ದಾವಣಗೆರೆ, ಜು.7- ನಗರದ ಶಿವಯೋಗ ಮಂದಿರದಲ್ಲಿ ಈಚೆಗೆ ಪಂಚಾಯತ್ ರಾಜ್ ಮತ್ತು ಆಯುಷ್ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಎಸ್.ಎಸ್. ಫಿಟ್ನೆಸ್ ಯೋಗಾಸನ ಮತ್ತು ಸ್ಪೋರ್ಟ್ಸ್ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿಶೇಷ್ (ಪ್ರಥಮ), ಎಸ್. ಸೂರ್ಯ, ಪ್ರಿಯಾ, ದೈವಿಕ್, ಪ್ರಜ್ವಲ್ (ದ್ವಿತೀಯ), ಎಸ್. ಸಂಜಯ್ (ಚತುರ್ಥ) ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಹನುಮಂತಪ್ಪ ಪ್ರಥಮ, ನಾಗರಾಜಪ್ಪ ದ್ವಿತೀಯ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.