Category: ಹೊನ್ನಾಳಿ

Home ಸುದ್ದಿಗಳು ಹೊನ್ನಾಳಿ

`ಭಾರತ್ ರೈಸ್’ ವಿತರಣೆ ಕೇಂದ್ರ ಸರ್ಕಾರದ ಚುನಾವಣಾ ಗಿಮಿಕ್

 ಹೊನ್ನಾಳಿ : ಪಡಿತರ ವಿತರಕರಿಗೆ ನಮ್ಮ ಸರ್ಕಾರ ಕಮೀಷನ್ ಹಣ ಹೆಚ್ಚು ಮಾಡಿದ್ದು, ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.

ಹೊನ್ನಾಳಿ : ಬಿ.ಎಸ್.ವೈ. ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆ ಶೀಘ್ರ ಇತ್ಯರ್ಥ

ಹೊನ್ನಾಳಿ : ವಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾ ಉಸ್ತುವಾರಿಗಳು ಮತ್ತು ಸಮಾಜದ ಮುಖಂಡರಾದ ಭೈರತಿ ಬಸವರಾಜ್ ಮತ್ತಿತರೆ ಪ್ರಮುಖರು ಈ ಹಿಂದೆ ಪಕ್ಷಕ್ಕಾಗಿ ದುಡಿದಿದ್ದೀರಿ ಮತ್ತೆ ತಾವು ಪಕ್ಷಕ್ಕೆ ಮರಳಬೇಕೆಂದು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ದಾವಣಗೆರೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರಳಿದ್ದಾಗಿ ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ತಿಳಿಸಿದರು.

1.24 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ಎಪಿಎಂಸಿಗೆ ಮತ್ತೆ ಜೀವಕಳೆ : ಶಾಸಕ ಶಾಂತನಗೌಡ

ಹೊನ್ನಾಳಿ : ರಾಜ್ಯ ಸರ್ಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ವ್ಯಾಪಾರ ವಹಿವಾಟು ಚುರುಕುಗೊಳಿಸಿ, ಸಮಿತಿಗಳಿಗೆ ಮತ್ತೆ ಜೀವಕಳೆ ತರುವ ಕಾರ್ಯ ನಡೆದಿದೆ ಎಂದು ಶಾಸಕ  ಡಿ.ಜಿ. ಶಾಂತನಗೌಡ ಹೇಳಿದರು.

ಸವಳಂಗ ಕೆರೆ ವ್ಯಾಪ್ತಿಯ 7 ಹಳ್ಳಿಗಳಿಗೆ 10 ದಿನಗಳು 30 ಎಮ್‍ಸಿಎಫ್‍ಟಿ ನೀರು ಬಿಡಲು ತೀರ್ಮಾನ

ಹೊನ್ನಾಳಿ : ನ್ಯಾಮತಿ ತಾಲ್ಲೂಕಿನ ಸವಳಂಗ ಕಾಯಕ ಕೆರೆ (ಹೊಸಕೆರೆ) ಯ ಅಚ್ಚುಕಟ್ಟು ವ್ಯಾಪ್ತಿಯ ಹಳ್ಳಿಗಳ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಂಗಳಲ್ಲಿ 10 ದಿನಗಳು ಕಾಲ 30 ಎಮ್‍ಸಿಎಫ್‍ಟಿ ನೀರು ಬಿಡಬೇಕೆಂದು ತೀರ್ಮಾನ ಕೈಕೊಳ್ಳಲಾಯಿತು.

ಹೊನ್ನಾಳಿ ಪುರಸಭೆ : 23.48 ಲಕ್ಷ ಉಳಿತಾಯ ಬಜೆಟ್

ಹೊನ್ನಾಳಿ : ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ಹೊನ್ನಾಳಿ ಪುರಸಭೆಯ 2024-25ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಭಿಷೇಕ್ ಅವರು ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನಿರಂಜನಿ 23.48 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ್ದಾರೆ. 

ಈಶ್ವರ ದೇವಸ್ಥಾನದ ಕಳಸಾರೋಹಣ

ಹೊನ್ನಾಳಿ : ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಇದೇ ದಿನಾಂಕ 7ರಂದು ಬೆಳಿಗ್ಗೆ 11.30ಕ್ಕೆ ಈಶ್ವರ ದೇವಸ್ಥಾನದ ಕಳಸಾರೋಹಣ, ಕಾಳಿಕಾಂಬ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಬಸವೇಶ್ವರ ಹಾಗೂ ಈಶ್ವರ ದೇವಸ್ಥಾನ ಸೇವಾ ಟ್ರಸ್ಟಿನ ಅಧ್ಯಕ್ಷ ಎಸ್.ಎಂ. ನಾಗರಾಜಪ್ಪ ತಿಳಿಸಿದರು.

