ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲು ಒತ್ತಾಯ

Home ಸುದ್ದಿ ವೈವಿಧ್ಯ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲು ಒತ್ತಾಯ

ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲು ಒತ್ತಾಯ

ರಾಣೇಬೆನ್ನೂರು, ಸೆ.21- ಜಗಜ್ಯೋತಿ ಬಸವಣ್ಣನವರ ಮೂರ್ತಿಯನ್ನು ನಗರದ ಸಂಗಂ ವೃತ್ತದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ, ಬಸವ ಜ್ಯೋತಿ ಮಹಿಳಾ ಮಂಡಳಿ, ದಾನೇಶ್ವರಿ ಮಹಿಳಾ ಮಂಡಳಿ, ಕದಳಿ ವೇದಿಕೆ, ಅಖಿಲ ಭಾರತ ವೀರಶೈವ ಮಹಿಳಾ ಘಟಕ ಹಾಗೂ ವಿವಿಧ ಮಹಿಳಾ ಸಮಾಜಗಳ ವತಿಯಿಂದ ನಗರಸಭೆ ಉಪಾಧ್ಯಕ್ಷರಾದ ಕಸ್ತೂರಿ ಚಿಕ್ಕಬಿದರಿ ಹಾಗೂ ಪೌರಾಯುಕ್ತ ಉದಯಕುಮಾರ ಅವರಿಗೆ  ಮನವಿ ಸಲ್ಲಿಸಿದರು. 

ವಿವಿಧ ಮಹಿಳಾ ಸಂಘಗಳ ಮುಖ್ಯಸ್ಥೆ ಭಾರತಿ ಜಂಬಗಿ ಮಾತನಾಡಿ, 12ನೇಯ ಶತಮಾನದಲ್ಲಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದುವುದರ ಜೊತೆಗೆ ವೈಚಾರಿಕ ಕ್ರಾಂತಿ ನಡೆಸಿದವರು. ಅಂತಹ ಮಹಾತ್ಮರ ಮೂರ್ತಿಯನ್ನು ಸಂಗಂ ವೃತ್ತದಲ್ಲಿ ಪ್ರತಿ ಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

ಬಸವಣ್ಣನವರು ಕಾಯಕದಲ್ಲಿ ದೇವ ರನ್ನು ಕಂಡವರು, ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ ನೀಡಿ ದವರು, ವಚನಗಳ ಆಧಾರದ ಮೇಲೆ ನಮ್ಮ ಸಂವಿಧಾನ ರಚಿತವಾಗಿದೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ, ಅಂತವರ ನಡೆ, ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಲು ನಗರದ ಜನತೆಗೆ ಮೂರ್ತಿಯ ದರ್ಶನದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.

ಪುಷ್ಪಾ ಬಾದಾಮಿ, ಸುವರ್ಣಮ್ಮ ಪಾಟೀಲ, ಸುನಂದಮ್ಮ ತಿಳವಳ್ಳಿ, ಗಾಯತ್ರಮ್ಮ ಕುರುವತ್ತಿ, ಶಕುಂತಲಮ್ಮ ಜಂಬಗಿ, ಅನ್ನಪೂರ್ಣಮ್ಮ ದಾನಪ್ಪನವರ, ಭಾಗ್ಯಶ್ರೀ ಗುಂಡಗಟ್ಟಿ, ಎನ್.ಎಸ್. ಶಾಂತಾದೇವಿ, ಪ್ರಮೀಳಾ ಜಂಬಗಿ, ವಿಜಯಾ ಕೊತ್ತಂಬರಿ, ವಚನಶ್ರೀ ಪಾಟೀಲ, ಬಾಬಣ್ಣ ಐರಣಿ ಶೆಟ್ಟರ್, ವೀಣಾ ಹೊದ್ದಗೇರಿ, ಸಿ.ಬಿ. ಉಮಾ, ಪಾರ್ವತಮ್ಮ ಬೆನಕನಕೊಂಡ, ಶಾಂತಾ ಪಾಟೀಲ, ಮುತ್ತಣ್ಣ ಹೊದ್ದಿಗೇರಿ, ಬಸವರಾಜ ಬಾದಾಮಿ, ಶಿವಪ್ಪ ಗುರಿಕಾರ, ವಿ.ಎಸ್. ಸಂಗನಗೌಡ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು  ಹಾಜರಿದ್ದರು.

error: Content is protected !!