Tag: ಮಲೇಬೆನ್ನೂರು

Home ಮಲೇಬೆನ್ನೂರು

ಹನಗವಾಡಿ ಪಿಎಸಿಎಸ್ ಅಧ್ಯಕ್ಷರಾಗಿ ಎ.ಬಿ.ಮಂಜುನಾಥ್

ಮಲೇಬೆನ್ನೂರು : ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎ.ಬಿ.ಮಂಜುನಾಥ್ (ಅಪ್ಪಿ) ಮತ್ತು ಉಪಾಧ್ಯಕ್ಷರಾಗಿ ತಳವಾರ ನಿಂಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಗಳಿ ಪಿಎಸಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಉಮೇಶ್, ಉಪಾಧ್ಯಕ್ಷರಾಗಿ ಜಿಗಳಿ ಕುಸುಮ

ಜಿಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳ್ಳಿಹಾಳ್ ಊರಮುಂದ್ಲರ ಉಮೇಶ್ (ಹೆಚ್‌.ಟಿ. ಶಾಂತನಗೌಡರ ಮಗ) ಮತ್ತು ಉಪಾಧ್ಯಕ್ಷರಾಗಿ ಜಿಗಳಿಯ ಶ್ರೀಮತಿ ಕುಸುಮ ಜಿ.ಎಂ. ಜಯದೇವ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಲೇಬೆನ್ನೂರು: ಇಂದು ಸಿದ್ದಗಂಗಾ ಶ್ರೀ ಸ್ಮರಣೆ, ದಾಸೋಹ

ಪಟ್ಟಣದ ಜಿಗಳಿ ಸರ್ಕಲ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ನಡೆದಾಡುವ ದೇವರು ತ್ರಿವಿಧ ದಾಸೋಹಿ ನಡೆದಾಡುವ ದೇವರು ಶ್ರೀ ಡಾ. ಶಿವಕುಮಾರ್‌ ಮಹಾಸ್ವಾಮಿಗಳವ ರ 6ನೇ ವರ್ಷದ ಪುಣ್ಮಸ್ಮರಣೆ ಹಾಗು ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಸಂಸ್ಕೃತಿ-ಸಂಸ್ಕಾರದಿಂದ ವ್ಯಕ್ತಿತ್ವ ವೃದ್ಧಿ

ಮಲೇಬೆನ್ನೂರು : ವಿದ್ಯಾರ್ಥಿಗಳ ಪ್ರತಿಭೆಗೆ ಸಂಸ್ಕೃತಿ-ಸಂಸ್ಕಾರ ದೊರೆತರೆ, ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್‌.ಹೆಚ್‌. ಹೂಗಾರ್‌ ಹೇಳಿದರು.

ಲಯನ್ಸ್ ರಕ್ತನಿಧಿ ಕೇಂದ್ರಕ್ಕೆ ಹೊಸ ಆಂಬ್ಯುಲೆನ್ಸ್ ಲೋಕಾರ್ಪಣೆ

ಲಯನ್ಸ್ ಜಿಲ್ಲೆಗೆ ಹೊಸದಾಗಿ ಖರೀದಿಸಿರುವ ಲಯನ್ಸ್ ರಕ್ತನಿಧಿ ಕೇಂದ್ರದ ಆಂಬ್ಯುಲೆನ್ಸ್ ವಾಹನವನ್ನು ಲಯನ್ಸ್ ಮಾಜಿ ಗೌವರ್ನರ್‌ಗಳಾದ ಡಾ. ಟಿ.ಬಸವರಾಜ್, ಡಾ. ಬಿ.ಎಸ್.ನಾಗಪ್ರಕಾಶ್ ಮತ್ತು ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ಅವರು ಲೋಕಾರ್ಪಣೆ ಗೊಳಿಸಿದರು.

ಮಲೇಬೆನ್ನೂರು : ಇಂದು ಶಾಲಾ ವಾರ್ಷಿಕ ಸ್ನೇಹಕೂಟ

ಪಟ್ಟಣದ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 2024-25ನೇ ಸಾಲಿನ ಶಾಲೆಯ ವಾರ್ಷಿಕ ಸ್ನೇಹಕೂಟ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ನಂದಿತಾವರೆ ಪಿಎಸಿಎಸ್ ಅಧ್ಯಕ್ಷರಾಗಿ ಎನ್.ಪಿ. ಶಿವನಗೌಡ

ಮಲೇಬೆನ್ನೂರು : ನಂದಿತಾವರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಪಿ. ಶಿವನಗೌಡ ಮತ್ತು ಉಪಾಧ್ಯಕ್ಷರಾಗಿ ಎ.ಕೆ. ನಾಗಪ್ಪ ಇವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಎನ್‌. ಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ಶಾರದಮ್ಮ ಉಪಾಧ್ಯಕ್ಷರಾಗಿ ರಿಯಾಜ್‌ ಅಹಮದ್‌

ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಬ್ಬಿ ಶಾರದಮ್ಮ ಮತ್ತು ಉಪಾಧ್ಯಕ್ಷರಾಗಿ ರಿಯಾಜ್‌ ಅಹಮದ್‌ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಂಬಳೂರಿನಲ್ಲಿ ಇಂದು ಬೀರಪ್ಪನ ಹೊರಗುಡಿ ಉದ್ಘಾಟನೆ

ಮಲೇಬೆನ್ನೂರು : ಕುಂಬಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರದೇವರ ಹೊರಗುಡಿಯ ಉದ್ಘಾಟನಾ ಕಾರ್ಯಕ್ರಮ ಗಳು ನಾಳೆ ದಿನಾಂಕ 18ರ ಶನಿವಾರ ಮತ್ತು ದಿನಾಂಕ 19ರ ಭಾನುವಾರ ಜರುಗಲಿವೆ.

ಜಿಗಳಿಯಲ್ಲಿ ಸಂಭ್ರಮದ ಮುತ್ತೈದೆ ಹುಣ್ಣಿಮೆ ಮಹೋತ್ಸವ ಸಂಭ್ರಮ

ಮಲೇಬೆನ್ನೂರು : ಜಿಗಳಿ ಗ್ರಾಮದ ಶ್ರೀ ಚಂದ್ರಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಮುತ್ತೈದೆ ಹುಣ್ಣಿಮೆ ಮಹೋತ್ಸವವು ಸಂಭ್ರಮದಿಂದ ಜರುಗಿತು.

ಅಂಬಿಗರ ಶರಣ ಸಂಸ್ಕೃತಿ ಉತ್ಸವಕ್ಕೆ ಮಲೇಬೆನ್ನೂರಿನಿಂದ 2 ಬಸ್

ಮಲೇಬೆನ್ನೂರು : ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಬುಧವಾರ ಜರುಗಿದ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾರಥೋತ್ಸವಕ್ಕೆ ಮಲೇಬೆನ್ನೂರು ಪಟ್ಟಣದಿಂದ 2 ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಜನ ತೆರಳಿದ್ದರು.

error: Content is protected !!