೆಳಿಗ್ಗೆ ಪತ್ನಿ ಶ್ರೀಮತಿ ಇಂದಿರಾ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ತಲಾ ಒಂದು ನಾಮಪತ್ರ ಸಲ್ಲಿಸಿದರು.