ಹರಿಹರ: ಗಣೇಶನ ಶೋಭಾಯಾತ್ರೆ ಅದ್ಧೂರಿ

ಹರಿಹರ: ಗಣೇಶನ ಶೋಭಾಯಾತ್ರೆ ಅದ್ಧೂರಿ

ಹರಿಹರ, ಸೆ.29-  ನಗರದ ಹಿಂದೂ ಮಹಾ ಗಣಪತಿ ಮೂರ್ತಿಯನ್ನು ವಿಜೃಂಭಣೆಯ ಶೋಭಾ ಯಾತ್ರೆಯೊಂದಿಗೆ ಭಾನುವಾರ ವಿಸರ್ಜಿಸಲಾಯಿತು.

ಬೆಳಿಗ್ಗೆ ಶಾಸಕ ಬಿ.ಪಿ. ಹರೀಶ್ ಮೆರವಣಿಗೆಗೆ ಚಾಲನೆ ನೀಡಿದರು. ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ, ಹಳೆ ಪಿ.ಬಿ ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಹಾದು ಪುನಃ ಗಾಂಧಿ ವೃತ್ತದ ಮೂಲಕ ಹಾದು ನಗರಸಭೆ  ನಿಗದಿ ಪಡಿಸಿರುವ ಸ್ಥಳದತ್ತ ಆಗಮಿಸಿದಾಗ ಮೂರ್ತಿ ವಿಸರ್ಜಿಸಲಾಯಿತು.

ಮೆರವಣಿಗೆ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿ ದ್ದಂತೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಮಾಜಿ ಸಂಸದ ಮೈಸೂರಿನ ಪ್ರತಾಪ್ ಸಿಂಹ, ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಮಾಜಿ ಜಿ.ಪಂ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಗಾಯತ್ರಿ ಸಿದ್ದೇಶ್ವರ, ಪೂಜಾರ್ ಚಂದ್ರಶೇಖರ್ ಆಗಮಿಸಿ ದಾಗ ಮೆರವಣಿಗೆಯಲ್ಲಿದ್ದ ಯುವಜನತೆಯ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ಮೇಳಗಳಿದ್ದವು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ಸಂಘ-ಸಂಸ್ಥೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಉಪಹಾರ, ಊಟ, ಪಾನಕ, ನೀರಿನ ಬಾಟೆಲ್ ವ್ಯವಸ್ಥೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರರು, ಸಂತರ ಸ್ತಬ್ಧ ಚಿತ್ರಗಳು ಗಮನ ಸೆಲೆದವು. 

ಡಾ ಬಾಬಾ ಸಾಹೇಬ್ ಅಂಬೇಡ್ಕರ್,  ಪುನೀತ್ ರಾಜ್‍ಕುಮಾರ್,  ಪೋಟೋ ಮತ್ತು ದರ್ಶನ ಪೋಟೋ ಗಳಿಗೆ ಯುವಕರು ಹಾಲಿನಿಂದ ಅಭಿಷೇಕ ಮಾಡಿದರು. ಬೆಳಗ್ಗೆ ಯಿಂದ ಸಂಜೆಯವರೆಗೆ ಎಲ್ಲಾ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಎಸ್ಪಿ ಉಮಾ ಪ್ರಶಾಂತ್, ಅಡಿಷನಲ್ ಎಸ್ಪಿ ಜಿ. ಮಂಜುನಾಥ್, ಡಿವೈಎಸ್ಪಿ ಜಿ.ಎಸ್. ಬಸವರಾಜ್, ಸಿ.ಪಿ.ಐ ಗಳಾದ ಸುರೇಶ್ ಸಗರಿ,  ದೇವಾನಂದ್, ಲಕ್ಷ್ಮಣ್ ನಾಯ್ಕ್‌, ಪಿಎಸ್ಐ ಶ್ರೀಪತಿ, ಗನ್ನಿ, ಮಂಜುನಾಥ್ ಕುಪ್ಪೇಲೂರು,  ಸೋಮಶೇಖರ್ ರಡ್ಡಿ, ವಿಜಯಕುಮಾರ್  ಇತರರು ಯಾವುದೇ ಅವಘಡ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್,  ಅರ್ಜುನ ಬಿ.ಪಿ. ಹರೀಶ್,  ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಹಿಂದೂ ಜಾಗರಣಾ ವೇದಿಕೆಯ ದಿನೇಶ್, ಚಂದನ್ ಮೂರ್ಕಲ್, ಧರಣೇಂದ್ರ, ಹೆಚ್. ಎಸ್. ರಾಘವೇಂದ್ರ, ಶಿವಪ್ರಕಾಶ್ ಶಾಸ್ತ್ರಿ, ಮಹೇಶ್,  ಶಿವಕುಮಾರ್, ರಟ್ಟಿಹಳ್ಳಿ ಮಂಜುನಾಥ್, ಸ್ವಾತಿ ಹನುಮಂತ್,  ಹೆಚ್‌.ಸಿ . ಕೀರ್ತಿ ಕುಮಾರ್, ವಡ್ನಾಳ ಪ್ರಕಾಶ್, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಉದ್ಯಮಿ ಅರುಣ್ ಕುಮಾರ್ ಮಿಠಾಯಿ, ನವರತ್ನ ಶಶಿಕಾಂತ್, ಡಾ ವಿ.ಟಿ. ನಾಗರಾಜ್, ಟಿ.ಜೆ. ಮುರುಗೇಶಪ್ಪ,  ನಗರಸಭೆ ಸದಸ್ಯರಾದ  ಹನುಮಂತಪ್ಪ, ಎ.ಬಿ. ವಿಜಯಕುಮಾರ್, ಶಂಕರ್ ಖಟಾವ್ಕರ್,  ಬಿಜೆಪಿ ಅಜಿತ್ ಸಾವಂತ್,  ಜೆಡಿಸ್ ಅಡಕಿ ಕುಮಾರ್, ಎಂ‌ ಚಿದಾನಂದ ಕಂಚಿಕೇರಿ ಮತ್ತು ಇತರರು ಹಾಜರಿದ್ದರು.

ಬೆಳಕೇರಿ ನಾಗಣ್ಣ, ಬೇಳಕೇರಿ  ಚಂದ್ರಪ್ಪ,  ಶೇರಾಪುರ ರಾಜಪ್ಪ,  ಎಂ. ಅರ್.   ತಿಪ್ಪೇಸ್ವಾಮಿ, ಮೂಲಿಮನೆ, ರಮೇಶ್, ಮೂಲಿಮನಿ ಕಿರಣ್, ಮುದೇಗೌಡ್ರು ಪ್ರಭು, ಮುದ್ದಪರ, ವಿಜಯ ಕುಮಾರ್,  ಬಾಬು  ದೋಸೆ ವ್ಯವಸ್ಥೆ ಮಾಡಲಾಗಿತ್ತು.

error: Content is protected !!