Category: ಹರಿಹರ

ಕೆ.ಎನ್. ಹಳ್ಳಿ ಬಳಿ ಸಿಡಿಲಿಗೆ ಮೇಕೆಗಳು ಬಲಿ

ಮಲೇಬೆನ್ನೂರು : ಸಿಡಿಲು ಬಡಿದು 8 ಮೇಕೆಗಳು ಸಾವನ್ನಪ್ಪಿರುವ ಘಟನೆ ಗುರುವಾರ ಸಾಯಂಕಾಲ ಕಡರನಾಯ್ಕನಹಳ್ಳಿ ಗ್ರಾಮದ ಬಳಿ ಹೊಲದಲ್ಲಿ ನಡೆದಿದೆ. ಘಟನೆಯಲ್ಲಿ 3 ಮೇಕೆಗಳ ಕಣ್ಣುಗಳಿಗೆ ಹಾನಿಯಾಗಿ ನಿತ್ರಾಣ ಸ್ಥಿತಿಯಲ್ಲಿವೆ ಎನ್ನಲಾಗಿದೆ. 

ಹರಿಹರ : ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ

ಹರಿಹರ : ನಗರದ  ದಸರಾ ಉತ್ಸವ ಸಮಿತಿಯಿಂದ ನಾಮದೇವ ಶಿಂಪಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ದೇವಿ ಆರಾಧನೆ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು  ನೆರವೇರಿಸಲಾಯಿತು.

ಶಾಂತಿಯುತ ಹೋರಾಟದಿಂದಲೂ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದು ವಿಶ್ವಕ್ಕೆ ತಿಳಿಸಿಕೊಟ್ಟವರು ಗಾಂಧೀಜಿ

ಹರಿಹರ : ಅಶಾಂತಿ ಸೃಷ್ಟಿಸುವುದ ರಿಂದ ಸ್ವಾತಂತ್ರ್ಯ ಸಿಗಬಹುದು ಎಂದುಕೊಂಡಿ ದ್ದವರಿಗೆ ಶಾಂತಿಯುತ ಹೋರಾಟದಿಂದಲೂ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ಮಲೇಬೆನ್ನೂರಿನಲ್ಲಿ ಇಂದಿನಿಂದ ವಿವಿಧೆಡೆ ಶರನ್ನವ ರಾತ್ರಿ, ಪುರಾಣ, ಭಜನೆ

ಶರನ್ನವರಾತ್ರಿ (ದಸರಾ) ಹಬ್ಬದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 12 ರವರೆಗೆ ಪ್ರತಿ ದಿನ ಸಂಜೆ 6.30 ರಿಂದ 9 ಗಂಟೆಯವರೆಗೆ ದೇವಿ ಮಹಾತ್ಮೆ ಪುರಾಣ ಪ್ರವಚನ ಹಾಗೂ ಶ್ರೀ ಚೌಡೇಶ್ವರಿ ದೇವಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಜುಮ್ಮಾ (ಜಾಮೀಯಾ) ಮಸೀದಿ ಆಡಳಿತ ಮಂಡಳಿಗೆ ಆಯ್ಕೆ

ಮಲೇಬೆನ್ನೂರು : ತೀವ್ರ ಗಮನ ಸೆಳೆದಿದ್ದ ಪಟ್ಟಣದ ಪ್ರತಿಷ್ಠಿತ ಜುಮ್ಮಾ (ಜಾಮೀಯಾ) ಮಸೀದಿಯ ಆಡಳಿತ ಮಂಡಳಿಯ 11 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಶಾಂತಿಯುತ ಚುನಾವಣೆ ನಡೆಯಿತು.

ಶ್ರೀ ರಾಮಲಿಂಗೇಶ್ವರಸ್ವಾಮಿ ಪ.ಪೂ. ಕಾಲೇಜಿನ ಬಾಲಕಿಯರು ರಾಜ್ಯಮಟ್ಟಕ್ಕೆ

ಮಲೇಬೆನ್ನೂರು : ಈಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹರನಹಳ್ಳಿ-ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಪ.ಪೂ. ಕಾಲೇಜಿನ ಬಾಲಕಿಯರು  ಕಬಡ್ಡಿ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭಕ್ತಿ – ಶ್ರದ್ಧೆ ಹೆಚ್ಚಾದಷ್ಟೂ ನಾಡು ಸಮೃದ್ಧಿ

ಹರಿಹರ : ದೇವರ ಬಗ್ಗೆ ಭಕ್ತಿ, ಶ್ರದ್ಧೆ ಹೆಚ್ಚಾದಷ್ಟೂ ನಾಡು ಸಮೃದ್ಧಿಯಿಂದ ಇರುತ್ತದೆ. ಮನುಷ್ಯನ ಬದುಕು ಸುಸ್ಥಿರವಾಗಿ ಸಾಗುತ್ತದೆ ಎಂದು ಆವರಗೊಳ್ಳ ಶ್ರೀ  ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಮಲೇಬೆನ್ನೂರು ಪಟ್ಟಣದಲ್ಲಿ ಸಂಭ್ರಮದ ಮೆರವಣಿಗೆ : ಗಣಪತಿಗಳ ವಿಸರ್ಜನೆ

ಮಲೇಬೆನ್ನೂರು : ಪಟ್ಟಣದ ಶ್ರೀ ಕಾಲಭೈರವ ಮತ್ತು ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನಗಳಲ್ಲಿ ಪ್ರತಿಷ್ಟಾಪಿಸಿದ್ದ ಗಣಪತಿಗಳ ವಿಸರ್ಜನೆಯು ಶುಕ್ರವಾರ ಸಂಭ್ರಮದ ಮೆರವಣಿಗೆ ಮೂಲಕ ನೆರವೇರಿತು.

error: Content is protected !!