Category: ಕೂಡ್ಲಿಗಿ

Home ಸುದ್ದಿಗಳು ಕೂಡ್ಲಿಗಿ

ಅಕ್ಷಯ ತದಿಗಿ ಅಮಾವಾಸ್ಯೆ ಕೊಟ್ಟೂರಿನಲ್ಲಿ ಭಕ್ತರ ದಂಡು

ಕೊಟ್ಟೂರು : ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ  ಅಕ್ಷಯತದಿಗಿ  ಅಮಾವಾಸ್ಯೆ ನಿಮಿತ್ತ ಬುಧವಾರ ಭಕ್ತರು ದಂಡು ದಂಡಾಗಿ ಆಗಮಿಸಿ, ಬಿರು ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಪಡೆದರು.

ಕೊಟ್ಟೂರು : ಆಯುಷ್ಮಾನ್ ಭವ ಆರೋಗ್ಯ ಶಿಬಿರ

ಕೊಟ್ಟೂರು : ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಗ್ರಾ.ಪಂ.  ಅಧ್ಯಕ್ಷರಾದ ನಿಂಗಮ್ಮ ಮಾರಪ್ಪ  ಕಾರ್ಯಕ್ರಮ ಉದ್ಘಾಟಿಸಿದರು. 

ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೊಟ್ಟೂರು ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯತಿ

ಕೊಟ್ಟೂರು : ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೊಟ್ಟೂರು ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯತಿಯವರು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ಸಾಧನೆಗೆ ಮಣ್ಣಿನ ಗುಣವೇ ಸಾಕ್ಷಿ : ಇಸ್ರೋ ವಿಜ್ಞಾನಿ ದಾರುಕೇಶ್

ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನ ರಾಜ್ ಭವನದಲ್ಲಿ ಕಾಲೇಜು ವತಿಯಿಂದ ಯಶಸ್ವೀ ಚಂದ್ರಯಾನ 3 ಸಂದೇಶ ವಾಹಕದ ರೂವಾರಿ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಇವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೊಟ್ಟೂರು : ತಹಶೀಲ್ದಾರ್ ಅವರಿಂದ ವಾಹನ ತಪಾಸಣೆ

ಕೊಟ್ಟೂರು : ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುಮಾರಸ್ವಾಮಿ ಅವರು ಎಸ್.ಎಸ್.ಟಿ ಟೀಮ್ ಜೊತೆಗೆ ಉಜ್ಜಿನಿ ಹಾಗೂ ಹರಾಳು ಚೆಕ್‌ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಿದರು.

25ರಂದು ಉಜ್ಜಿನಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

ಕೊಟ್ಟೂರು : ಉಜ್ಜಿನಿ ರಥೋತ್ಸವದ ಸಂದರ್ಭದಲ್ಲಿ ಇಲಾಖಾಧಿಕಾರಿಗಳಿಗೆ ವಹಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಹಶೀಲ್ದಾರ್ ಎಂ.ಕುಮಾರಸ್ವಾಮಿ ತಿಳಿಸಿದರು.  

ಸಮಾನತೆಯ ಸಂದೇಶ ಸಾರಿದ ಡಾ. ಅಂಬೇಡ್ಕರ್

ಕೊಟ್ಟೂರು ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ   ಡಾ. ಬಿ.ಆರ್. ಅಂಬೇ ಡ್ಕರ್ ಅವರ 132ನೇ ಜಯಂತಿಯನ್ನು  ಹಿರಿಯ ಮುಖಂಡರು ಹಾಗೂ ಯುವಕ ರೊಂದಿಗೆ ಇಂದು ಆಚರಿಸಲಾಯಿತು.

ಕೊಟ್ಟೂರು : ಕಾಲ್ನಡಿಗೆಯಲ್ಲಿ ಮತದಾನ ಜಾಗೃತಿ

ಕೊಟ್ಟೂರು : ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಮತದಾನ ಅಭಿಯಾ ನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

ಮತದಾನದ ಅರಿವು ಮೂಡಿಸಲು ಆಟೋ ಜಾಥಾ

ಮತದಾನದ ಮಹತ್ವ ಮತ್ತು ಪ್ರಕ್ರಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತ ಚುನಾವಣೆ ಆಯೋಗ ಸ್ವೀಪ್ ಸಮಿತಿಯ ಅಧಿಕಾರಿ ಶಶಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಂಯಕ್ತಾಶ್ರಯದಲ್ಲಿ ಸೋಮವಾರ ಸಂಜೆ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಯೊಂದಿಗೆ ಆಟೋ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 41 ಲಕ್ಷ ರೂ ಸಂಗ್ರಹ

ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 41,44,651 ರೂ. ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಯು.ಎಂ.ಪ್ರಕಾಶರಾವ್ ತಿಳಿಸಿದರು.

ಮತ್ತೆ ಗೆಲ್ಲುವ ವಿಶ್ವಾಸ : ಶಾಸಕ ಎಸ್.ಭೀಮಾನಾಯ್ಕ

ಕೊಟ್ಟೂರು : ಕಾಂಗ್ರೆಸ್ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಭೀಮಾನಾಯ್ಕ ಅವರು ಪತ್ನಿ ಗೀತಾಬಾಯಿ ಅವರೊಂದಿಗೆ ಶನಿವಾರ ಸಂಜೆ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು. 

error: Content is protected !!