
ವಿದ್ಯುತ್ ಪೂರೈಕೆ ಸಮಸ್ಯೆ: ರೈತರಿಂದ ಕೆಪಿಟಿಸಿಎಲ್ ಘಟಕಕ್ಕೆ ಬೀಗ, ಅಧಿಕಾರಿಗಳಿಂದ ರೈತರ ಮನವೊಲಿಕೆ
ಮಾಯಕೊಂಡ : ಹೋಬಳಿಯ ಓಬೇನಹಳ್ಳಿ, ಹೊನ್ನಾ ನಾಯ್ಕನಹಳ್ಳಿ, ನರಗನಹಳ್ಳಿ, ದಿಂಡದಹಳ್ಳಿ ಗ್ರಾಮದ ಐಪಿ ಸೆಟ್‌ಗಳಿಗೆ ನಿಗದಿತವಾಗಿ ವಿದ್ಯುತ್ ಪೂರೈಸುತ್ತಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು
ಮಾಯಕೊಂಡ : ಹೋಬಳಿಯ ಓಬೇನಹಳ್ಳಿ, ಹೊನ್ನಾ ನಾಯ್ಕನಹಳ್ಳಿ, ನರಗನಹಳ್ಳಿ, ದಿಂಡದಹಳ್ಳಿ ಗ್ರಾಮದ ಐಪಿ ಸೆಟ್‌ಗಳಿಗೆ ನಿಗದಿತವಾಗಿ ವಿದ್ಯುತ್ ಪೂರೈಸುತ್ತಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು
ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವಿಶೇಷ ದತ್ತು ಸಂಸ್ಥೆ ರಾಜ್ಯ ಮಹಿಳಾ ನಿಲಯ ಇವರಿಗೆ ಒಂದು ತಿಂಗಳ ಪಡಿತರಕ್ಕಾಗಿ 9,124 ರೂ.ಗಳ ಚೆಕ್ ನೀಡಲಾಯಿತು.
ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 18ರವರೆಗೆ ಜರುಗಲಿದೆ.
ಹೊನ್ನಾಳಿ : ತಾಲ್ಲೂಕಿನ ತರಗನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಯಿತು.
ಜಗಳೂರು : ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಲ್ಯಾಬ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಯಕರ್ತರು ತಾಲ್ಲೂಕು ಆಡಳಿತ ಅಧಿಕಾರಿಗೆ ಮನವಿ ಸಲ್ಲಿಸಿದರು.
ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ನಗರದ ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಂಭಾಗ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮತ್ತು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಮಂಗಳವಾರ ಪ್ರತಿಭಟನಾ ಮತ ಪ್ರದರ್ಶಿಸಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಬುಧವಾರ ಬೆಳಿಗ್ಗೆ 11.30 ಕ್ಕೆ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ
ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಇದೇ ದಿನಾಂಕ 15 ರ ಶನಿವಾರ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ ರಥೋತ್ಸವ ನಡೆಯಲಿದೆ.
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋ ತ್ಸವವು ಇದೇ ದಿನಾಂಕ 13 ಗುರುವಾರ ರಾತ್ರಿ 12 ಗಂಟೆ ನಂತರ ನಡೆಯ ಲಿದೆ. ಇಂದು ಆವರಗೊಳ್ಳದ ಶ್ರೀ ವೀರಭದ್ರೇ ಶ್ವರ ಸ್ವಾಮಿಯು ದೊಡ್ಡಬಾತಿಗೆ ದಯಪಾಲಿಸಲಿದೆ.
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸ ವವು ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ನಾಳೆ ಗುರುವಾರ ಜಾತ್ರೆ, ಶುಕ್ರವಾರ ಓಕಳಿ ಉತ್ಸವ ನಡೆಯಲಿದೆ.
ಆದಿ ಶಕ್ತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹೇಮಪುರ ಮಹಾಪೀಠ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಬಂಗಾರು ಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರುಗಳು ಸಾನ್ನಿಧ್ಯ ವಹಿಸುವರು.
ಮಲೇಬೆನ್ನೂರು, ಮಾ.10- ಹೋಳಿ ಹಬ್ಬ ಆಚರಣೆ ವೇಳೆ ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬೇಡಿ. ಅಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳ ಮೇಲೂ ಬಣ್ಣ ಹಾಕಬೇಡಿ ಎಂದು ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನಮನಿ ಕಟ್ಟುನಿಟ್ಟಾಗಿ ಹೇಳಿದರು.