ದಾವಣಗೆರೆ, ಜು.7- ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಕೊಡ ಮಾಡುವ `ಜಲಜಾ ಗಂಗೂರ್ ಹರಿದಾಸ ಸಾಹಿತ್ಯ ಪ್ರಶಸ್ತಿ’ಯನ್ನು ಬೆಂಗಳೂರಿನ ಜಯನಗರದ ವಿಜಯ ಪಿಯು ಕಾಲೇಜಿನಲ್ಲಿ ಮೊನ್ನೆ ನಡೆದ ಸಮಾರಂಭದಲ್ಲಿ ಶ್ರೀಮತಿ ಲೀಲಾವತಿ ಕೆ.ಕುಲ್ಕರ್ಣಿ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದಾವಣಗೆರೆಯ ದಂತ ವೈದ್ಯರೂ, ಹಿರಿಯ ಸಾಹಿತಿಯೂ ಆಗಿರುವ ಡಾ. ರೂಪಶ್ರೀ ಶಶಿಕಾಂತ್ ಅವರ `ಶ್ರೀಕೃಷ್ಣಧ್ಯಾನಾಮೃತ’ ಪುಸ್ತಕಕ್ಕೆ ಪ್ರಶಂಸಾ ಪತ್ರ ಮತ್ತು ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಸಾಹಿತಿ ಡಾ. ರೂಪಶ್ರೀ ಶಶಿಕಾಂತ್ ಅವರ ಶ್ರೀಕೃಷ್ಣಧ್ಯಾನಾಮೃತ ಕೃತಿಗೆ ಪ್ರಶಂಸಾ ಪತ್ರ
