ಮಲೇಬೆನ್ನೂರು, ಏ. 12 – ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೋಮವಾರ ತಮ್ಮ ಸಾರ್ಥಕ ಬದುಕಿನ 46 ವಸಂತಗಳನ್ನು ಪೂರೈಸಿ 47ನೇ ವರ್ಷಕ್ಕೆ ಕಾಲಿಟ್ಟರು.
ಬೆಳ್ಳೂಡಿ ಶಾಖಾ ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಭಕ್ತರು, ಹುಟ್ಟು ಹಬ್ಬದ ಶುಭಾಶಯ ಕೋರಿ ಶ್ರೀಗಳ ಆಶೀರ್ವಾದ ಪಡೆದು ಕೊಂಡರು.
ಭಕ್ತರು ಅಭಿಮಾನದಿಂದ ತಂದ ಎಲ್ಲಾ ಕೇಕ್ಗಳನ್ನು ಕಟ್ ಮಾಡಿದ ಶ್ರೀಗಳು ಭಕ್ತರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು.
ಕಾಗಿನೆಲೆ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕುಂಚಿಟಿಗ ಗುರು ಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಹಡಪದ ಅಪ್ಪಣ್ಣ ಗುರುಪೀಠ ಶ್ರೀಗಳು ಮಠಕ್ಕೆ ಆಗಮಿಸಿ ಶ್ರೀಗಳಿಗೆ ಜನ್ಮ ದಿನದ ಶುಭಾಶಯ ಕೋರಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್. ರಾಮಪ್ಪ, ಪಿ.ಟಿ. ಪರಮೇಶ್ವರ ನಾಯ್ಕ್, ಅರುಣ್ ಕುಮಾರ ಪೂಜಾರ್, ಪ್ರಕಾಶ್ ಕೋಳಿವಾಡ, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ಎಂ. ನಾಗೇಂದ್ರಪ್ಪ, ಎಂ.ಆರ್. ಮಹೇಶ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಸಿ.ಎನ್. ಹುಲುಗೇಶ್, ಕುಂಬಳೂರು ವಿರುಪಾಕ್ಷಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ಕೆ.ಪಿ. ಗಂಗಾಧರ, ಐರಣಿ ಅಣ್ಣಪ್ಪ, ಹೊನ್ನಾಳಿ ರಂಜಿತ್, ಎಳೆಹೊಳೆ ಕುಮಾರ್, ಡಿ.ಕೆ. ಸಿದ್ಧನಗೌಡ, ಪಿ.ಎಸ್. ನಿಜಲಿಂಗಪ್ಪ, ಎಸ್.ಎಂ. ವಸಂತ್, ಮಲ್ಲನಾಯ್ಕನಹಳ್ಳಿ ಶೇಖರಪ್ಪ, ಚಂದ್ರಗುಪ್ತ ಮೌರ್ಯ ಶಾಲೆ ಕಾರ್ಯದರ್ಶಿ ಎಸ್. ನಿಂಗಪ್ಪ, ಪ್ರಾಂಶುಪಾಲ ರಾದ ಶ್ರೀಮತಿ ಶೃತಿ ಇನಾಂ ದಾರ್ ಕಾಗಿನೆಲೆ ಕಾಲೇಜಿನ ಪ್ರಾಚಾರ್ಯ ಬೀರೇಶ್ ಸೇರಿದಂತೆ ಇನ್ನೂ ಅನೇಕರು ಮಠಕ್ಕೆ ಆಗಮಿಸಿ ಶ್ರೀಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಮಾಜಿ ಸಚಿವರಾದ ಹೆಚ್.ಕೆ. ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಇನ್ನೂ ಅನೇಕರು ಪೋನ್ ಮೂಲಕ ಶ್ರೀಗಳಿಗೆ ಶುಭಾಷಯ ಕೋರಿದರು.
ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರು 10 ಕುರಿ ಮರಿಗಳನ್ನು ಶ್ರೀಗಳಿಗೆ ನೀಡುವ ಮೂಲಕ ಶುಭಾಶಯ ಕೋರಿ ಗಮನ ಸೆಳೆದರು.
ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಶಾಸಕ ಎಸ್. ರಾಮಪ್ಪ ಮತ್ತು ನಂದಿಗಾವಿ ಶ್ರೀನಿವಾಸ್ ಒಟ್ಟಾಗಿ ಶ್ರೀಗಳನ್ನು ಸನ್ಮಾನಿಸಿ, ಕೇಕ್ ತಿನ್ನಿಸುವ ಮೂಲಕ ಅಚ್ಚರಿ ಮೂಡಿಸಿದರು.