Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಶ್ರೀಗಳ ಆಶೀರ್ವಾದ

ಕರ್ನಾಟಕ ತಾಂಡಾ ಅಭಿ ವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯಕ ಅವರು ಸಾಣೇಹಳ್ಳಿ ತರಳಬಾಳು ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಮಾಡಿದರು.

ಸಾಹಿತಿ ಡಾ. ರೂಪಶ್ರೀ ಶಶಿಕಾಂತ್ ಅವರ ಶ್ರೀಕೃಷ್ಣಧ್ಯಾನಾಮೃತ ಕೃತಿಗೆ ಪ್ರಶಂಸಾ ಪತ್ರ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಕೊಡ ಮಾಡುವ `ಜಲಜಾ ಗಂಗೂರ್ ಹರಿದಾಸ ಸಾಹಿತ್ಯ ಪ್ರಶಸ್ತಿ’ಯನ್ನು  ಬೆಂಗಳೂರಿನ ಜಯನಗರದ ವಿಜಯ ಪಿಯು ಕಾಲೇಜಿನಲ್ಲಿ ಮೊನ್ನೆ ನಡೆದ ಸಮಾರಂಭದಲ್ಲಿ ಶ್ರೀಮತಿ ಲೀಲಾವತಿ ಕೆ.ಕುಲ್ಕರ್ಣಿ ಅವರಿಗೆ ನೀಡಿ ಗೌರವಿಸಲಾಯಿತು.

ಸಾಲಕಟ್ಟೆ : ಶಾಲಾ ಕೊಠಡಿ ಉದ್ಘಾಟನೆ

ಮಲೇಬೆನ್ನೂರು : ಸಾಲಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಯನ್ನು ಶಾಸಕ  ಬಿ.ಪಿ. ಹರೀಶ್ ಉದ್ಘಾಟಿಸಿದರು.

ರೋವರ್, ರೇಂಜರ್ಸ ಸಭೆ ಯಶಸ್ವಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಡಿಆರ್ಆರ್ ಸ್ಕೌಟ್  ಭವನದಲ್ಲಿ ಜಿಲ್ಲಾ ಮಟ್ಟದ (ಪದವಿ ಪೂರ್ವ ಉಪನ್ಯಾಸಕರ) ರೋವರ್, ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್‌ಗಳ ಸಭೆ ನಡೆಯಿತು.

ಜಿಲ್ಲಾ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷ್‌, ಹನುಮಂತಪ್ಪಗೆ ಪ್ರಥಮ

ನಗರದ ಶಿವಯೋಗ ಮಂದಿರದಲ್ಲಿ ಈಚೆಗೆ ಪಂಚಾಯತ್ ರಾಜ್ ಮತ್ತು ಆಯುಷ್ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಎಸ್.ಎಸ್. ಫಿಟ್‍ನೆಸ್ ಯೋಗಾಸನ ಮತ್ತು ಸ್ಪೋರ್ಟ್ಸ್‌ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

ಭೂತೆ ಬಡಾವಣೆ ರಸ್ತೆ ಅವ್ಯವಸ್ಥೆ ರಸ್ತೆಯ ದುರಸ್ತಿಗೆ ನಾಗರಿಕರ ಆಗ್ರಹ

ಹರಿಹರ : ಅಮರಾವತಿಯಿಂದ ಟಿಪ್ಪು ನಗರಕ್ಕೆ ಹೋಗುವ ಮಾರ್ಗದಲ್ಲಿ ಭೂತೆ ಬಡಾವಣೆ ಇದೆ. ಈ ಭಾಗದಲ್ಲಿ ರಸ್ತೆಯ ಅವ್ಯವಸ್ಥೆ ಹೇಳತೀರದು. ಚುನಾವಣೆ ಬಂದಾಗ ಇನ್ನೇನು ಉತ್ತಮ ರಸ್ತೆ ಮತ್ತು ಎರಡೂ ಬದಿ ಚರಂಡಿ ಆಗುತ್ತದೆ

ಬುಡಕಟ್ಟು ಮಹಿಳೆಯರಿಗೆ ಕ್ರೀಡಾಕೂಟ

ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಬದಿಯನಾಯ್ಕನ  ತಾಂಡಾದಲ್ಲಿ ಬುಡಕಟ್ಟು ಸಮು ದಾಯದ ಮಹಿಳೆಯರಿಗೆ  ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಡುಬಡವರಿಗೆ ನೆರವು ನೀಡುವುದು ಇಂದಿನ ತುರ್ತು ಅಗತ್ಯ

ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಕಾರ್ಯ ಶ್ಲ್ಯಾಘನೀಯ. ಹಸಿದವರಿಗೆ ಮತ್ತು ಕಡುಬಡವರಿಗೆ ನೆರವು ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ

ಶಾಲಾ ಮಕ್ಕಳಿಗೆ ಸಾಮಗ್ರಿ ವಿತರಣೆ

ಹರಿಹರ : ಹರಪನಹಳ್ಳಿಯ ಉಜ್ಜಯಿನಿ ಕಾಲೇಜು ಉಪನ್ಯಾಸಕ ಮಲ್ಲಿಕಾರ್ಜುನ  ಅವರು ಅರಸೀಕೆರೆ ಗ್ರಾಮದ ತಿಮ್ಮಲಾಪುರ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಕೊಡಿಸಿದ್ದಾರೆ.

ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ರಾಣೇಬೆನ್ನೂರು : ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಒಪಿಎಸ್ ಜಾರಿಗೊಳಿಸುವ ಮತ್ತು ಜ್ಯೋತಿ ಸಂಜೀವಿನಿ ಯೋಜನೆ‌ ಸೇರಿದಂತೆ   ‌ವಿವಿಧ ಬೇಡಿಕೆಗಳನ್ನು  ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕೆ. ಗುರು ಬಸವರಾಜ್‌ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ  ಮುಖ್ಯಮಂತ್ರಿಗಳಿಗೆ‌ ಮನವಿ ಸಲ್ಲಿಸಿದರು.

ಅಂತೂ ಬಂತು ಜಗಳೂರು ಕೆರೆಗೆ ನೀರು

ಜಗಳೂರು : ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಕೆರೆ ಮತ್ತು ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಭಾಗವಾಗಿ ಇಂದು  ಜಗಳೂರು ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳಿಗೆ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಯಿತು.

error: Content is protected !!