ಹೊಸ ಆವಿಷ್ಕಾರಗಳನ್ನು ಬಿತ್ತಲು ಎಳೆಯ ವಯಸ್ಸು ಸೂಕ್ತ

ಹೊನ್ನಾಳಿ : ಹೊಸ ಆವಿಷ್ಕಾರಗಳನ್ನು ನಾವು ಮಕ್ಕಳ ಎಳೆಯ ವಯಸ್ಸಿನಲ್ಲಿಯೇ ಕಾಣಲು ಸಾಧ್ಯ, ಇದನ್ನು ನಾವು ಕಾಣ ಬೇಕಾದರೆ ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಬಿತ್ತಬೇಕು ಎಂದು ಸಿ.ವಿ ರಾಮನ್ ವಿಜ್ಞಾನ ಸಂಘದ ಅಧ್ಯಕ್ಷೆ ಡಾ. ಶಕುಂತಲಾ ರಾಜ್ ಕುಮಾರ್ ಹೇಳಿದರು. 

ಘಂಟ್ಯಾಪುರದಲ್ಲಿ ವೀರಭದ್ರಸ್ವಾಮಿ ಕೆಂಡದಾರ್ಚನೆ, ಪಲ್ಲಕ್ಕಿ ಮಹೋತ್ಸವ

ಹೊನ್ನಾಳಿ : ತಾಲ್ಲೂಕಿನ ಘಂಟಾಪುರ ಗ್ರಾಮದ ಶ್ರೀ ವೀರಭದ್ರಸ್ವಾಮಿ ಕೆಂಡದಾರ್ಚನೆ, ಪಲ್ಲಕ್ಕಿ ಮಹೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ನೆರವೇರಿತು. 

ನ್ಯಾಮತಿ : ಹಳೇ ವಿದ್ಯಾರ್ಥಿಗಳಿಂದ ಗೌರವ ಸ್ನೇಹ ಸಮ್ಮಿಲನ

ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮ ವ್ಯಾಪ್ತಿಯ ಅಕ್ಕಪಕ್ಕದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ, ಬದುಕಿನ ದಾರಿ ದೀಪವಾಗಿದ್ದು, ವಿವಿಧ ಸ್ತರಗಳಲ್ಲಿನ ಹುದ್ದೆಗಳ ಕರ್ತವ್ಯ ನಿರ್ವಹಿಸಿ, ಸಮಾಜಮುಖಿಯಾಗಿ ಜೀವಿಸುವುದಕ್ಕೆ ಕಾರಣರಾದ ಗುರುಗಳನ್ನು ಇಂದು ಶಿಷ್ಯಂದಿರು ಗೌರವಿಸುತ್ತಿರುವುದು ವಿಶೇಷ ಹಾಗೂ ಇತರರಿಗೆ ಮಾದರಿಯ ಅರ್ಥಪೂರ್ಣ ಕಾರ್ಯವಾಗಿದೆ

ಬಸವೇಶ್ವರ ದೇಗುಲದ ಪ್ರವೇಶೋತ್ಸವ , ವಿಗ್ರಹ ಪ್ರತಿಷ್ಠಾಪನೆ , ಕಳಶಾರೋಹಣ

ನ್ಯಾಮತಿ : ತಾಲ್ಲೂಕಿನ ಹಳೇಮಳಲಿ ಗ್ರಾಮದ ಶ್ರೀ ಬಸವೇಶ್ವರ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಮತ್ತು ಕಾರ್ಯಕ್ರಮವು ನಾಡಿದ್ದು ದಿನಾಂಕ 29 ರ ಗುರುವಾರದಿಂದ ಮಾರ್ಚ್‌ 3 ರ ಭಾನುವಾರದವರೆಗೆ ನಡೆಯಲಿದೆ.

18 ಮೇವು ಕತ್ತರಿಸುವ ಯಂತ್ರಗಳ ವಿತರಣೆ

ಹೊನ್ನಾಳಿ, ಫೆ. 25- ಪಕ್ಷ – ಜಾತಿ-ಭೇದವಿಲ್ಲದೇ ಅರ್ಹ ಫಲಾನುಭವಿಗಳಿಗೆ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ಕೆಲಸವಾಗಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಅಧಿಕಾರಿಗಳಿಗೆ ನಿರ್ದೇಶಿಸಿದರು.

error: Content is protected !!