Category: ಸುದ್ದಿಗಳು

Home ಸುದ್ದಿಗಳು

ಹರಪನಹಳ್ಳಿ ವಾಲ್ಮೀಕಿ ಸಮಾಜದಿಂದ ಲೋಕಸಭಾ ಸದಸ್ಯೆ ಪ್ರಿಯಾಂಕಗೆ ಸನ್ಮಾನ

ಹರಪನಹಳ್ಳಿ : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರನ್ನು  ಹರಪನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಉಪನ್ಯಾಸಕ ಶಿವಪ್ರಸಾದ್ ಅವರಿಗೆ ವಯೋನಿವೃತ್ತಿ : ಸನ್ಮಾನ

ಹರಿಹರ : ನಗರದ ಆದಿತ್ಯ ಬಿರ್ಲಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮೊನ್ನೆ ವಯೋನಿವೃತ್ತಿ ಹೊಂದಿರುವ ಶಿವಪ್ರಸಾದ್ ಅವರನ್ನು ಕಾಲೇಜು ಅಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರು ಸನ್ಮಾನಿಸುವ ಮೂಲಕ ಬೀಳ್ಕೊಟ್ಟರು.

ಯಲವಟ್ಟಿ : ಮುಖ್ಯಶಿಕ್ಷಕ ರವೀಂದ್ರಚಾರಿ ವಯೋನಿವೃತ್ತಿ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿಗಳಿಯ ರವೀಂದ್ರಚಾರಿ ಅವರು ಸೇವೆಯಿಂದ ವಯೋನಿವೃತ್ತಿ ಹೊಂದಿದರು.

ಸದೃಢ ಸಮಾಜಕ್ಕಾಗಿ ಸದೃಢ ಆರೋಗ್ಯ ಮುಖ್ಯ

ಮಲೇಬೆನ್ನೂರು : ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀಮತಿ ವಿಜಯಲಕ್ಷ್ಮಿ ಗಂಗಾಧರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಪಾಲಿಸಿ

ಹರಿಹರ : ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಪ್ರೌಢ ಶಾಲೆ ವಿಭಾಗ) 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ದಾವಣಗೆರೆಯ ರಾಮಕೃಷ್ಣ ಆಶ್ರಮದ ತ್ಯಾಗೇಶ್ವರಾನಂದ ಶ್ರೀಗಳು ಸುಮಾರು 65 ಸಾವಿರ ರೂ. ಮೌಲ್ಯದ ಕಲಿಕಾ ಸಾಮಗ್ರಿ ವಿತರಿಸಿದರು. 

ಬೀದಿ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ

ಹೊನ್ನಾಳಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಅಖಂಡ ಭಾರತದ ಕನಸುಗಾರರೂ ಡಾ. ಶಾಮ ಪ್ರಸಾದ್ ಮುಖರ್ಜಿ ಅವರ ಹುತಾತ್ಮ ದಿನ ಹಾಗೂ ಕರ್ನಾಟಕ ಕೇಸರಿ ಎಂದೇ ಹೆಸರಾದ ಜನಸಂಘದ ಸಂಸ್ಥಾಪಕರಾದ ಡಾ. ಜಗನ್ನಾಥ್ ರಾವ್ ಜೋಶಿಯವರ ಜನುಮದಿನವನ್ನು  ಹೊನ್ನಾಳಿ ಸ್ವಾಮಿ ವಿವೇಕಾನಂದ ಭಗತ್‍ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಮಹೇಶ್‍ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಇಂಧನ ಬೆಲೆ ವಿರೋಧಿಸಿ ಹರಿಹರದಲ್ಲಿ ಬಿಜೆಪಿ ಪ್ರತಿಭಟನೆ

ಹರಿಹರ : ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ನಗರದಲ್ಲಿ ಭಾರತೀಯ ಜನತಾ ಪಕ್ಷದ  ಕಾರ್ಯಕರ್ತರು   ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. 

ಯೋಗದಿಂದ ಮಾನಸಿಕ ಸಮಸ್ಯೆಗೆ ಮದ್ದು

ಹರಪನಹಳ್ಳಿ : ಯೋಗವು ಮಾನಸಿಕ ಸಮಸ್ಯೆಗಳ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು  ಇತ್ತೀಚಿನ ಪರಿಕಲ್ಪನೆಯೇನಲ್ಲ. ಹಿಂದಿನಿಂದಲೂ ವೈದ್ಯರು ಒತ್ತಡ ಸಂಬಂಧಿ ಖಾಯಿಲೆಗೆ ಯೋಗಾಭ್ಯಾಸದ ಸಲಹೆ ನೀಡುತ್ತಿದ್ದರು ಎಂದು ಜಿಲ್ಲಾ ಯೋಗ ಶಿಬಿರದ ಸಂಚಾಲ ಕರಾದ ಕುಸುಮಾ ಜಗದೀಶ್ ಹೇಳಿದರು.

error: Content is protected !!