ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಬೇಕು
ಇತ್ತೀಚಿನ ದಿನಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಸಿಮೆಂಟ್ ರಸ್ತೆ, ಟೈಲ್ಸ್ ಫುಟ್‌ಪಾತ್ ಆಗಿ ಗಿಡಗಳನ್ನು ನೆಡಲು ಜಾಗವಿಲ್ಲದಂತಾಗಿದೆ. ಹಿಂದಿನ ಕಾಲದಲ್ಲೆಲ್ಲಾ ಮನೆಯ ಆವರಣಗಳಲ್ಲಿ ಸಸಿಯನ್ನು ನೆಟ್ಟು ಮರವಾಗಿ ಬೆಳೆಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಸಿಮೆಂಟ್ ರಸ್ತೆ, ಟೈಲ್ಸ್ ಫುಟ್‌ಪಾತ್ ಆಗಿ ಗಿಡಗಳನ್ನು ನೆಡಲು ಜಾಗವಿಲ್ಲದಂತಾಗಿದೆ. ಹಿಂದಿನ ಕಾಲದಲ್ಲೆಲ್ಲಾ ಮನೆಯ ಆವರಣಗಳಲ್ಲಿ ಸಸಿಯನ್ನು ನೆಟ್ಟು ಮರವಾಗಿ ಬೆಳೆಸುತ್ತಿದ್ದರು.
ಕಳೆದ 15-20 ದಿನಗಳಿಂದಲೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಯುತ್ತಲೇ ಇದೆ ಸ್ವಾಗತಾರ್ಹ. ಅದೇ ರೀತಿ ಕೋಟ್ಯಂತರ ಜನರು ಬಳಸುವ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ, ದೇಶದ ಬಡ ಮತ್ತು ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ಕಡಿಮೆ ಮಾಡಿಸಬೇಕಾಗಿದೆ.
ಹಿರಿಯ ವಿಮರ್ಶಕ, ಮುತ್ಸದ್ಧಿ, ಸಾಮಾಜಿಕ ಕಳಕಳಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅವರು ಪ್ರಸ್ತುತ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳ ಬಗ್ಗೆ ಗಂಡಸರು, ಹೆಂಗಸರ ಬಗ್ಗೆ ಬೇಜವಾಬ್ದಾರಿಯ ಕುತ್ಸಿತ ಭಾವನೆಗಳ ಆರೋಪ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ನೂತನ ಸರ್ಕಾರ ನುಡಿದಂತೆ ನಡೆದು ತನ್ನ ಐತಿಹಾಸಿಕ ಐದು ಭಾಗ್ಯಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಎಲ್ಲಾ ಭಾಗಗಳಿಂದ ವಿಶೇಷವಾಗಿ ಚರ್ಚೆಗೆ ಒಳಪಟ್ಟಿದ್ದು ಗೃಹಜ್ಯೋತಿ ಭಾಗ್ಯ ಸಾಮಾಜಿಕ ಜಾಲತಾಣಗಳಲ್ಲಿ ಗೃಹಿಣಿಯರು, ಸಾರ್ವಜನಿಕರು ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ
ದೇಶದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೈಲುಗಳು ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತವೆ. ಇದೊಂದು ರೀತಿ ಜನಸ್ನೇಹಿ ಸಾರಿಗೆ ವ್ಯವಸ್ಥೆ, ಆದರೆ ನಮ್ಮ ರೈಲ್ವೆಗೆ ಆಧುನಿಕ ಸ್ಪರ್ಶ ಬೇಕಾಗಿದೆ.
ನಗರದ ಅಶೋಕ ಚಿತ್ರಮಂದಿರದ ಬಳಿ ಅಂಡರ್ ಪಾಸ್ ಆರಂಭವಾದ ನಂತರ ರೈಲ್ವೇ ಗೇಟ್ ಮುಚ್ಚಲಾಗಿದ್ದು, ಅಲ್ಲಿ ಅಡ್ಡಾಡುವ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ.
ದಿನಾಂಕ 19-5-2023 ರಂದು ಸೇಸ್ಯಾಮ್ ಲೇ-ಔಟ್‌ನಲ್ಲಿ ಕಸ ಹಾಕುತ್ತಿರುವುದನ್ನು ಬಡಾವಣೆ ನಿವಾಸಿಗಳು ನೋಡಿ ತಕ್ಷಣ dvgcoa.karnatakasmartcity.in ಪೋರ್ಟಲ್‌ನಲ್ಲಿ ದೂರು ನೀಡಿದೆವು. ದೂರು ನೀಡಿದ ದಿನವೇ ಕರೆಮಾಡಿ ನಮಗೆ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಪರಿಣಾಮ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು, ತಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಿರುವ ಕುರಿತು, ಬಣ್ಣ ಬಣ್ಣದ ಜಾಹೀರಾತುಗಳು, ದಿನಂಪ್ರತಿ ದಿನ ಪತ್ರಿಕೆಯಲ್ಲಿ ರಾರಾಜಿಸುತ್ತಿವೆ.
ರಾಜ್ಯದಲ್ಲಿ ಅತಿ ಹೆಚ್ಚಾಗಿ ಚರ್ಚೆಯಾ ಗುತ್ತಿರುವ ವಿಷಯವೇನೆಂದರೆ, ಒಂದು ಚುನಾ ವಣೆ ಮತ್ತೊಂದು ಬೇಸಿಗೆಯ ರಣಬಿಸಿಲು. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಇಂತಹ ರಣ ಬಿಸಿಲನ್ನು ಈಗಲೇ ಕಂಡಿದ್ದು. ಇದಕ್ಕೆ ದಾವಣಗೆರೆಯೂ ಕೂಡ ಹೊರತಾಗಿಲ್ಲ.
ದುಬಾರಿ ಶುಲ್ಕದಿಂದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದು ಪೋಷಕರಿಗೆ ಇಂದಿನ ದಿನಗಳಲ್ಲಿ ಕಷ್ಟವಾಗುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸೋಣ ವೆಂದರೆ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಶಿಕ್ಷಕರ ಕೊರತೆಯಾಗಿ ಮಕ್ಕಳಿಗೆ ಉತ್ತಮ ವಿದ್ಯಾ ಭ್ಯಾಸ ಸಿಗುತ್ತಿಲ್ಲ ಎಂಬ ಕೊರಗು ಪೋಷಕರದ್ದು.
ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡಾ.ಜಿ.ಪರಮೇಶ್ವರ್ ಮಾತ್ರ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಅತ್ಯಂತ ಯೋಗ್ಯವಾದ ನಡೆ. ಸತೀಶ್ ಜಾರಕಿಹೊಳೆಯವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಸ್ವತಂತ್ರ ಸರ್ಕಾರ ಬಂದರೆ ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ಸಾಮಾಜಿಕ ನ್ಯಾಯ, ನಿಯಮಗಳನ್ನು ನಿಯತ್ತಿನಿಂದ ಅನುಷ್ಠಾನ ಮಾಡುವರೇ…?